ಯಶಶ್ರೀ ಶಿಂದೆಯನ್ನು ಬರ್ಬರವಾಗಿ ಕೊಂದ ದಾವೂದ್ ಶೇಖ್ ಕರ್ನಾಟಕದಲ್ಲಿ ಬಂಧನ !

ಉರಣ (ರಾಯಗಡ ಜಿಲ್ಲೆ) – ಯಶಶ್ರೀ ಶಿಂದೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ದಾವೂದ್ ಶೇಖ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಮೊಹ್ಸಿನ್ ಎಂಬ ಮತ್ತೊಬ್ಬ ಯುವಕನನ್ನು ಕೂಡ ಬಂಧಿಸಲಾಗಿದೆ. ನವಿ ಮುಂಬಯಿ ಪೊಲೀಸರ 7 ತಂಡಗಳು ದಾವೂದ್‌ಗಾಗಿ ಹುಡುಕಾಟ ನಡೆಸಿದ್ದವು. ಯಶಶ್ರೀ ಹತ್ಯೆಯಾದಾಗಿನಿಂದಲೂ ದಾವೂದ್ ಶೇಖ್ ಪರಾರಿಯಾಗಿದ್ದ. ಅವನು ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ.

ಯಶಶ್ರೀ ಶಿಂದೆ ಹತ್ಯೆಗೂ ಮುನ್ನ ಆಕೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ. ಅದರಲ್ಲಿ ಯಶಶ್ರೀ ಶಿಂದೆ ಕೈಯಲ್ಲಿ ಕಪ್ಪು ಛತ್ರಿ ಹಿಡಿದು ಹೋಗುತ್ತಿರುವುದು ಕಾಣಿಸುತ್ತಿದೆ. ಆಕೆಯ ಹಿಂದೆ ದಾವೂದ್ ಶೇಖ್ ಕೇವಲ 10 ನಿಮಿಷ ಹಿಂಬಾಲಿಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಶಶ್ರೀಯನ್ನು ಬರ್ಬರವಾಗಿ ಕೊಲ್ಲಲಾಯಿತು !

ಯಶಶ್ರೀ ಶಿಂದೆಯ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದೆ. ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವರದಿ ಪ್ರಕಾರ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ. ದಾವೂದ್ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಇರಿದಿದ್ದಾನೆ. ಅವಳ ಖಾಸಗಿ ಭಾಗದ ಮೇಲೆ ಇರಿದಿದ್ದಾನೆ ಮತ್ತು ಅವಳ ಸ್ತನವನ್ನು ಕತ್ತರಿಸಿದ್ದಾನೆ.

ಪ್ರೀತಿಗೆ ನಿರಾಕರಿಸಿದ್ದಕ್ಕೆ ದಾವೂದ್ ನಿಂದ ಕೊಲೆ ಪೊಲೀಸರಿಂದ ಮಾಹಿತಿ !

‘ಫ್ರೀ ಪ್ರೆಸ್ ಜರ್ನಲ್’ ನೀಡಿರುವ ವರದಿಯಲ್ಲಿ ಪೊಲೀಸರು, ‘ದಾವುದ್ ಮತ್ತು ಯಶಶ್ರೀ ನಡುವೆ ಮೊದಲು ಪ್ರೇಮ ಸಂಬಂಧವಿತ್ತು; ಆದರೆ ಯಶಶ್ರೀ ಮತ್ತೊಬ್ಬ ಹುಡುಗನ ಸಂಪರ್ಕಕ್ಕೆ ಬಂದ ನಂತರ ದಾವೂದ್ ಆತನ ಮೇಲೆ ಕೋಪಗೊಂಡಿದ್ದ. ಈ ಕಾರಣದಿಂದ ಆತ ಆಕೆಯನ್ನು ಕೊಂದಿದ್ದಾನೆ” ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ, “ದಾವೂದ್ ಶೇಖ್ ಜುಲೈ 22 ರಂದು ಉರಣಗೆ ಬಂದಿದ್ದ ಮತ್ತು ಜುಲೈ 25 ರಿಂದ ಅವನ ಫೋನ್ ಸ್ವಿಚ್ ಆಫ್ ಆಗಿತ್ತು” ಎಂದು ಪೊಲೀಸರು ಹೇಳಿದರು, “ಅವನ ಸಾಮಾಜಿಕ ಮಾಧ್ಯಮವೂ ಅವನು ಖಿನ್ನತೆಗೆ ಒಳಗಾಗಿದ್ದಾನೆಂದು ತೋರಿಸುತ್ತದೆ.”

‘ದಾವೂದ್ ಶೇಖ್ ಹಲವು ದಿನಗಳಿಂದ ಉರಣನಲ್ಲಿ ನೆಲೆಸಿದ್ದ. ಅವನು ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಕರ್ನಾಟಕದಲ್ಲಿ ವಾಸಿಸುತ್ತಿದ್ದ. ಅಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅವನು 1-2 ಸ್ಥಳಗಳಲ್ಲಿ ಕೆಲಸ ಬದಲಾಯಿಸಿದ. ಆತನ ಬಗ್ಗೆ ಇತರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.