|
(ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ ಶಸ್ತ್ರಗಳನ್ನು ಹೊಂದಿರುವ ಸಿಖ್ ಸೈನಿಕರಿಗೆ ನಿಹಂಗ ಸಿಖ್ ಎಂದು ಹೇಳುತ್ತಾರೆ.)
ತರಣತಾರಣ (ಪಂಜಾಬ) – ತರಣತಾರಣ ಜಿಲ್ಲೆಯಲ್ಲಿ 6 ನಿಹಂಗ ಸಿಖ್ಖರು ಶಮ್ಮಿ ಪುರಿ ಹೆಸರಿನ ಹಿಂದೂ ಅಂಗಡಿಕಾರನ ಮೇಲೆ ಹಾಡುಹಗಲೇ ಖಡ್ಗದಿಂದ ದಾಳಿ ಮಾಡಿ ಹತ್ಯೆ ಮಾಡಿದರು. ಆ ಸಮಯದಲ್ಲಿ ನಿಹಂಗಾಗಳು ಶಮ್ಮಿ ಪುರಿಯ ಸಹೋದರ ಮತ್ತು ಪುತ್ರನ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜುಲೈ 30 ರಂದು ಸಾಯಂಕಾಲ ನಡೆಯಿತು. ಹಣದ ವಿವಾದದಿಂದ ಈ ಹತ್ಯೆ ನಡೆದಿದೆಯೆಂದು ಹೇಳಲಾಗುತ್ತಿದೆ. ಶಮ್ಮಿಯವರಿಗೆ 1 ಕೋಟಿ 75 ಲಕ್ಷ ರೂಪಾಯಿಗಳ ಕಾರಣದಿಂದ ಯಾರೊಂದಿಗೋ ವಿವಾದವಿತ್ತು ಮತ್ತು ನಿಹಂಗ ಶಮ್ಮಿಯವರ ಬಳಿ ಈ ಹಣದ ಬೇಡಿಕೆ ಮಾಡುತ್ತಿದ್ದರು. ಈ ವಿಷಯದಲ್ಲಿ ಶಮ್ಮಿಯವರಿಗೆ ಆಗಾಗ್ಗೆ ದೂರವಾಣಿ ಮೂಲಕ ಬೆದರಿಕೆಗಳು ಬರುತ್ತಿದ್ದವು.
Nihangs in Punjab murder Hindu Shopkeeper outside his home
Son and brother also targeted in fatal attack
Murder allegedly linked to dispute over money
Given the persistent criminal activities by Nihangs, there should be a discussion on whether they should retain the right to… pic.twitter.com/hvl1mdhcKI
— Sanatan Prabhat (@SanatanPrabhat) July 31, 2024
1. 6 ನಿಹಂಗ ಸಿಖ್ಖರು ಒಂದು ಇನ್ನೋವಾದಲ್ಲಿ ಬಂದು ಶಮ್ಮಿ ಪುರಿಯನ್ನು ಮನೆಯಿಂದ ಹೊರಗೆ ಬರುವಂತೆ ಕರೆದರು. ಪುರಿ ಮನೆಯ ಹೊರಗೆ ಬಂದಾಗ ನಿಹಂಗಾಗಳು ಅವರ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದರು. ತದನಂತರ ಖಡ್ಗದಿಂದ ಹಲ್ಲೆ ನಡೆಸಿದ್ದಾರೆ. ಅವರನ್ನು ರಕ್ಷಿಸಲು ಬಂದ ಪುತ್ರ ಕರಣ ಮತ್ತು ಸಹೋದರನ ಮೇಲೆಯೂ ದಾಳಿ ನಡೆಸಿದರು. ಶಮ್ಮಿಯವರ ಮೇಲೆ ಹಲ್ಲೆ ನಡೆದಿರುವ ಮಾಹಿತಿ ಸಿಗುತ್ತಲೇ ಅಕ್ಕಪಕ್ಕದವರು ಹೊರಗೆ ಬಂದಿದ್ದಾರೆ. ತದನಂತರ ನಿಹಂಗರು ಪರಾರಿಯಾಗಲು ಪ್ರಯತ್ನಿಸಿದರು. ನೆರೆಹೊರೆಯವರು ಅವರ ಬೆಂಬೆತ್ತಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.
2. ಈ ಘಟನೆಯ ನಂತರ ಶಮ್ಮಿಯ ಕುಟುಂಬದವರು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಆದಷ್ಟು ಬೇಗನೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು. ಕೊಲೆ ಮಾಡಿದ ನಿಹಂಗಾಗಳನ್ನು ಬಂಧಿಸುವವರೆಗೂ, ಶಮ್ಮಿಯವರ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.
3. ಹಿರಿಯ ಪೊಲೀಸ್ ಅಧೀಕ್ಷಕ ವಿಜಯ ಕಪುರ ಇವರು ಮಾತನಾಡಿ, ಆರೋಪಿಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುನಿಹಂಗಾಗಳಿಂದ ನಿರಂತರವಾಗಿ ಅಪರಾಧ ಕೃತ್ಯಗಳು ನಡೆಯುತ್ತಿರುವುದರಿಂದ, ಅವರಿಗೆ ಈಗ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಹಕ್ಕನ್ನು ಮುಂದುವರಿಸಬೇಕೆ ? ಈ ಕುರಿತು ಚರ್ಚೆ ನಡೆಯಬೇಕು ! |