ನಮ್ಮದು ಗಾಝಾ ವಶಕ್ಕೆ ಪಡೆಯುವ ಯಾವ ಉದ್ದೇಶವೂ ಇಲ್ಲ !
ವಾಷಿಂಗ್ಟನ್ (ಅಮೇರಿಕಾ) – ಯಾವ ದಿನ ನಾವು ಹಮಾಸವನ್ನು ಸೋಲಿಸುವೆವು ಅಂದು ಗಾಝಾದಲ್ಲಿ ಒಂದು ಹೊಸ ಬೆಳಕು ಮೂಡುವುದು. ವಿಜಯದ ನಂತರ ಕೂಡ ನಾವು ಗಾಝಾದ ಮೇಲೆ ಕೆಲವು ಸಮಯ ಹಿಡಿತ ಸಾಧಿಸಬಹುದು, ಏಕೆಂದರೆ ಆ ಜಾಗ ಮತ್ತೆ ಇಸ್ರೈಲಗಾಗಿ ಅಪಾಯ ನಿರ್ಮಾಣ ಮಾಡಬಾರದು. ನಮ್ಮದು ಒಂದೇ ಬೇಡಿಕೆ ಇದೆ, ಯುದ್ಧ ಮುಗಿದ ನಂತರ ಗಾಝಾದಲ್ಲಿ ಯಾವ ಸರಕಾರ ಇರುವುದು, ಅದು ಮತ್ತೆ ಇಸ್ರೇಲ್ ಗಾಗಿ ಅಪಾಯ ಉಂಟುಮಾಡುವ ಪ್ರಯತ್ನ ಕೂಡ ಮಾಡಬಾರದು. ಗಾಝಾ ವಶಕ್ಕೆ ಪಡೆಯುವ ಯಾವ ಉದ್ದೇಶವು ನಮಗೆ ಇಲ್ಲ, ಎಂದು ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮೀನ್ ನೇತನ್ಯಾಹೂ ಇವರು ಜುಲೈ ೨೪ ರಂದು ಅಮೆರಿಕಾದ ಸಂಸತ್ತಿನ ಸಂಯುಕ್ತ ಅಧಿವೇಶವನ್ನು ಉದ್ದೇಶಿಸಿ ಮಾತನಾಡುವಾಗ ಸ್ಪಷ್ಟಪಡಿಸಿದರು. ಆ ಸಮಯದಲ್ಲಿ ‘ಟೆಸ್ಲಾ’ ಕಂಪನಿಯ ಮಾಲೀಕ ಇಲಾನ್ ಮಸ್ಕ ಇವರು ಕೂಡ ಅತಿಥಿಯಾಗಿ ಉಪಸ್ಥಿತರಿದ್ದರು.
೧. ನೇತನ್ಯಾಹೂ ಮಾತು ಮುಂದುವರಿಸಿ, ಇಸ್ರೇಲಿನ ಯುದ್ಧ ಇದು ಒರಟುತನ ಮತ್ತು ಸಂಸ್ಕೃತಿ ಇವುಗಳ ಯುದ್ಧವಾಗಿದೆ. ಒಂದು ಕಡೆಗೆ ಮೃತ್ಯುವಿನ ಪೂಜೆ ಮಾಡುವ ಜನರಿದ್ದಾರೆ ಹಾಗೂ ಇನ್ನೊಂದು ಕಡೆಗೆ ಜೀವನವನ್ನು ಪವಿತ್ರ ಎಂದು ನಂಬುವ ಜನರಿದ್ದಾರೆ. ಈ ಹೋರಾಟದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇವರು ಒಟ್ಟಿಗೆ ನಿಲ್ಲುವ ಆವಶ್ಯಕತೆ ಇದೆ.
೨. ನೇತನ್ಯಾಹೂ ಇವರು ಈ ಸಮಯದಲ್ಲಿ ಇರಾನನ್ನು ಕೂಡ ಟೀಕಿಸಿದರು. ಅವರು, ಯಾವಾಗ ನಾವು ಇರಾನ ಜೊತೆಗೆ ಹೋರಾಡುತ್ತೇವೆ, ಆಗ ನಾವು ಒಂದು ಕೊಲೆಗಾರ ದೇಶದ ವಿರುದ್ಧ ನಿಲ್ಲುತ್ತೇವೆ. ಅದು ಅಮೆರಿಕಾದ ಎಲ್ಲಕ್ಕಿಂತ ದೊಡ್ಡ ಶತ್ರು ಆಗಿದೆ. ನಾವು ಕೇವಲ ನಮ್ಮದು (ಇಸ್ರೇಲಿನ) ಅಷ್ಟೇ ಅಲ್ಲದೆ ನಿಮ್ಮ (ಅಮೇರಿಕಾದ) ರಕ್ಷಣೆ ಕೂಡ ಮಾಡುತಿದ್ದೇವೆ. ನಾವು ಮಧ್ಯಪೂರ್ವದ ಅರಬ ದೇಶ ಇವರ ರಕ್ಷಣೆ ಕೂಡ ಮಾಡುತ್ತಿದ್ದೇನೆ. ಇಸ್ರೇಲಿನ ಹೋರಾಟ ಇದು ಅಮೆರಿಕಾದ ಹೋರಾಟವಾಗಿದೆ. ಮತ್ತು ಇಸ್ರೇಲಿನ ವಿಜಯ ಇದು ಅಮೆರಿಕಾದ ವಿಜಯವಾಗುವುದು. ಇರಾನಾಗೆ, ಅಮೇರಿಕವನ್ನು ಬಲಹೀನನಾಗಿ ಮಾಡುವುದಿದ್ದರೆ ಅದು ಮಧ್ಯಪೂರ್ವ ಗೆಲ್ಲಬೇಕಾಗುತ್ತದೆ; ಆದರೆ ಇಸ್ರೇಲ್ ಮಧ್ಯ ಪೂರ್ವ ಮಧ್ಯ ಭಾಗದಲ್ಲಿ ಇರುವುದು, ಅದು ಇರಾನಿನ ಕನಸುಗಳನ್ನು ಮೇಲಿಂದ ಮೇಲೆ ನುಚ್ಚುನೂರು ಮಾಡುತ್ತಿದೆ. ಯಾವಾಗ ಇಸ್ರೇಲ್ ಮತ್ತು ಅಮೆರಿಕ ಒಟ್ಟಾಗಿ ನಿಲ್ಲುವರು ಆಗ ನಾವು ಗೆಲ್ಲುತ್ತೇವೆ ಮತ್ತು ಶತ್ರು ಸೋಲುತ್ತದೆ ಎಂಬುದು ಇರಾನ್ ಗೆ ಗೊತ್ತಿದೆ.