ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆಯೆಂದು ವ್ಯಂಗಚಿತ್ರಕಾರನ ಮೇಲಿನ ಪ್ರಕರಣವನ್ನು ರದ್ದು ಪಡಿಸಿದ ಕೇರಳ ಹೈಕೋರ್ಟ್ !

ರಾಷ್ಟ್ರಧ್ವಜವನ್ನು ಕೇಸರಿ ಬಣ್ಣದ ಬದಲು ಕಪ್ಪು ಬಣ್ಣದಲ್ಲಿ ತೋರಿಸಿದ ವ್ಯಂಗ್ಯಚಿತ್ರ !

ತಿರುವನಂತಪುರಂ (ಕೇರಳ) – ಕೇರಳ ಉಚ್ಚನ್ಯಾಯಾಲಯವು ಓರ್ವ ವ್ಯಂಗಚಿತ್ರಕಾರನ ವಿರುದ್ಧದ ಭಾರತದ ರಾಷ್ಟ್ರಧ್ವಜದ ಅಪಮಾನವನ್ನು ಮಾಡಿರುವ ಪ್ರಕರಣವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಹೇಳುತ್ತಾ ರದ್ದುಗೊಳಿಸಿತು.

`ಮಲಯಾಳಂ ಮನೋರಮಾ’ ಈ ನಿಯತಕಾಲಿಕೆಯು 70ನೇ ಸ್ವಾತಂತ್ರ್ಯದಿನದಂದು ಮ. ಗಾಂಧಿ ಮತ್ತು ಭಾರತದ ಧ್ವಜದ ವ್ಯಂಗಚಿತ್ರವನ್ನು ಪ್ರಕಟಿಸಿತ್ತು. ಇದರಲ್ಲಿ ಕೇಸರಿ ಬಣ್ಣದ ಬದಲು ಕಪ್ಪು ಬಣ್ಣದಲ್ಲಿ ತೋರಿಸಿತ್ತು. ಇದನ್ನು ವಿರೋಧಿಸಿ ಭಾಜಪ ಪ್ರದೇಶ ಸಮಿತಿಯ ಕಾರ್ಯದರ್ಶಿ ಅರ್ಜಿ ದಾಖಲಿಸಿದ್ದರು.

ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಇವರು ವಿಚಾರಣೆ ಸಮಯದಲ್ಲಿ,

1. ವ್ಯಂಗ್ಯಚಿತ್ರಕಾರರ ಸಣ್ಣ ರೇಖಾಚಿತ್ರ ಒಂದು ಶಕ್ತಿಯುತ ದೃಶ್ಯ ಮೂಡಿರುತ್ತದೆ, ಅವು ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಮತ್ತು ಪ್ರೇರೇಪಿಸುತ್ತವೆ.

2. ವ್ಯಂಗ್ಯಚಿತ್ರಕಾರರೂ ಪ್ರಸಾರ ಮಾಧ್ಯಮದ ಒಂದು ಭಾಗವಾಗಿದ್ದಾರೆ. ಅವರಿಗೂ ಭಾರತೀಯ ಸಂವಿಧಾನದ ಆರ್ಟಿಕಲ್ 19 (1) (ಎ) ಅನ್ವಯ ಅಭಿವ್ಯಕ್ತಿಸ್ವಾತಂತ್ರ್ಯದ ಅಧಿಕಾರವಿದೆ. ಈ ಮೂಲಭೂತ ಹಕ್ಕಿನ ಮೂಲಕ ಅವರು ವ್ಯಂಗ್ಯಚಿತ್ರಗಳು ಮತ್ತು ಸ್ವರೂಪಗಳ ಮೂಲಕ ತಮ್ಮ ಅಭಿಪ್ರಾಯ, ಕಲ್ಪನೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುತ್ತಾರೆ.

3. ಆದಾಗ್ಯೂ, ಈ ಸ್ವಾತಂತ್ರ್ಯವು ಸಂವಿಧಾನದ ಕಲಂ 19 (2) ರ ಅಡಿಯಲ್ಲಿ ಕೆಲವು ನಿರ್ಬಂಧಗಳಿಗೆ ಒಳಪಟ್ಟಿದ್ದು, ಅದರಲ್ಲಿ ದೇಶದ ಏಕತೆ ಮತ್ತು ಸಮಗ್ರತೆಗೆ ಹಾನಿಕಾರಕ ಪರಿಣಾಮ ಬೀರಬಾರದು ಇರುತ್ತದೆ. ಒಬ್ಬ ವ್ಯಂಗ್ಯಚಿತ್ರಕಾರನಿಗೆ ಚಿಕ್ಕ ವ್ಯಂಗ್ಯಚಿತ್ರಗಳ ಮೂಲಕ ಅನೇಕ ವಿಷಯಗಳನ್ನು ತಿಳಿಸುವ ಶಕ್ತಿ ಇರುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

* ಭಾರತ ಮತ್ತು ಹಿಂದೂ ವಿರೋಧಿ ಜನರು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ಹೆಚ್ಚು ಪಡೆದುಕೊಳ್ಳುತ್ತಾರೆ ಎನ್ನುವುದು ಯಾವಾಗಲೂ ಕಂಡುಬರುತ್ತದೆ ! ಈ ವಿಷಯವನ್ನು ಈಗ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ !