ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ತೊಲಗುವಂತೆ ಹಿಂದೂಗಳಿಗೆ ಒತ್ತಡ; ದೂರು ನೀಡಿದರೂ ಪೊಲೀಸರು ನಿಷ್ಕ್ರೀಯ !

ಸಂತ್ರಸ್ತ ಹಿಂದೂ ಮಹಿಳೆ ತನ್ನ ಅಳಲನ್ನು ತೋಡಿಕೊಂಡಿರುವ ವಿಡಿಯೋ ವೈರಲ್ !

ಮುಂಬಯಿ – ಮಲಾಡ್ (ಪಶ್ಚಿಮ) ಪ್ರದೇಶದ ಮುಸ್ಲಿಂ ಬಹುಸಂಖ್ಯಾತ ಮಾಲ್ವಾನಿ ಪ್ರದೇಶದಿಂದ ಹಿಂದೂಗಳಿಗೆ ಓಡಿಹೋಗುವಂತೆ ಒತ್ತಡ ಹೇರಲಾಗುತ್ತಿದೆ. ಮಾಲವಾಣಿಯಲ್ಲಿ ಹಿಂದೂಗಳನ್ನು ಗುರಿ ಮಾಡಲಾಗುತ್ತದೆ. ಎಂದು ಅಮ್ರಪಾಲಿ ಶರ್ಮಾ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮ್ರಪಾಲಿ ಶರ್ಮಾ ಹೇಳಿದ್ದಾರೆ.

ಆಮ್ರಪಾಲಿ ಶರ್ಮಾ ಅವರು, “ಮಾಲ್ವಾನಿಯಲ್ಲಿರುವ ಫ್ಲಾಟ್ ಬಿಡುವಂತೆ ನನಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಮತ್ತು ಒತ್ತಡ ಹೇರಲಾಗುತ್ತಿದೆ. ನನ್ನ ಅಪಾರ್ಟ್ಮೆಂಟ್ ಬಾಗಿಲಿನ ಮುಂದೆ ಮಾಂಸಗಳನ್ನು ಎಸೆಯಲಾಯಿತು. ನಾನು ದೂರು ನೀಡಲು ಪೊಲೀಸ್ ಠಾಣೆಗೆ ಹೋದೆ; ಆದರೆ ದೂರು ದಾಖಲಾಗಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಮುಸ್ಲಿಮರ ಸಂಕಟದಿಂದ ಬೇಸತ್ತು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ; ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಕ್ರಿ ಈದ್‌ನಂದು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳನ್ನು ಕಡಿಯಲಾಯಿತು. ನನಗೆ ತೊಂದರೆ ಕೊಡಲು ಮುಸ್ಲಿಮರು ಬಂದು ನನ್ನ ಫ್ಲಾಟ್‌ನ ಬಾಗಿಲಿಗೆ ಗಲಭೆ ಮಾಡುತ್ತಾರೆ. ಅವರ ಮನೆ ಬಾಗಿಲಿಗೆ ಯಾರಾದರೂ ಗಲಭೆ ಮಾಡಿದರೆ, ಅವರು ‘ಅಲ್ಪಸಂಖ್ಯಾತರಿಗೆ ಅಪಾಯ’ ಎಂದು ಕೂಗುತ್ತಾರೆ. ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಇದ್ದುಕೊಂಡು ತಪ್ಪು ಮಾಡುತ್ತಿದ್ದೀರಿ’, ಎಂದು ಕೆಲವರು ಹೇಳಿದ್ದರು. ಈ ದೇಶವು ಜಾತ್ಯತೀತವಾಗಿದೆ, ಹಾಗಾದರೆ ನಾನು ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಓಡಿಹೋಗುವಂತೆ ಹೇಗೆ ಒತ್ತಾಯಿಸಬಹುದು ? ಜಾತ್ಯತೀತ ದೇಶದಲ್ಲಿ ಹಿಂದೂಗಳಿಗೆ ಸ್ಥಾನವಿಲ್ಲವೇ? ಮುಂದೆ ನನಗೇನಾದರೂ ಆದರೆ ಅದಕ್ಕೆ ಇಲ್ಲಿನ ಮತಾಂಧ ಮುಸ್ಲಿಮರೇ ಕಾರಣ.” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳೇ, ನೀವು ಕಾಶ್ಮೀರದಿಂದ ಪಲಾಯನಗೈದಿದ್ದೀರಿ. ಮುಂದೆ, ದೇಶದ ವಿವಿಧ ಭಾಗಗಳಿಂದ ಪಲಾಯನಗೈಯ್ಯುವ ಸಮಯ ಬಂದರೆ, ನೀವು ಭಾರತ ಬಿಟ್ಟು ಎಲ್ಲಿ ಹೋಗುವಿರಿ ?, ಯಾವ ದೇಶವು ನಿಮಗೆ ಆಶ್ರಯ ನೀಡುತ್ತದೆ ?, ಯೋಚಿಸಿ ! ಹೀಗಾಗಬಾರದು ಎಂದು ನೀವು ಬಯಸಿದರೆ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಈಗಲೇ ಸಂಘಟಿತರಾಗಿ!

ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು!