Bareilly Temple Vandalized : ದೇವಸ್ಥಾನದಲ್ಲಿನ ಮೂರ್ತಿಗಳನ್ನು ಧ್ವಂಸ ಮಾಡಿದ ಶಾರುಖ್, ಅರ್ಷದ್ ಮತ್ತು ಅಕ್ರಮ್ ಬಂಧನ

ಬರೇಲಿ (ಉತ್ತರ ಪ್ರದೇಶ) – ಬರೇಲಿ ಜಿಲ್ಲೆಯ ಇಜ್ಜತ್‌ ನಗರದಲ್ಲಿರುವ ಗೋಪೇಶ್ವರ ನಾಥ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಪ್ರಕರಣದಲ್ಲಿ ಪೊಲೀಸರು ಶಾರುಖ್, ಅರ್ಷದ್ ಮತ್ತು ಅಕ್ರಮ್ ಈ ಮೂವರನ್ನು ಬಂಧಿಸಿದ್ದಾರೆ. ಜುಲೈ 21 ರ ರಾತ್ರಿ ಈ ಮೂವರು ದೇವಸ್ಥಾನಕ್ಕೆ ನುಗ್ಗಿ ಧ್ವಂಸಗೊಳಿಸಿದ್ದರು. ಈ ಸಂದರ್ಭದಲ್ಲಿ ಅವರು ಓಡಿ ಹೋಗುತ್ತಿರುವಾಗ ಗುಂಪು ಅಕ್ರಂನನ್ನು ಬಂದಿಸಿದರು, ಶಾಹರೂಖ ಮತ್ತು ಅರ್ಶದ ಓಡಿ ಹೋದರು. ಅಕ್ರಂನನ್ನು ಗುಂಪು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು. ತದನಂತರ ಪೊಲೀಸರು ಇನ್ನಿತರರನ್ನೂ ಬಂಧಿಸಿದರು. ಗುಂಪಿನ ಥಳಿತದಿಂದ ಗಾಯಗೊಂಡಿರುವ ಅಕ್ರಮನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ಕೆಲವು ತಿಂಗಳುಗಳಲ್ಲಿ ದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆದ ದಾಳಿಗಳು !

1. ಪಂಜಾಬ್‌ನ ಲುಧಿಯಾನದಲ್ಲಿರುವ ಶಿವ ದೇವಾಲಯದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ 14 ಮೂರ್ತಿಗಳನ್ನು ಧ್ವಂಸಗೊಳಿಸಲಾಗಿತ್ತು. ಹಾಗೆಯೇ ಅಲ್ಲಿದ್ದ ಶಿವಲಿಂಗವನ್ನೇ ತೆಗೆದು ಎಸೆದಿದ್ದರು.

2. ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿರುವ ಪೀಪಲೇಶ್ವರ ಮಹಾದೇವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಈ ಘಟನೆಯಲ್ಲಿ ಅಪರಿಚಿತರು ದೇವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿ, ಶಿವಲಿಂಗವನ್ನು ತೆಗೆದು ರಸ್ತೆಯ ಮೇಲೆ ಎಸೆದಿದ್ದರು.

3. ಉತ್ತರ ಪ್ರದೇಶದ ವಾರಣಾಸಿಯ ದುಬಕಿಯಾ ಗ್ರಾಮದಲ್ಲಿರುವ ಶ್ರೀ ಹನುಮಾನ್ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಧ್ವಂಸಗೊಳಿಸಲಾಗಿತ್ತು.

ಸಂಪಾದಕೀಯ ನಿಲುವು

  • `ದೇಶದ ಮುಸ್ಲಿಮರು ಅಸುರಕ್ಷಿತರು’ ಎಂದು ಹೇಳುವ ಸಮಾಜವಾದಿ ಪಕ್ಷಗಳು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮುಂತಾದ ಮುಸಲ್ಮಾನಪ್ರೇಮಿ ರಾಜಕೀಯ ಪಕ್ಷಗಳು ಇಂತಹ ಘಟನೆಗಳ ಬಗ್ಗೆ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ !
  • ವಿಶಾಲಗಡದ ಅನಧಿಕೃತ ಮಸಿದಿಯನ್ನು ಗುಂಪು ಧ್ವಂಸಗೊಳಿಸಿದಾಗ ಅಲ್ಲಿಗೆ ಧಾವಿಸುವವರು, ಹಿಂದೂಗಳ ಅಧಿಕೃತ ದೇವಸ್ಥಾನಗಳ ಮೇಲೆ ಮುಸಲ್ಮಾನರು ದಾಳಿ ನಡೆಸಿದಾಗ ಯಾವ ಬಿಲದಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ?