ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರ ಮಾಹಿತಿ ಸಂಗ್ರಹಿಸಲು ಸಮಿತಿ ಸ್ಥಾಪನೆ !

ಜಾರ್ಖಂಡ್ ಉಚ್ಚ ನ್ಯಾಯಾಲಯ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡ ಜಾರ್ಖಂಡ್ ಸರಕಾರ !

ರಾಂಚಿ (ಜಾರ್ಖಂಡ್) – ಜಾರ್ಖಂಡ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದಲ್ಲಿನ ಸಂಥಾಲ ಪರಗಣಾದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಮೀಕ್ಷೆ ನಡೆಸಲು ಇಲ್ಲಿಯ ಸಾಹಿಬಗಂಜ ಜಿಲ್ಲೆಯ ಉಪಾಯುಕ್ತರ ಒಂದು ಸಮಿತಿ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಸಮಾವೇಶವಿದೆ. ನ್ಯಾಯಾಲಯವು ಸಂಥಾಲ ಪರಗಣಾದ ಇತರ ಜಿಲ್ಲೆಗಳಲ್ಲಿ ಕೂಡ ಈ ಸಮಿತಿ ಸ್ಥಾಪನೆ ಮಾಡುವ ಆದೇಶ ನೀಡಿದೆ. ಸಂಥಾಲ ಪರಗಣಾ ಜಿಲ್ಲೆಯ ಗಡಿ ಬಂಗಾಲ್‌ಗೆ ಅಂಟಿಕೊಂಡಿದೆ. ನುಸುಳುಕೋರರು ಬಾಂಗ್ಲಾದೇಶದಿಂದ ಬಂಗಾಲಕ್ಕೆ ಬರುತ್ತಾರೆ ಮತ್ತು ಅಲ್ಲಿಂದ ಅವರು ಜಾರ್ಖಂಡ್ ದಲ್ಲಿ ಹಬ್ಬುತ್ತಾರೆ.

೧. ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಎರಡು ವಾರಗಳಲ್ಲಿ ರಾಜ್ಯದಲ್ಲಿ ನುಸುಳುಕೋರರ ಶೋಧ ನಡೆಸಲು, ಅವರ ಗುರುತು ಪತ್ತೆ ಹಚ್ಚಲು ಮತ್ತು ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ, ಅದರ ವರದಿ ಪ್ರಸ್ತುತಪಡಿಸಲು ಆದೇಶ ನೀಡಿದೆ. ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರದಿಂದ ವರದಿ ಕೂಡ ತರಿಸಿಕೊಂಡಿತ್ತು. ಇದಲ್ಲದೆ ಸಂಥಾಲ ಪರಗಣಾದಲ್ಲಿನ ಎಲ್ಲಾ ಜಿಲ್ಲಾಧಿಕಾರಿಗಳು ಸಮನ್ವಯ ನಡೆಸಿ ಬಾಂಗ್ಲಾದೇಶಿ ನುಸುಳುಕೋರರ ವಿಚಾರಣೆ ನಡೆಸಬೇಕೆಂದು ಉಚ್ಚ ನ್ಯಾಯಾಲಯ ಆದೇಶ ನೀಡಿತ್ತು.

೨. ಡ್ಯಾನಿಯಲ್ ದಾನಿಶ ಇವರ ಅರ್ಜಿಯ ಕುರಿತು ನ್ಯಾಯಾಲಯವು ಈ ಆದೇಶ ನೀಡಿದೆ. ಈ ಅರ್ಜಿಯಲ್ಲಿ, ಬಂಗಾಲಕ್ಕೆ ಅಂಟಿಕೊಂಡಿರುವ ಸಂಥಾಲ ಪರಗಣಾ ಜಿಲ್ಲೆಯಲ್ಲಿ ಬಾಂಗ್ಲಾದೇಶದಲ್ಲಿನ ನಿಷೇಧಿತ ಸಂಘಟನೆಯ ಯುವಕರು ಜಾರ್ಖಂಡದಲ್ಲಿನ ಆದಿವಾಸಿ ಹುಡುಗಿಯರ ಜೊತೆಗೆ ಸಂಚುರೂಪಿಸಿ ವಿವಾಹ ಮಾಡಿಕೊಂಡು ಅವರನ್ನು ಮತಾಂತರಗೊಳಿಸುತ್ತಾರೆ. ಹೊಸದಾಗಿ ಮದರಸಗಳು ಕೂಡ ಆರಂಭವಾಗುತ್ತಿವೆ. ಸಂಥಾಲ ಪರಗಣಾದಲ್ಲಿ ಗೊಡ್ಡಾ, ದೇವಘರ, ದುಮಕಾ, ಜಾಮತಾರಾ, ಸಾಹಿಬಗಂಜ ಮತ್ತು ಪಾಕೂರ್ ಈ ಜಿಲ್ಲೆಗಳ ಸಮಾವೇಶವಿದೆ.

೩. ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆ ಕೇವಲ ಬುಡಕಟ್ಟು ಜನಾಂಗದ ಯುವತಿಯರ ಜೊತೆಗೆ ವಿವಾಹ ಮಾಡಿಕೊಂಡು ಭೂಮಿಯನ್ನು ಕಬಳಿಸುವುದರ ಮಟ್ಟಿಗೆ ಸೀಮಿತವಾಗಿಲ್ಲ, ಅವರ ಸಂಬಂಧ ಲೋಕಸಭೆ ಚುನಾವಣೆಯೊಂದಿಗೂ ಇದೆ. ಇತ್ತೀಚೆಗೆ ಭಾಜಪದ ವರದಿಯಲ್ಲಿ, ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಮತದಾರರ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಶೇ. ೨೦ ರಿಂದ ೧೨೩ ರ ವರೆಗೆ ಅನಿರೀಕ್ಷಿತ ಹೆಚ್ಚಳವಾಗಿದೆ. ೧೦ ವಿಧಾನ ಸಭೆಯ ಒಟ್ಟು ೧ ಸಾವಿರದ ೪೬೭ ಮತದಾನ ಕೇಂದ್ರದಲ್ಲಿ ಈ ಹೆಚ್ಚಳವಾಗಿದೆ. ಸಾಮಾನ್ಯವಾಗಿ ೫ ವರ್ಷದಲ್ಲಿ ಶೇ. ೧೫ ರಿಂದ ೧೭ ರಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಈಗಿನ ಹೆಚ್ಚಳ ಅಸಾಮಾನ್ಯವಾಗಿದೆ. ಹಿಂದೂ ಜನಸಂಖ್ಯಾತ ಮತದಾನ ಕೇಂದ್ರದಲ್ಲಿ ಮತದಾರರ ಸಂಖ್ಯೆ ಕೇವಲ ಶೇ. ೮ ರಿಂದ ೧೦ ರಷ್ಟು ಹೆಚ್ಚಾಗಿದೆ. ಅನೇಕ ಕೇಂದ್ರದಲ್ಲಿ ಹಿಂದೂ ಮತದಾರರ ಸಂಖ್ಯೆ ಕಡಿಮೆ ಆಗಿದೆ.

೪. ಈ ಹಿಂದೆ ಮಾರ್ಚ್ ೨೦೨೪ ರಲ್ಲಿ ‘ಆಜ ತಕ’ ವಾರ್ತಾ ವಾಹಿನಿಯ ವಾರ್ತೆಯಲ್ಲಿ, ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರು ಬಂಗಾಳ ಮಾರ್ಗವಾಗಿ ಇಲ್ಲಿಗೆ ಬರುತ್ತಾರೆ. ಅದರ ನಂತರ ಅವರು ಇಲ್ಲೇ ವಾಸಿಸುತ್ತಾರೆ. ಇದರಲ್ಲಿನ ಕೆಲವು ಜನರು ಬುಡಕಟ್ಟು ಜನಾಂಗದ ಹುಡುಗಿಯರನ್ನು ಗುರಿ ಮಾಡುತ್ತಾರೆ. ಯಾವಾಗ ಹುಡುಗಿ ಅವರ ಕಡೆಗೆ ಆಕರ್ಷಿತವಾಗುತ್ತಾರೆ, ಆಗ ಅವರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾರೆ. ದಾಖಲೆಗಳಲ್ಲಿ ಬುಡಕಟ್ಟು ಜನಾಂಗವೆಂದೇ ಗುರುತು ಇರುತ್ತದೆ. ಅದರ ನಂತರ ಆ ಹುಡುಗಿಯ ಹೆಸರಿನಲ್ಲಿ ಭೂಮಿ ಖರೀದಿಸುತ್ತಾರೆ ಅಥವಾ ಅವರ ಸ್ವಂತ ಭೂಮಿಯನ್ನು ಕಬಳಿಸುತ್ತಾರೆ. ಇದೆಲ್ಲಾ ಮಾಡುವುದಕ್ಕಾಗಿ ಬಾಂಗ್ಲಾದೇಶದಿಂದ ಬರುವ ನುಸುಳುಕೋರರಿಗೆ ನಿಧಿ ಸಿಗುತ್ತದೆ. ಹುಡುಗಿಯ ಪರಿಚಯ ಬುಡಕಟ್ಟು ಜನಾಂಗ ಎಂದು ಇರಿಸುವ ಹಿಂದಿನ ಉದ್ದೇಶ ಸರಕಾರಿ ಲಾಭ ದೊರೆಯಬೇಕು ಇದಾಗಿದೆ. ಇದಲ್ಲದೆ ಅನೇಕ ಸ್ಥಳದಲ್ಲಿ ಮುಸಲ್ಮಾನರ ಜೊತೆ ವಿವಾಹ ಮಾಡಿಕೊಳ್ಳುವ ಯುವತಿಯರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅಲ್ಲಿ ನುಸುಳುಕೋರ ಬಾಂಗ್ಲಾದೇಶಿ ಇಲ್ಲಿಯ ಗಣಿಯಲ್ಲಿ ಕೆಲಸ ಮಾಡುತ್ತಾರೆ. ಬಾಂಗ್ಲಾದೇಶಿ ನುಸುಳುಕೋರರು ಜಾರ್ಖಂಡದಲ್ಲಿ ಪ್ರವೇಶ ಮಾಡುತ್ತಲೇ ಅವರಿಗೆ ನಕಲಿ ಗುರುತಿನ ಚೀಟಿ ಕೂಡ ದೊರೆಯುತ್ತದೆ. ಇಲ್ಲಿ ಮೊದಲೇ ಸ್ಥಳಿಯರಾಗಿರುವ ಬಾಂಗ್ಲಾದೇಶಿ ನುಸುಳುಕೋರರು ಅವರಿಗೆ ಸಹಾಯ ಮಾಡುತ್ತಾರೆ.

ಸಂಪಾದಕೀಯ ನಿಲುವು

* ಕೇವಲ ಜಾರ್ಖಂಡದಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ದೇಶದಲ್ಲಿ ಹೆಚ್ಚುತ್ತಿರುವ ನುಸುಳುಕೋರ ಮುಸಲ್ಮಾನರ ಮಾಹಿತಿ ಸಂಗ್ರಹಿಸುವುದಕ್ಕಾಗಿ ತಂಡದ ಸ್ಥಾಪನೆ ಆಗುವುದು ಆವಶ್ಯಕವಾಗಿದೆ ಹಾಗೂ ಅವರ ಮಾಹಿತಿ ಪಡೆದು ಅವರನ್ನು ದೇಶದಿಂದ ಹೊರಗೆ ಅಟ್ಟುವುದಕ್ಕಾಗಿ ಸಮರೋಪಾದಿಯಲ್ಲಿ ಪ್ರಯತ್ನವಾಗಬೇಕು !