Remember Heroes Honourpoint : ವೀರ ಮರಣ ಹೊಂದಿದ ೨೫ ಸಾವಿರಕ್ಕಿಂತಲೂ ಹೆಚ್ಚು ಸೈನಿಕರ ಮಾಹಿತಿ ನೀಡುವ ವಿಶೇಷ ವೆಬ್ ಸೈಟ್ ಲೋಕಾರ್ಪಣೆ

ಬೆಂಗಳೂರು (ಕರ್ನಾಟಕ) – ವಾಯುದಳದ ನಿವೃತ್ತ ವಿಂಗ್ ಕಮಾಂಡರ್ ಎಂ. ಏ. ಅಫರಾಜ್ ಅವರು ದೇಶಾದ್ಯಂತ ವೀರ ಮರಣ ಹೊಂದಿರುವ ಸೈನಿಕರು ಮತ್ತು ಅವರ ಕುಟುಂಬದವರ ಮಾಹಿತಿ ಸಂಗ್ರಹಿಸಿ http://honourpoint.in ಎಂಬ ವೆಬ್ ಸೈಟ್ ನಲ್ಲಿ ಲಭ್ಯ ಮಾಡಿಕೊಟ್ಟಿದ್ದಾರೆ. ಸುಮಾರು ೨೬ ಸಾವಿರಗಿಂತಲೂ ಹೆಚ್ಚಿನ ಸೈನಿಕರ ಮಾಹಿತಿ ಈ ವೆಬ್ ಸೈಟ್ ನಲ್ಲಿದೆ.

ನಿವೃತ್ತ ವಿಂಗ್ ಕಮಾಂಡರ್ ಎಂ.ಏ.ಅಫರಾಜ್ ಅವರ ಪ್ರಕಾರ:

೧. ನಮ್ಮ ಪ್ರಯತ್ನ ಏನೆಂದರೆ, ಸಮಾಜವು ಇಂತಹ ವೀರ ಸೈನಿಕರನ್ನು ಗುರುತಿಸಬೇಕು ಮತ್ತು ಅವರ ಕುಟುಂಬದ ದುಃಖ ಕಡಿಮೆಗೊಳಿಸುವಲ್ಲಿ ಸಹಾಯ ಮಾಡಬೇಕು. ಈ ಕಾರಣದಿಂದಾಗಿ ವೀರ ಮರಣ ಹೊಂದಿರುವ ಸೈನಿಕರ ಕಥೆಯನ್ನು ಸಮಾಜದ ಎದುರು ತರುವುದನ್ನು ಪ್ರಾರಂಭಿಸಿದೆವು. ಈ ಅಭಿಯಾನಕ್ಕಾಗಿ ನಾವು ಸರಕಾರದಿಂದ ಯಾವುದೇ ಸಹಾಯ ಪಡೆಯುತ್ತಿಲ್ಲ.

೨. ದೇಶದಲ್ಲಿ ಸುಮಾರು ೨೦೦ ಯುದ್ಧ ಸ್ಮಾರಕಗಳು ಇವೆ; ಆದರೆ ಅಲ್ಲಿಯು ಕೂಡ ಸೈನಿಕರ ಹೆಸರು, ಸ್ಥಾನ ಮತ್ತು ರೆಜಿಮೆಂಟ್ ಇದನ್ನು ಬಿಟ್ಟು ಬೇರೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಶೌರ್ಯ ಚಕ್ರ ದಿಂದ ಪರಮ ವೀರ ಚಕ್ರ ಪಡೆದಿರುವವರ ಬಗ್ಗೆ ಬಹಳಷ್ಟು ಮಾಹಿತಿ ಇದೆ; ಆದರೆ ಅವರ ಕುಟುಂಬದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

೩. ಫ್ಲಾಯಿಂಗ್ ಆಫೀಸರ್ ಫಾರೂಕ್ ಬುನಶಾ ೧೯೬೫ ರ ಯುದ್ಧದಲ್ಲಿ ವೀರ ಮರಣ ಹೊಂದಿದರು. ನಿಧಾನವಾಗಿ ಬುನಶಾ ಜನರ ನೆನಪಿನಿಂದ ಮರೆಯಾದರು. ನಾವು ಅವರ ಮಾಹಿತಿ ಸಂಗ್ರಹಿಸಿದಾಗ ಅವರ ವಧು (ವಿವಾಹ. ನಿಶ್ಚಯವಾಗಿದ್ದ ಯುವತಿ) ಸಂಪೂರ್ಣ ಜೀವನ ಅವರ ನೆನಪಿನಲ್ಲಿಯೇ ಕಳೆಯುತ್ತಿದ್ದಾರೆ ಎಂಬುದು ತಿಳಿಯಿತು. ಈಗ ಅವರಿಗೆ ೭೫ ವರ್ಷ ವಯಸ್ಸಾಗಿದೆ. ವಧುವಿನ ಕುಟುಂಬದವರು ಅವರ ಈ ಸಂಬಂಧವನ್ನು ಎಂದೂ ಒಪ್ಪಿರಲಿಲ್ಲ; ಆದರೆ ಅವರ ಜೀವನ ಕಥೆಯನ್ನು ಯಾವಾಗ ನಾವು ಬಹಿರಂಗಪಡಿಸಿದೆವು, ಆಗ ಎರಡು ಕುಟುಂಬಗಳು ಒಂದಾದವು ಎಂದು ವಿವರಿಸಿದರು.