ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿತು
ಮಾಸ್ಕೋ – ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಕೋ ಭೇಟಿಯಿಂದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತವು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ರಷ್ಯಾಗೆ ಬೆದರಿಕೆ ಹಾಕದೇ ಆ ದೇಶದೊಂದಿಗೆ ಸಾಮೀಪ್ಯತೆಯನ್ನು ಹೆಚ್ಚಿಸಿರುವುದರಿಂದ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಉಕ್ರೇನ್‌ನ ಸೈಬರ್ ಹ್ಯಾಕರ್ಸ ಭಾರತದ ಭದ್ರತೆಗೆ ಸಂಬಂಧಿಸಿದ ಅತ್ಯಂತ ಗೌಪ್ಯ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಜುಲೈ 15 ರಂದು, ಉಕ್ರೇನ್‌ನ ಸೈಬರ್ ಹ್ಯಾಕರ್ಸ ಎಸ್-400 ಕ್ಷಿಪಣಿಯ ರಕ್ಷಣಾ ವ್ಯವಸ್ಥೆಯ ಅತ್ಯಂತ ರಹಸ್ಯ ವಿವರಗಳನ್ನು ಬಹಿರಂಗಪಡಿಸಿದ್ದೇವೆ ಎಂದು ಹೇಳಿಕೊಂಡಿದೆ. ರಷ್ಯಾ ಭಾರತಕ್ಕೆ ಎಸ್-400 ವ್ಯವಸ್ಥೆಯ 400 ಕಿ.ಮೀ. ದೂರದ ಗುರಿಯನ್ನು ಸಾಧಿಸುವ ಕ್ಷಿಪಣಿಯ ಪೂರೈಕೆ ಪ್ರಾರಂಭಿಸಿದ ಬಳಿಕ ಹ್ಯಾಕರ್ಸ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಗೌಪ್ಯ ಮಾಹಿತಿಯ ಲಾಭವನ್ನು ಚೀನಾ ಮತ್ತು ಪಾಕಿಸ್ತಾನದಂತಹ ಭಾರತದ ಶತ್ರುಗಳು ಪಡೆಯಬಹುದು.
1. ರಷ್ಯಾವು ಈ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಭಾರತಕ್ಕೆ ಇ-ಮೇಲ್ ಮುಖಾಂತರ ಕಳುಹಿಸಿತ್ತು. ಉಕ್ರೇನ್ ಸೈಬರ ಹ್ಯಾಕರ್ಸ್ ಈ ಇ-ಮೇಲ್ ಹ್ಯಾಕ ಮಾಡಿ ಭಾರತಕ್ಕೆ ಕಳುಹಿಸಲಾಗುವ ಅನೇಕ ಶಸ್ತ್ರಾಸ್ತ್ರಗಳ ವಿವರಗಳನ್ನು ಪಡೆದುಕೊಂಡಿದೆ.
2. ಭಾರತವು ಎಷ್ಟು ಕ್ಷಿಪಣಿಗಳನ್ನು ಮತ್ತು ಯಾವ ಉಪಕರಣಗಳನ್ನು ಖರೀದಿಸಿದೆ ಎಂಬ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ.
3. ಭಾರತವು 2018 ರ ಮಧ್ಯದಲ್ಲಿ ಎಸ್-400 ಕ್ಷಿಪಣಿಯ ಸಂರಕ್ಷಣಾ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಭಾರತ ಮತ್ತು ರಷ್ಯಾದ ಸಂರಕ್ಷಣಾ ಸಂಬಂಧದ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆಯೆಂದು ಹೇಳಲಾಗಿತ್ತು. ಈ ಸಂಪೂರ್ಣ ವ್ಯವಹಾರವು 5 ಬಿಲಿಯನ್ ಡಾಲರಗಳಷ್ಟಾಗಿದೆ. ಇತ್ತೀಚೆಗೆ ಭಾರತದಲ್ಲಿ ಮೂರು ಎಎಸ್-400 ಸಂರಕ್ಷಣಾ ಯಂತ್ರಗಳು ಸಿಕ್ಕಿದ್ದು, ಉಕ್ರೇನ ಯುದ್ಧದಿಂದಾಗಿ ಇನ್ನುಳಿದ 2 ಎಸ್-400 ಪೂರೈಸಲು ರಷ್ಯಾಗೆ ಅಡ್ಡಿಯಾಗುತ್ತಿದೆ.
4. ಉಕ್ರೇನ ಹ್ಯಾಕರ್ಸಗಳ ಹೇಳಿಕೆ ನಿಜವಾಗಿದ್ದರೆ ಅದು ಭಾರತಕ್ಕೆ ದೊಡ್ಡ ಹೊಡೆತವಾಗಿದೆ. ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಭಾರತ ಈ ಯಂತ್ರೋಪಕರಣಗಳನ್ನು ಖರೀದಿಸಿದೆ; ಆದರೆ ಈಗ ಶತ್ರುಗಳಿಗೆ ಇದರ ಮಾಹಿತಿ ಸಿಕ್ಕಿದೆ.
ಸಂಪಾದಕೀಯ ನಿಲುವುಒಂದು ವೇಳೆ ಉಕ್ರೇನ್ ಇಂತಹ ದುಷ್ಕೃತ್ಯ ಎಸಗಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರೆ, ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡಬೇಕು |