|
ಗುನಾ (ಮಧ್ಯಪ್ರದೇಶ) – ಗುನಾ ಜಿಲ್ಲೆಯಲ್ಲಿ ಇರುವ ‘ವಂದನಾ ಕಾನ್ವೆಂಟ್ ಸ್ಕೂಲ’ನಲ್ಲಿ ವಿದ್ಯಾರ್ಥೀ ಸಮ್ಮೇಳನದ ಕಾರ್ಯಕ್ರಮ ನಡೆಯುವಾಗ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕ ಹೇಳಿದ್ದರಿಂದ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಯಾಥರಿನ ಇವರು ಅಸಮಾಧಾನ ಗೊಂಡು ವಿದ್ಯಾರ್ಥಿಗಳಿಂದ ಮೈಕ್ ಕಸಿದುಕೊಂಡರು. ಇದರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ.ಯ) ಕಾರ್ಯಕರ್ತರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದರು. ಎ.ಬಿ.ವಿ.ಪಿ.ಯ ಕಾರ್ಯಕರ್ತ ಸಕ್ಷಮ ದುಬೆ ಮತ್ತು ಧ್ರುವ ಸಿಂಗ ಕಿರಾರ ಇವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಚಂದ್ರಶೇಖರ್ ಸೀಸೋದಿಯ ಇವರು ಶಾಲೆಯ ಮುಖ್ಯೋಪಾಧ್ಯಾಯಿನಿಗೆ ನೋಟಿಸ್ ನೀಡಿದ್ದಾರೆ.
೧. ವಿದ್ಯಾರ್ಥಿ ಧುರ್ಬ ಪಾಲಿಯಾ ಮತ್ತು ಗೌರವ ಕಿರಾರ ಇವರು ಹಿಂದೂ ಸಂಸ್ಕೃತಿಯ ಪ್ರಕಾರ ಸಂಸ್ಕೃತ ಶ್ಲೋಕದ ಮೂಲಕ ಭಾಷಣ ಆರಂಭಿಸಿದರು. ಅದರ ನಂತರ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಯಾಥರಿನ ಇವರು ಅಸಮಾಧಾನಗೊಂಡು ವಿದ್ಯಾರ್ಥಿ ಎದುರಿನ ಮೈಕ್ ಕಸಿದುಕೊಂಡು ಅವರ ಭಾಷಣವನ್ನು ತಡೆದರು. ಸಿಸ್ಟರ್ ಕ್ಯಾಥರಿನ ಇವರು ಮಕ್ಕಳಿಗೆ, ಇದು ಇಲ್ಲಿ ನಡೆಯುವುದಿಲ್ಲ, ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ಹೇಳಿದರು.
೨. ಶಾಲೆಯ ಆಡಳಿತವು, ಆಯ್ಕೆಯಾಗಿರುವ ವಿದ್ಯಾರ್ಥಿ ಸಾಮಾನ್ಯವಾಗಿ ಬೆಳಗಿನ ಸಮ್ಮೇಳನದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಉಪಯೋಗಿಸುತ್ತಾರೆ. ಆ ದಿನ ಭಾಷಣ ಇಂಗ್ಲಿಷ್ ನಲ್ಲಿ ಆಗುವುದಿತ್ತು; ಆದರೆ ವಿದ್ಯಾರ್ಥಿಗಳು ಭಾಷಣದ ಆರಂಭ ಸಂಸ್ಕೃತ ಶ್ಲೋಕದಿಂದ ಮಾಡಿದರು.
೩. ಪ್ರತಿಭಟನಾಕಾರರು ಶಾಲೆಯ ಆಡಳಿತದ ವಿರುದ್ಧ ದೂರು ದಾಖಲಿಸಲು ಆಗ್ರಹಿಸಿದರು. ಯಾವ ಸಂಸ್ಕೃತ ಶ್ಲೋಕದ ಪಠಣೆ ಮಾಡಲು ನಿಷೇಧಿಸಲಾಗಿದೆ, ಆ ಶ್ಲೋಕ ದಿನನಿತ್ಯ ಶಾಲೆಯ ಪ್ರಾರ್ಥನೆಯಲ್ಲಿ ಸಮಾವೇಶಗೊಳಿಸಬೇಕು ಮತ್ತು ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಯಾಥರಿನ ಇವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಸುಮಾರು ೨ ಗಂಟೆಯವರೆಗೆ ಈ ಪ್ರತಿಭಟನೆ ನಡೆಯಿತು. ಜಿಲ್ಲಾ ಶಿಕ್ಷಣಾಧಿಕಾರಿ ಘಟನಾ ಸ್ಥಳಕ್ಕೆ ತಲುಪಿ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಸಂಪಾದಕೀಯ ನಿಲುವು
|