India Maldives China Relations : ಭಾರತ ಮತ್ತು ಚೀನಾ ಮಾಲ್ಡೀವ್ ನ ಸಾಲ ತೀರಿಸಲು ಸಹಾಯ ಮಾಡಿದ್ದಾರೆ ! – ರಾಷ್ಟ್ರಪತಿ ಮುಯಿಜ್ಜೂ

ರಾಷ್ಟ್ರಪತಿ ಮುಯಿಜ್ಜೂ

ಮಾಲೆ (ಮಾಲ್ಡೀವ್) – ಭಾರತ ಮತ್ತು ಚೀನಾ ಇವೆರಡು ದೇಶಗಳು ಮಾಲ್ಡೀವ್ ನ ಸಾಲ ತೀರಿಸಲು ನಮಗೆ ಸಹಾಯ ಮಾಡಿದ್ದಾರೆ ಎಂದು ಮಾಲ್ಡೀವ್ ರಾಷ್ಟ್ರಾಧ್ಯಕ್ಷ ಮಹಮ್ಮದ್ ಮುಯಿಜ್ಜೂ ಹೇಳಿದ್ದಾರೆ. ಮಾಲ್ಡೀವ್ ಸ್ವಾತಂತ್ರ್ಯ ದಿನದ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಭಾರತವು ‘ನೆರೆಯ ದೇಶಗಳಿಗೆ ಮೊದಲ ಪ್ರಾಧಾನ್ಯತೆ’ ಈ ನೀತಿಯ ಅಂತರ್ಗತ ಮಾಲ್ಡೀವ್ ಗೆ ೪೦೦ ಕೋಟಿ ರೂಪಾಯಿ ಧನ ಸಹಾಯ ಮಾಡಿದೆ. ಅದಕ್ಕಾಗಿ ಮಾಲ್ಡೀವ್ ಭಾರತಕ್ಕೆ ಧನ್ಯವಾದ ತಿಳಿಸುತ್ತೇವೆ. ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಮಾಲ್ಡೀವ್ ಗೆ ಎಚ್ಚರಿಕೆ ನೀಡಿ, ತನ್ನ ಆರ್ಥಿಕ ನೀತಿಯಲ್ಲಿ ಬದಲಾವಣೆ ಮಾಡದಿದ್ದರೆ ಮಾಲ್ಡೀವ್ ಗೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಿತ್ತು.

ಮಾಲ್ಡೀವ್ ಪ್ರವಾಸೋದ್ಯಮ ಸಚಿವರಿಂದ ಭಾರತದಲ್ಲಿ ರೋಡ್ ಶೋ !

ಜನವರಿ ೨೦೨೪ ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆಯ ನಂತರ ಮಾಲ್ಡೀವ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿತ ಕಂಡು ಬಂದಿದೆ.

ಉಭಯ ದೇಶಗಳ ನಡುವಿನ ಒತ್ತಡದ ವಾತಾವರಣವನ್ನು ದೂರ ಮಾಡುವುದಕ್ಕಾಗಿ ಮಾಲ್ಡೀವ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ಫೈಸಲ್ ಅವರು ಭಾರತ ಪ್ರವಾಸ ಮಾಡಲಿದ್ದು ಭಾರತೀಯ ಪ್ರಯಾಣಿಕರನ್ನು ಆಕರ್ಷಿಸುವುದಕ್ಕಾಗಿ ಅವರು ನವದೆಹಲಿ, ಮುಂಬಯಿ ಮತ್ತು ಬೆಂಗಳೂರು ಇಂತಹ ದೊಡ್ಡ ನಗರಗಳಲ್ಲಿ ರೋಡ್ ಶೋ ನಡೆಸುವರು. ಈ ಮೂಲಕ ಭಾರತೀಯರನ್ನು ಮಾಲ್ಡೀವ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಅವರು ಕರೆ ನೀಡುವರು.