ಹಿಂದೂ ಮಕ್ಕಳನ್ನು ಮತಾಂತರಿಸುತ್ತಿದ್ದ ಮೂವರು ಮತಾಂಧ ಕ್ರೈಸ್ತರ ಬಂಧನ !

ಬರೇಲಿ (ಉತ್ತರ ಪ್ರದೇಶ) – ಬರೇಲಿಯಲ್ಲಿ ಹಿಂದೂ ಮಕ್ಕಳಿಗೆ ಆಮಿಷ ಒಡ್ಡಿ ಅವರನ್ನು ಮತಾಂತರಿಸುತ್ತಿದ್ದ ಮೂವರು ಕ್ರೈಸ್ತರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಅವರ ಹೆಸರು ಪ್ರೇಮ ಜಯಲ, ವಿನೋದ ಉಪಾಧ್ಯಾಯ ಮತ್ತು ನಿತಿನ ಆಗಿದೆ. ಈ ಮೂವರು ಆರೋಪಿಗಳು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿಗಳು ಹಿಂದೂ ಮಕ್ಕಳಿಗೆ ಓಲೈಸಿ ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಹೊರಗಿನಿಂದ ಹಣ ಸಿಗುತ್ತಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

1. ಆರೋಪಿಗಳು ಹಿಂದೂ ಮಕ್ಕಳನ್ನು ಮನೆಗೆ ಕರೆಸಿ ಕ್ರೈಸ್ತ ಧರ್ಮದ ಬೋಧನೆ ಮಾಡುತ್ತಿದ್ದರು, ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡುತ್ತಿದ್ದರು. ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ‘ಎಥಿಕ್ಸ್’ ಎಂಬ ಪುಸ್ತಕವನ್ನು ಓದುವಂತೆ ಮಕ್ಕಳನ್ನು ಒತ್ತಾಯಿಸುತ್ತಿದ್ದರು.

2. ಆರೋಪಿಯ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಸಾಕಷ್ಟು ಮಕ್ಕಳು ಕಂಡು ಬಂದಿದೆ. ಈ ವೇಳೆ ಪೊಲೀಸರು ಮೇಲಿನ ಮೂವರು ಆರೋಪಿಗಳನ್ನು ಬಂಧಿಸಿ ಸಂತ್ರಸ್ತ ಮಕ್ಕಳನ್ನು ಅವರ ಮನೆಗೆ ತಲುಪಿಸಿದ್ದಾರೆ.

3. ಮೂಲತಃ ಹಿಂದೂಗಳಾಗಿರುವ ಆರೋಪಿಗಳು ಕ್ರೈಸ್ತ ಧರ್ಮ ಸ್ವೀಕರಿಸಿದ್ದರು ಮತ್ತು ಈಗ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿದ್ದರು. ಈ ಮೂವರೂ ಹಲವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಮುಖ್ಯವಾಗಿ ಚಿಕ್ಕಮಕ್ಕಳು ಮತ್ತು ಮಹಿಳೆಯರನ್ನು ತಮ್ಮ ಪ್ರಾರ್ಥನಾ ಸಭೆಗಳಿಗೆ ಆಹ್ವಾನಿಸುತ್ತಿದ್ದರು ಮತ್ತು ಅವರಿಗೆ ಆಹಾರ ನೀಡುವ ಮೂಲಕ ಮತಾಂತರಿಸುತ್ತಿದ್ದರು.

4. ಪೊಲೀಸರು ಆರೋಪಿಗಳ ವಿರುದ್ಧ ಬಲವಂತದ ಮತಾಂತರ ಪ್ರಕರಣದಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿಂದೂ ಸಂಘಟನೆಗಳೂ ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಸಂಪಾದಕೀಯ ನಿಲುವು

‘ಒಬ್ಬ ಹಿಂದೂ ವ್ಯಕ್ತಿ ಮತಾಂತರಗೊಂಡರೆ ಒಬ್ಬ ಹಿಂದೂ ಮಾತ್ರ ಕಡಿಮೆಯಾಗುವುದಿಲ್ಲ, ಒಬ್ಬ ಶತ್ರು ಹೆಚ್ಚಾಗುತ್ತಾನೆ ಎನ್ನುವ ಪ್ರಚೀತಿಯನ್ನು ನೀಡುವ ಘಟನೆಯಾಗಿದೆ. ‘ಮತಾಂತರಗೊಂಡ ಹಿಂದೂಗಳು ಹೆಚ್ಚು ಅಪಾಯಕಾರಿ ಇರುತ್ತಾರೆ ಮತ್ತು ಅವರು ಹಿಂದೂ ಧರ್ಮದ ಬುಡಕ್ಕೇ ಪೆಟ್ಟು ನೀಡಲು ಹೊಂಚು ಹಾಕುತ್ತಿರುತ್ತಾರೆ.’ ಎಂದು ಇದರಿಂದ ತಿಳಿಯಬಹುದು !