ನಾಲಾಸೋಪಾರದಲ್ಲಿ ಹೇಳಿಕೆಯ ಸ್ಫೋಟಕಗಳನ್ನು ಹೊಂದಿರುವ ಪ್ರಕರಣದಲ್ಲಿನ ಇನ್ನೂ ೫ ಜನರಿಗೆ ಜಾಮೀನು !

ಮುಂಬೈ – ನಾಲಾಸೋಪಾರದಲ್ಲಿ ಹೇಳಿಕೆಯ ಸ್ಫೋಟಕಗಳನ್ನು ಹೊಂದಿರುವ ಪ್ರಕರಣದಲ್ಲಿ ಮುಂಬೈ ಉಚ್ಚ ನ್ಯಾಯಾಲಯವು ಜುಲೈ ೩೦ರಂದು ಸಂಶಯಿತರಾದ ಶ್ರೀಕಾಂತ ಪಂಗಾರಕರ, ಅಮಿತ ಬದ್ದಿ, ಗಣೇಶ ಮಸ್ಕೀನ, ಸುಜೀತ ರಂಗಾಸ್ವಾಮಿ ಹಾಗೂ ಭರತ ಕುರಣೆ ಈ ೫ ಜನರಿಗೆ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿನ ಸಂಶಯಿತರಾದ ಅವಿನಾಶ ಪವಾರರವರಿಗೆ ಆಗಸ್ಟ್ ೨೦೨೨ರಲ್ಲಿ, ಲೀಲಾಧರ ಲೋಧಿ, ಹಾಗೂ ಪ್ರತಾಪ ಹಾಜರಾರವರಿಗೆ ಮಾರ್ಚ್ ೨೦೨೩ರಲ್ಲಿ, ವೈಭವ ರಾವುತರವರಿಗೆ ಸಪ್ಟೆಂಬರ್ ೨೦೨೩ರಲ್ಲಿ ಉಚ್ಚ ನ್ಯಾಯಾಲಯವು ಜಾಮೀನು ನೀಡಿತ್ತು. ೨೦೧೮ರಲ್ಲಿ ಭಯೋತ್ಪಾದನಾ ವಿರೋಧಿ ದಳವು ಹೇಳಿಕೆಯ ಸ್ಫೋಟಕಗಳನ್ನು ಹೊಂದಿರುವ ಪ್ರಕರಣದಲ್ಲಿ ವೈಭವ ರಾವುತರವರನ್ನು ಬಂಧಿಸಿತ್ತು. ಈ ಸಮಯದಲ್ಲಿ ಭಯೋತ್ಪಾದನಾ ವಿರೋಧಿ ದಳವು ಸ್ಫೋಟಕಗಳನ್ನು ಜಪ್ತು ಮಾಡಿರುವುದಾಗಿ ಹೇಳಿಕೆ ನೀಡಿದ್ದರೂ ಪ್ರತ್ಯಕ್ಷವಾಗಿ ಈ ಶಸ್ತ್ರಗಳನ್ನು ತೋರಿಸಲಾಗಿಲ್ಲ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದು ಮೇಲಿನ ಸಂಚು ರೂಪಿಸಿರುವ ಆರೋಪದಲ್ಲಿ ಈ ಎಲ್ಲರನ್ನೂ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿನ ೪ ಸಂಶಯಿತರು ಇಂದಿಗೂ ಜೈಲಿನಲ್ಲಿದ್ದಾರೆ.