ತಿರುವನಂತಪುರಂ (ಕೇರಳ) – ಶೈಕ್ಷಣಿಕ ದಾಖಲಾತಿಯಲ್ಲಿ ಮತಾಂತರದ ವ್ಯಕ್ತಿಯ ಕೋರಿಕೆಯನ್ನು ಕಾನೂನು ನಿಬಂಧನೆಗಳ ಕೊರತೆಯ ಆಧಾರದ ಮೇಲೆ ತಿರಸ್ಕರಿಸಲಾಗುವುದಿಲ್ಲ. ಮತಾಂತರದ ನಂತರ ದಾಖಲಾತಿಯಲ್ಲಿ ಆವಶ್ಯಕ ತಿದ್ದುಪಡಿಗಳನ್ನು ಮಾಡಬಹುದಾಗಿದೆ ಎಂದು ಕೇರಳ ಉಚ್ಚನ್ಯಾಯಾಲಯ ತೀರ್ಪು ನೀಡಿದೆ.
1. ನ್ಯಾಯಾಲಯವು, ಶಾಲಾ ಪ್ರಮಾಣಪತ್ರಗಳಲ್ಲಿ ಮತಾಂತರಕ್ಕೆ ಯಾವುದೇ ಅವಕಾಶವಿಲ್ಲವೆನ್ನುವುದನ್ನು ಒಪ್ಪಲಾಗಿದ್ದರೂ, ಸೆಕ್ಷನ್ 25 (1) ಪ್ರಕಾರ ವ್ಯಕ್ತಿಯು ಕೇವಲ ತನ್ನ ಜನ್ಮದ ಆಧಾರದ ಮೇಲೆ ಯಾವುದೇ ಒಂದು ಧರ್ಮಕ್ಕೆ ಜೋಡಿಸಲ್ಪಡಬೇಕು ಎಂದು ಅದರ ಅರ್ಥವಾಗುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ, ವ್ಯಕ್ತಿಗೆ ಅವನ ಇಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ ಮತ್ತು ಅವನು ಬೇರೆ ಯಾವುದೇ ಧರ್ಮವನ್ನು ಸ್ವೀಕರಿಸಿದರೆ, ನಂತರ ಸರಕಾರಿ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು.
2. ಅರ್ಜಿದಾರರು ಹಿಂದೂ ಆಗಿದ್ದ ಮತ್ತು 2017 ರ ಮಧ್ಯದಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದನು. ಅವನು ತನ್ನ ಶಾಲಾ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮದ ಉಲ್ಲೇಖವನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿದನು. ಆದರೆ ಸಂಬಂಧಪಟ್ಟ ಶಾಲಾ ಮಂಡಳಿಯು ಶಾಲಾ ಪ್ರಮಾಣಪತ್ರಗಳಲ್ಲಿ ಅಂತಹ ತಿದ್ದುಪಡಿಗಳಿಗೆ ಯಾವುದೇ ನಿರ್ದಿಷ್ಟ ಕಾನೂನಿನ ನಿಬಂಧನೆಗಳು ಇಲ್ಲದಿರುವ ಕಾರಣವನ್ನು ನೀಡಿ ಅವನ ಮನವಿಯನ್ನು ತಿರಸ್ಕರಿಸಿತ್ತು. ಈ ಕುರಿತು ಅವನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನು.
3. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಶಾಲಾ ಆಡಳಿತ ಮಂಡಳಿಗೆ ಅರ್ಜಿದಾರರ ಶಾಲಾ ಪ್ರಮಾಣಪತ್ರದಲ್ಲಿ ಒಂದು ತಿಂಗಳೊಳಗೆ ತಿದ್ದುಪಡಿ ಮಾಡುವಂತೆ ನಿರ್ದೇಶಿಸಿದೆ.