ಶ್ರೀನಗರ (ಜಮ್ಮು- ಕಾಶ್ಮೀರ) – ಭಯೋತ್ಪಾದಕರಿಗಾಗಿ ಶಸ್ತ್ರಾಸ್ತ್ರಗಳನ್ನು ಮತ್ತು ಹಣ ಸಂಗ್ರಹಿಸುವುದು ಹಾಗೂ ಪಾಕಿಸ್ತಾನಿ ಕಳ್ಳ ಸಾಗಾಣಿಕೆದಾರರ ಮೂಲಕ ಕಾಶ್ಮೀರದಲ್ಲಿ ಮಾದಕ ಪದಾರ್ಥಗಳ ವಿತರಣೆ ಮಾಡುವ ನಾಲ್ವರು ಮುಸಲ್ಮಾನ ಸರಕಾರಿ ಸಿಬ್ಬಂದಿಗಳನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದೆ. ಇದರಲ್ಲಿ ಇಬ್ಬರು ಪೊಲೀಸರು, ಓರ್ವನು ಶಿಕ್ಷಣ ಇಲಾಖೆಯ ಸಿಬ್ಬಂದಿ ಮತ್ತು ಇನ್ನೊಬ್ಬನು ಪಂಚಾಯತಿ ರಾಜ್ಯ ಸಿಬ್ಬಂದಿಯಾಗಿದ್ದಾನೆ. ಇಮ್ತಿಯಾಜ್ ಅಹಮದ್ ಲೋನ್, ಬಾಜೀಲ್ ಅಹಮದ್ ಮೀರ್, ಮುಸ್ತಾಕ್ ಅಹಮದ್ ಪೀರ್ ಮತ್ತು ಜೈದ್ ಶಾಹ್ ಹೀಗೆ ಅಮಾನತುಗೊಂಡವರ ಹೆಸರುಗಳಾಗಿವೆ.
ಸುರಕ್ಷಾ ವ್ಯವಸ್ಥೆಗೆ ಈ ನಾಲ್ವರ ಚಟುವಟಿಕೆಯು ಅನುಮಾನಾಸ್ಪದವಾಗಿ ಕಂಡು ಬಂದಿತ್ತು ಮತ್ತು ಅವರು ಇವರ ವಿರುದ್ಧ ವಿಚಾರಣೆ ನಡೆಸುತ್ತಿದ್ದರು. ನೌಕರಿಯ ನಿಯಮಗಳ ಉಲ್ಲಂಘನೆ ಮಾಡಿರುವುದರಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಿಬ್ಬಂದಿಗಳು ಪಾಕಿಸ್ತಾನದ ಮೂಲಕ ಬರುವ ಮಾದಕ ಪದಾರ್ಥಗಳನ್ನು ಕಾಶ್ಮೀರದಲ್ಲಿ ಮಾರುತ್ತಿದ್ದರು ಮತ್ತು ಅದರಿಂದ ಸಂಗ್ರಹವಾಗುವ ಹಣವನ್ನು ಭಯೋತ್ಪಾದಕರಿಗಾಗಿ ಬಳಸುತ್ತಿದ್ದರು.
ಇಲ್ಲಿಯವರೆಗೆ ೫೫ ಸಿಬ್ಬಂದಿಗಳ ವಿರುದ್ಧ ಕ್ರಮ
ಜಮ್ಮು ಕಾಶ್ಮೀರದ ಉಪರಾಜ್ಯಪಾಲರಾದ ಮನೋಜ್ ಸಿಂಹ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಯೋತ್ಪಾದಕರ ಜೊತೆಗೆ ಸಂಬಂಧವಿರುವ ಕನಿಷ್ಠ ೫೫ ಸಿಬ್ಬಂದಿಗಳ ವಿರುದ್ಧ ಸರಕಾರ ಕ್ರಮ ಕೈಗೊಂಡಿದೆ. ಇಂತಹ ಸಿಬ್ಬಂದಿಗಳ ಗುರುತು ಪತ್ತೆ ಹಚ್ಚುವುದಕ್ಕಾಗಿ ಸರಕಾರವು ಒಂದು ಕೃತಿ ತಂಡದ ರಚನೆ ಕೂಡ ಮಾಡಿದೆ ಎಂದು ತಿಳಿಸಿದರು.
ಸಂಪಾದಕೀಯ ನಿಲುವುಇಂತಹವರನ್ನು ಕೇವಲ ಅಮಾನತುಗೊಳಿಸದೆ, ಅವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಅಟ್ಟಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ! ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕರು ನಿಶ್ಚಿತ ಧರ್ಮದವರಾಗಿರುವುದರಿಂದ ಮತ್ತು ಅಲ್ಲಿ ಬಹು ಸಂಖ್ಯಾತ ಮುಸಲ್ಮಾನರೇ ಇರುವುದರಿಂದ ಅನೇಕ ಮುಸಲ್ಮಾನರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಾರೆ. ಇದರ ಪರಿಣಾಮ ರಶೀದ್ ಇಂಜಿನಿಯರ್ ನಂತಹ ಪ್ರತ್ಯೇಕತಾವಾದಿಗಳು ಸಂಸದರಾಗಿ ಆಯ್ಕೆ ಆಗುತ್ತಾರೆ. ಎಲ್ಲಿಯವರೆಗೆ ಅವರ ಮಾನಸಿಕತೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ ನಷ್ಟವಾಗುವುದು ಕಷ್ಟವಾಗಿದೆ. |