ಪೂಜಾ ಖೇಡ್ಕರ್ ರ ಉಮೇದುವಾರಿಕೆ ರದ್ದು ಮಾಡಿದ ಯು.ಪಿ.ಎಸ್. ಸಿ. !

ಕೇಂದ್ರ ಸರ್ಕಾರದ ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ಯಿಂದ ನೋಟೀಸ್ ‘!

ಪುಣೆ – ತರಬೇತಿ ಹಂತದಲ್ಲಿದ್ದ ವಿವಾದಿತ ಜಿಲ್ಲಾಧಿಕಾರಿ ಪೂಜಾ ಖೇಡ್ಕರ್ ಅವರನ್ನು ಯು. ಪಿ.ಎಸ್.ಸಿ (ಕೇಂದ್ರ ಲೋಕಸೇವಾ ಆಯೋಗ) ತನ್ನ ಅಭ್ಯರ್ಥಿ ಸ್ಥಾನದಿಂದ ವಜಾ ಮಾಡಿದೆ. ಅವರು ಇನ್ನು ಮುಂದೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗುವಂತಿಲ್ಲ ಹಾಗೆಯೇ, ಪೂಜಾ ಖೇಡ್ಕರ್ ಅವರಿಗೆ ಕೇಂದ್ರ ಸರ್ಕಾರದ ‘ಸಿಬ್ಬಂದಿ ಮತ್ತು ತರಬೇತಿ ಇಲಾಖೆ’ ಕಾರಣ ತಿಳಿಸುವಂತೆ ನೋಟೀಸನ್ನು ಜಾರಿಗೊಳಿಸಿದೆ. ಖೇಡ್ಕರ್ ಅವರು ಆಗಸ್ಟ್ 2ರ ಮೊದಲು ಖುದ್ದಾಗಿ ಬಂದು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಲಿಖಿತವಾಗಿ ವಿವರಿಸಬೇಕು ಎಂದು ಆದೇಶ ನೀಡಿದೆ.

ಖೇಡ್ಕರ್ ಅವರು ಪುಣೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿಯಲ್ಲಿದ್ದಾಗ, ಖಾಸಗಿ ಕಾರಿನ ಮೇಲೆ ಕೆಂಪು ದೀಪವನ್ನು ಹಾಕಿದ್ದರು, ಹಾಗೆಯೇ ಕಾರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಂಬ ಫಲಕವನ್ನು ಹಾಕಿದ್ದರು. ಸರ್ಕಾರಿ ಸಭೆಗಾಗಿ ಸ್ವತಂತ್ರ ನಿರ್ಧಾರ ತೆಗೆದುಕೊಂಡರು, ಎಂಬ ದೂರಿನ ವರದಿಯನ್ನು ಜಿಲ್ಲಾಧಿಕಾರಿ ಕಾರ್ಯಾಲಯದ ಅಧಿಕಾರಿಗಳು ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಅವರಿಗೆ ನೀಡಿದ್ದರು. ಜಿಲ್ಲಾಧಿಕಾರಿ ಈ ಪ್ರಕರಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು. ಹಾಗಾಗಿ ಖೇಡ್ಕರ್ ತಮ್ಮ ಮೇಲಿನ ಆರೋಪಗಳ ಬಗ್ಗೆ ಅವರೇ ಖುದ್ದಾಗಿ ಬಂದು ಲಿಖಿತವಾಗಿ ವಿವರಿಸಬೇಕೆಂದು ಈಗ ಈ ಆದೇಶ ನೀಡಲಾಗಿದೆ.