ವಾಷಿಂಗ್ಟನ್ (ಅಮೇರಿಕಾ) – ‘ಟೆಸ್ಲಾ’ ಮತ್ತು ‘ಸ್ಪೇಸ್ ಎಕ್ಸ್’ ನ ಮುಖ್ಯಸ್ಥ ಇಲಾನ್ ಮಸ್ಕ್ ಇವರು, ಲಿಂಗ ಪರಿವರ್ತನೆ ಶಸ್ತ್ರ ಕ್ರಿಯೆಯಿಂದ ಅವರ ಪುತ್ರ ಅವರಿಂದ ದೂರ ಹೋದನು ಎಂದು ಹೇಳಿದರು. ಮನೋರೋಗ ತಜ್ಞ ಡಾ. ಜಾರ್ಡನ್ ಪೀಟರ್ಸನ್ ಇವರಿಗೆ ನೀಡಿರುವ ಸಂದರ್ಶನದಲ್ಲಿ ಮಸ್ಕ್ ಇವರು, ‘ಲಿಂಗ ಪರಿವರ್ತನೆ ಶಸ್ತ್ರಕ್ರಿಯೆ ಇದು ಮೂಲತಃ ಪುತ್ರನ ಹತ್ಯೆ ಮತ್ತು ಸಂತಾನಹರಣ ಮಾಡುವ ಹಾಗೆ ಇದೆ. ಇದು ಒಂದು ವೈರಸ್ ಆಗಿರುವುದು.” ಎಂದು ಹೇಳಿದರು. ಇಲಾನ್ ಮಸ್ಕ ಪುತ್ರ ಜೇವಿಯರ್ ಇವನು ೨೦೨೨ ರಲ್ಲಿ ೧೮ ನೇ ವಯಸ್ಸು ಪೂರ್ಣವಾದ ನಂತರ ಅವನು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹುಡುಗಿಯಾದನು. ಅದರ ನಂತರ ಜೇವಿಯರ ಇವನು ತನ್ನ ಹೆಸರು ಬದಲಾಯಿಸಿ ವಿವಿಯನ್ ಜೇನಾ ವಿಲ್ಸನ್ ಎಂದು ಇಟ್ಟುಕೊಂಡನು.
ಮಸ್ಕ್ ಇವರು, ”ಕೋರೋನಾ ಮಹಾಮಾರಿಯ ಕಾಲದಲ್ಲಿ ನನ್ನನ್ನು ವಂಚಿಸಿ ನನ್ನ ಪುತ್ರನು ಲಿಂಗ ಪರಿವರ್ತನೆಯ ಸಂಬಂಧಿತ ದಾಖಲೆಗಳ ಮೇಲೆ ಸಹಿ ಪಡೆದಿದ್ದನು. ನನಗೆ ತಿಳಿದಿರಲಿಲ್ಲ ಇದು ಏನು ಆಗುವುದು ? ಆ ಸಮಯದಲ್ಲಿ ಕೊರೊನಾ ಮಹಾಮಾರಿಯಿಂದ ಬಹಳಷ್ಟು ಗೊಂದಲ ಸೃಷ್ಟಿಯಾಗಿತ್ತು. ನನ್ನ ಪುತ್ರನು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿತ್ತು.” ಎಂದು ಹೇಳಿದರು.
ಮಸ್ಕ ಇವರು, ನಾನು ಆ ಬ್ಯಾಕ್ಟೀರಿಯಾ ಜೊತೆಗೆ ಹೋರಾಡುವೆನು !
ಸ್ವಂತ ಅನುಭವ ಹೇಳುತ್ತಿರುವಾಗ ಇಲಾನ್ ಮಸ್ಕ್ ಇವರು, ‘ಈ (ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ) ಶಸ್ತ್ರಕ್ರಿಯೆಗೆ ‘ಡೆಡನೇಮಿಂಗ’ ಎನ್ನುತ್ತಾರೆ; ಕಾರಣ ಇದರಿಂದ ಹುಡುಗನ ಮೃತ್ಯು ಆಗುತ್ತದೆ. ಶಸ್ತ್ರಕ್ರಿಯೆಯ ನಂತರ ನಾನು ನನ್ನ ಪುತ್ರನನ್ನು ಕಳೆದುಕೊಂಡೆ. ಆಗಲೇ ನಾನು ಈ ವೈರಸ್ ಜೊತೆಗೆ ಹೋರಾಡುವುದನ್ನು ನಿಶ್ಚಯಿಸಿದೆ.’ ಡೆಡನೇಮಿಂಗ ಎಂದರೆ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೊದಲು ಯಾವ ಹೆಸರು ಇರುತ್ತದೆ ಅದೇ ಹೆಸರು ಇರುತ್ತದೆ.
ಒಂದು ವಾರ್ತಾ ವಾಹಿನಿಯು ನೀಡಿರುವ ಮಾಹಿತಿಯ ಪ್ರಕಾರ ಇಲಾನ್ ಮಸ್ಕ ಇವರು ಕಳೆದ ವರ್ಷ, ಅವರು ಟ್ರಾನ್ಸ್ ಜೆಂಡರ್ (ಲಿಂಗ ಪರಿವರ್ತನೆ ಮಾಡುವವರು, ತೃತೀಯಪಂಥಿ ಮುಂತಾದರ ಜೊತೆಗೆ ಸಂಬಂಧಿತ ಸಂಜ್ಞಾ) ವೈದ್ಯಕೀಯ ಚಿಕಿತ್ಸೆಗೆ ಅಪರಾಧ ಎಂದು ದೃಢೀಕರಿಸಲು ಹೋರಾಡುವರು ಎಂದು ಹೇಳಿದ್ದರು.
ವಿವಿಯನನು ಶಸ್ತ್ರಕ್ರಿಯೆಯ ನಂತರ ತಂದೆಯ ಹೆಸರ ತೆಗೆದನು
ಮಸ್ಕ್ ಇವರ ಪುತ್ರನು ಲಿಂಗ ಪರಿವರ್ತನೆ ಮಾಡಿಸಿಕೊಂಡ ನಂತರ ತನ್ನನ್ನು ವಿನಿಯನ್ ಎಂದು ಹೆಸರಿನಿಂದ ಗುರುತಿಸಿಕೊಂಡನು. ಅದರ ನಂತರ ಆಕೆ ‘ನನಗೆ ನನ್ನ ತಂದೆಯ ಜೊತೆಗೆ ಸಂಬಂಧ ಬೇಡ’ ಎಂದು ಘೋಷಿಸಿದಳು. ವಿನಿಯನನು ಆಕೆ ಹೆಸರಿನಿಂದ ಮಸ್ಕ ಈ ಹೆಸರನ್ನು ತೆಗೆದು ತಾಯಿಯ ತವರು ಮನೆಯ ಹೆಸರು ಉಪಯೋಗಿಸಲು ಆರಂಭಿಸಿದಳು. ವಿಲಿಯನನ ತಾಯಿ ಜಸ್ಟಿನ್ ವಿಲ್ಸನ್ ಕೆನಡಿಯನ್ ಲೇಖಕಿಯಾಗಿದ್ದಾಳೆ. ವಿನಿಯನ್ ಯಾವ ಶಾಲೆಯಲ್ಲಿ ಕಲಿಯುತ್ತಿದ್ದಳೋ ಅಲ್ಲಿ ಆಕೆಯ ಬ್ರೈನ್ ವಾಷ್ ಆಗಿದ್ದರಿಂದ ಆಕೆ ಕಮ್ಯುನಿಸ್ಟ್ ಆದಳು. ಕಮ್ಯುನಿಸ್ಟ್ರು ‘ಯಾರು ಶ್ರೀಮಂತರು ಇರುತ್ತಾರೆ, ಅವರು ಕೆಟ್ಟವರು’, ಎಂದು ಕಲಿಸುತ್ತಾರೆ. ಈ ವಿಚಾರಧಾರೆಯ ಪರಿಣಾಮ ವಿವಿಯನ್ ಇವಳ ಮೇಲೆ ಆಯಿತು. ಆದ್ದರಿಂದ ಆಕೆ ಮಸ್ಕ್ ಇವರ ಜೊತೆಗಿನ ಸಂಬಂಧ ತ್ಯಜಿಸಿದಳು. ಇದರಿಂದ ಮಸ್ಕ್ ಇವರು ‘ನನ್ನ ಪುತ್ರನ ಹತ್ಯೆ ಆಗಿದೆ’, ಎಂದು ಸಂದರ್ಶನದಲ್ಲಿ ಹೇಳಿದರು.
Elon Musk announces his ‘son is dead’ – Calls puberty blockers ‘sterilisation drugs’; blames ‘woke mind virus’ for killing his trans child !
“I was essentially tricked into signing documents for one of my older boys. I vowed to destroy the woke mind virus after that. The people… pic.twitter.com/FhKU0sYBbX
— Sanatan Prabhat (@SanatanPrabhat) July 23, 2024