District Name Change: ರಾಮನಗರ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ !

ಬೆಂಗಳೂರು – ‘ರಾಮನಗರ’ ಜಿಲ್ಲೆ ಈಗ ‘ಬೆಂಗಳೂರು ದಕ್ಷಿಣ’ ಎಂದು ಗುರುತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸರಕಾರದ ಈ ನಿರ್ಣಯಕ್ಕೆ ವಿರೋಧ ಪಕ್ಷದವರು ವಿರೋಧಿಸಿದ್ದಾರೆ.

ರಾಜ್ಯದ ಕಾನೂನು ಮತ್ತು ಸಂಸತ್ತು ಸಚಿವ ಎಚ್.ಕೆ. ಪಾಟೀಲ್ ಇವರು ಮಾತನಾಡಿ, ಜನರ ಆಗ್ರಹದ ಮೇರೆಗೆ ನಾವು ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ’ ಎಂದು ಮಾಡುವ ನಿರ್ಣಯ ತೆಗೆದುಕೊಂಡಿದ್ದೇವೆ. ಕಂದಾಯ ಇಲಾಖೆ ಇದರ ಪ್ರಕ್ರಿಯೆ ಆರಂಭಿಸಿದೆ. ಜಿಲ್ಲೆಯ ಕೇವಲ ಹೆಸರು ಬದಲಾಗಿದೆ. ಬಾಕಿ ಎಲ್ಲವೂ ಹಾಗೆ ಇರುತ್ತದೆ. ಅದಕ್ಕೆ ‘ಬ್ರ್ಯಾಂಡ್ ಬೆಂಗಳೂರು’ ಹೀಗೂ ಕೂಡ ಹೇಳಲಾಗುವುದು. ಬೆಂಗಳೂರು ಇದು ಒಂದು ‘ಬ್ರಾಂಡ್’ (ಯಾವುದರ ಬಗ್ಗೆ ಬೇರೆಯ ಗುರುತು ಅಥವಾ ಪರಿಚಯ ಇರುವುದು.) ಇದರ ಲಾಭ ಯಾರಿಗೂ ಆಗುವುದಿಲ್ಲ, ಎಂದು ಹೇಳಿದರೆ ತಪ್ಪಾಗಲಾರದು. ಹೆಸರು ಬದಲಾಯಿಸುವುದು ಎಲ್ಲರಿಗೂ ಲಾಭದಾಯಕವಾಗುವುದು ಎಂದು ಹೇಳಿದರು.