
ಟೆಲ್ ಅವೀವ್ (ಇಸ್ರೇಲ್) – ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಾನಿಯ ಸಾವಿನ ಬಗ್ಗೆ ಯಾವುದೇ ಸಚಿವರು ಪ್ರತಿಕ್ರಿಯೆ ನೀಡುವುದನ್ನು ನಿಷೇಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅದೇನೇ ಇದ್ದರೂ, ಇಸ್ರೇಲ್ ನಲ್ಲಿ ಸಚಿವರು ಸೇರಿದಂತೆ ಜನಸಾಮಾನ್ಯರು ಹಾನಿಯ ಹತ್ಯೆಯ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ನಡುವೆ ಇಸ್ರೇಲ್ ನ ಸಚಿವರಾದ ಅಮಿಚಾಯ್ ಎಲಿಯಾಹು ಅವರು ಮಾತ್ರ ಹಾನಿಯ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ’ ಎಂದವರು ಹೇಳಿದ್ದಾರೆ.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’