ಲಕ್ಷ್ಮಣಪುರಿ(ಉತ್ತರಪ್ರದೇಶ)ಯಲ್ಲಿನ ಘಟನೆ
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ರಾಜಾಜಿಪುರಂ ವಿಭಾಗದಲ್ಲಿನ ಎಫ್ ಬ್ಲಾಕ ನ ಪರಿಸರದಲ್ಲಿನ ದೇವಸ್ಥಾನದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ನದೀಮಗೆ ದಿಲೀಪ್ ಸಿಂಹ ವಿರೋಧಿಸಿದ್ದರಿಂದ ಇವನ ಮನೆಯ ಮೇಲೆ ಮುಸಲ್ಮಾನರಿಂದ ದಾಳಿ ನಡೆದಿದೆ. ಈ ಹಲ್ಲೆಯಲ್ಲಿ ದಿಲೀಪ ಸಿಂಹ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ.
ದಿಲೀಪ ಸಿಂಹ ಇವನು ನದೀಮಗೆ ಮೂತ್ರ ವಿಸರ್ಜನೆ ಮಾಡಲು ತಡೆದಿದ್ದರಿಂದ ದಿಲೀಪನಿಗೆ ಬೈಗುಳ ನೀಡಿದನು. ಇಬ್ಬರಲ್ಲಿ ಕೆಲವು ಸಮಯ ಮಾತಿನ ಚಕಮಕಿ ನಡೆಯಿತು ಮತ್ತು ನದೀಮ್ ಅಲ್ಲಿಂದ ಹೊರಟು ಹೋಗಿ ಸ್ವಲ್ಪ ಸಮಯದಲ್ಲಿಯೇ ನದೀಮ್ ಅವನ ಸಹಚರರು ಮಹಮ್ಮದ್ ಸಲೀಂ, ಮಹಮ್ಮದ್ ನಫೀಸ್ ಮತ್ತು ಕಲೀಮ್ ಇವರನ್ನು ಕರೆದುಕೊಂಡು ಬಂದು ಕೈಯಲ್ಲಿದ್ದ ಕೋಲುಗಳು ಮತ್ತು ಕಬ್ಬಿಣದ ಸಲಾಕೆಗಳಿಂದ ದಿಲೀಪ ಸಿಂಹನ ಮನೆಗೆ ನುಗ್ಗಿ ಹೊಡೆದರು. ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿರುವುದರಿಂದ ಅವನು ಗಂಭೀರವಾಗಿ ಗಾಯಗೊಂಡನು. ಬಳಿಕ ಮುಸಲ್ಮಾನರು ಓಡಿ ಹೋದರು. ದಿಲೀಪ ಸಿಂಹನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವನು ನೀಡಿರುವ ಮಾಹಿತಿಯಿಂದ ದೂರು ದಾಖಲಿಸಲಾಗಿದೆ. ಅದರ ನಂತರ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರೆಂದು ಕೂಗಾಡುವ ರಾಜಕೀಯ ಪಕ್ಷಗಳು ಇಂತಹ ಘಟನೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ? ದೇವಸ್ಥಾನದ ಸ್ಥಳದಲ್ಲಿ ಇತರ ಧರ್ಮದ ಪ್ರಾರ್ಥನಾ ಸ್ಥಳ ಇದ್ದಿದ್ದರೆ ಮತ್ತು ಬೇರೆ ಧರ್ಮದವರಿಂದ ಈ ರೀತಿಯ ಕೃತ್ಯ ನಡೆದಿದ್ದರೆ, ಆಗಲೇ ದೇಶದಲ್ಲಿ ಗಲಭೆಗಳು ನಡೆಯುತ್ತಿದ್ದವು ಮತ್ತು ಆ ವ್ಯಕ್ತಿಯ ‘ಸರ್ ತನ ಸೇ ಜುದಾ’ (ಶಿರಚ್ಛೇದನ) ಆಗುತ್ತಿತ್ತು ! |