-
ಲೋಕಸಭೆಯಲ್ಲಿ ಭಾಜಪದ ಸಂಸದ ಡಾ. ನಿಶಿಕಾಂತ ದುಬೇ ಇವರಿಂದ ಆಘಾತಕಾರಿ ಮಾಹಿತಿ !
-
ಕೇಂದ್ರ ಸರಕಾರ ಮಧ್ಯಪ್ರವೇಶಿಸಲು ಆಗ್ರಹ !
ನವ ದೆಹಲಿ – ಜಾರ್ಖಂಡದಲ್ಲಿನ ಗೋಡ್ಡದ ಭಾಜಪದ ಸಂಸದ ಡಾ. ನಿಶಿಕಾಂತ ದುಬೇ ಇವರು ಬುಡಕಟ್ಟು ಜನಾಂಗದ ಕಡಿಮೆ ಆಗುತ್ತಿರುವ ಜನಸಂಖ್ಯೆಯ ಅಂಶವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು. ಬಾಂಗ್ಲಾದೇಶದಿಂದ ಮುಸಲ್ಮಾನರು ಜಾರ್ಖಂಡದಲ್ಲಿ ನುಸುಳಿದ್ದರಿಂದ ಅಲ್ಲಿಯ ಬುಡಕಟ್ಟು ಜನಾಂಗದ ಜನಸಂಖ್ಯೆ ಶೇಕಡ ೧೦ ರಷ್ಟು ಕಡಿಮೆ ಆಗಿದೆ ಎಂದು ಸಂಸದ ಡಾ. ದುಬೇ ಇವರು ಈ ಸಮಯದಲ್ಲಿ ಹೇಳಿದರು.
ಸಂಸದ ಡಾ. ದುಬೇ ಇವರು ಮಾತು ಮುಂದುವರೆಸುತ್ತಾ,
೧. ಬಾಂಗ್ಲಾದೇಶದ ಮುಸಲ್ಮಾನರಿಂದ ಬುಡಕಟ್ಟು ಜನಾಂಗದ ಮಹಿಳೆರೊಂದಿಗೆ ವಿವಾಹ !
ಬಾಂಗ್ಲಾದೇಶದಿಂದ ನಡೆಯುವ ನುಸಳುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರು ಜಾರ್ಖಂಡದಲ್ಲಿನ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳಾ ಬುಡಕಟ್ಟು ಜನಾಂಗದ ಕೋಟಾದಿಂದ ಸ್ಪರ್ಧಿಸುತ್ತಾರೆ. ಈ ಮಹಿಳೆಯರ ಪತಿ ಮುಸಲ್ಮಾನರಾಗಿದ್ದಾರೆ. ಜಿಲ್ಲಾ ಪರಿಷತ್ತಿನ ಅಧ್ಯಕ್ಷರ ಪತಿ ಮುಸಲ್ಮಾನರಾಗಿದ್ದಾರೆ. ೧೦೦ ಬುಡಕಟ್ಟು ಜನಾಂಗದ ಮುಖ್ಯಸ್ಥರು ಬುಡಕಟ್ಟು ಜನಾಂಗದ ಮಹಿಳೆಯರೇ ಆಗಿದ್ದಾರೆ; ಆದರೆ ಅವರ ಪತಿ ಮುಸಲ್ಮಾನರಾಗಿದ್ದಾರೆ.
೨. ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಸರಕಾರ ನಿಷ್ಕ್ರಿಯ !
ನಾನು ಯಾವ ಸಂಥಾಲ್ ಪರಗಣಾನಾದಿಂದ ಬಂದಿದ್ದೇನೆಯೋ ಅಲ್ಲಿ ಯಾವಾಗ ಜಾರ್ಖಂಡ್ ಬಿಹಾರದಿಂದ ಬೇರೆ ಆಯಿತೋ, ಆಗ ಅಲ್ಲಿ ಬುಡಕಟ್ಟು ಜನಾಂಗದ ಜನಸಂಖ್ಯೆ ಶೇಕಡ ೩೬ ರಷ್ಟು ಇತ್ತು. ಇಂದು ಬುಡಕಟ್ಟು ಜನಾಂಗದ ಜನಸಂಖ್ಯೆ ಶೇಕಡ ೨೬ ಆಗಿದೆ ಮತ್ತು ಶೇಕಡ ೧೦ ರಷ್ಟು ಬುಡಕಟ್ಟು ಜನಾಂಗದವರು ಎಲ್ಲಿ ಮರೆಯಾಗಿದ್ದಾರೆ ? ಇದರ ಬಗ್ಗೆ ಈ ಸಭಾಗೃಹದಲ್ಲಿ ಎಂದು ಚರ್ಚೆ ನಡೆಯುವುದಿಲ್ಲ, ಆಲ್ಲಿ ‘ವೋಟ್ ಬ್ಯಾಂಕಿ’ನ ರಾಜಕಾರಣ ನಡೆಯುತ್ತದೆ. ಜಾರ್ಖಂಡ ರಾಜ್ಯದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಪಕ್ಷದ ಸರಕಾರ ಇದೆ. ಸರಕಾರ ಈ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
೩. ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇಕಡ ೧೧೭ ರಷ್ಟು ಹೆಚ್ಚಳ !
ಇತ್ತೀಚೆಗೆ ಚುನಾವಣೆ ನಡೆದಿದೆ. ಪ್ರತಿಯೊಂದು ಚುನಾವಣೆಯಲ್ಲಿನ ಜನಸಂಖ್ಯೆ ಶೇಕಡ ೧೫ ರಿಂದ ೧೭ ರಷ್ಟು ಹೆಚ್ಚಾಗುತ್ತದೆ. ನಾನು ಯಾವ ಲೋಕಸಭ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ ಆ ಮಧುಪುರದಲ್ಲಿ ಹೆಚ್ಚು ಕಡಿಮೆ ೨೬೭ ಮತದಾನ ಕ್ಷೇತ್ರದಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ ೧೧೭ ರಷ್ಟು ಹೆಚ್ಚಿದೆ. ಸಂಪೂರ್ಣ ಜಾರ್ಖಂಡದಲ್ಲಿ ಇಂತಹ ಕನಿಷ್ಠ ೨೫ ವಿಧಾನಸಭೆಯ ಕ್ಷೇತ್ರಗಳಿವೆ. ಅಲ್ಲಿ ಜನಸಂಖ್ಯೆ ಶೇಖಡ ೧೨೩ ರಷ್ಟು ಹೆಚ್ಚಾಗಿದೆ ಇದು ಅತ್ಯಂತ ಆಘಾತಕಾರಿ ವಿಷಯವಾಗಿದೆ.
ಹಿಂದೂಗಳ ನಾಶವಾಗುವ ಮುನ್ನ ಬಿಹಾರ್, ಬಂಗಾಲ ಮತ್ತು ಜಾರ್ಖಂಡ್ ಈ ರಾಜ್ಯಗಳಲ್ಲಿ ಕೆಲವು ಜಿಲ್ಲೆಗಳು ಒಟ್ಟಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿ !
ಜಾರ್ಖಂಡ್ ದಲ್ಲಿನ ಪಾಕುರ ಜಿಲ್ಲೆಯ ತಾರಾನಗರ ಇಲಾಮಿ ಮತ್ತು ದಾರಾಪಾಡ ಈ ಪ್ರದೇಶದಲ್ಲಿನ ಗಲಭೆಯ ಅಂಶಗಳನ್ನು ಪ್ರಸ್ತಾಪಿಸಿದ ಸಂಸದ ಡಾ. ದುಬೇ ಇವರು, ಮಮತಾ ಬ್ಯಾನರ್ಜಿ ಸರಕಾರದ ಪೊಲೀಸರು ಮತ್ತು ಬಂಗಾಲದ ಮಾಲದಾ ಮತ್ತು ಮುರ್ಶಿದಾಬಾದ್ ಇಲ್ಲಿಯ ಮುಸಲ್ಮಾನರು ಇಲ್ಲಿಗೆ ಬಂದು ಇಲ್ಲಿಯ ಜನರನ್ನೇ ಓಡಿಸುತ್ತಾರೆ. ಗ್ರಾಮಗಳೇ ಖಾಲಿ ಆಗುತ್ತಿವೆ. ಇದು ಬಹಳ ಗಂಭೀರವಾಗಿದೆ. ನನ್ನ ಹೇಳಿಕೆ ತಪ್ಪಾಗಿದ್ದರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಸಂಪೂರ್ಣ ಬಂಗಾಲ, ಮುರ್ಶಿದಾಬಾದ್ ಮತ್ತು ಮಾಲದಾ ಇಲ್ಲಿಂದ ಜನರು ಬಂದು ಹಿಂದೂಗಳ ವಿರುದ್ಧ ಅಪರಾಧ ಮಾಡುತ್ತಾರೆ. ಜಾರ್ಖಂಡ್ ಪೋಲಿಸರಿಗೆ ಯಾವುದೇ ಕೆಲಸ ಮಾಡಲು ಬರುವುದಿಲ್ಲ. ಮುಸಲ್ಮಾನರ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಲ್ಲಿ ಈಗ ಭಾರತ ಸರಕಾರ ಮಧ್ಯಪ್ರವೇಶಿಸಬೇಕು. ಮಾಲದಾ, ಮುರ್ಶಿದಾಬಾದ್, ಕಿಶನಗಂಜ್, ಅರರಿಯ, ಕಟಿಹಾರ್, ಮತ್ತು ಸಂಪೂರ್ಣ ಸಂಥಾಲ ಪರಗಣ ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಇಲ್ಲವಾದರೆ ಹಿಂದುಗಳು ನಾಶವಾಗುತ್ತಾರೆ. ಅಲ್ಲಿ ವಿಧಾನಸಭೆಯ ಸಮಿತಿ ಕಳುಹಿಸಿ ಮತ್ತು ಈ ಸಮಿತಿಯಲ್ಲಿ ಹೆಚ್ಚೆಚ್ಚು ತೃಣಮೂಲ ಕಾಂಗ್ರೆಸ್ಸಿನ ಸಂಸದರನ್ನು ಸೇರಿಸಿ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ಪರಿಸ್ಥಿತಿ ಬರುವವರೆಗೆ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ನಿದ್ರಿಸುತ್ತಿತ್ತೆ ? ಬುಡಕಟ್ಟು ಜನಾಂಗದ ರಕ್ಷಣೆಯ ಬಗ್ಗೆ ಮಾತನಾಡುವವರು ಈಗ ಮೌನ ಏಕೆ ? |