Syllabus Change by NCERT: ಹೊಸ ಪಠ್ಯಪುಸ್ತಕದಲ್ಲಿ ‘ಹರಪ್ಪ’ ಬದಲು ‘ಸಿಂಧೂ-ಸರಸ್ವತಿ ಸಂಸ್ಕೃತಿ’ ಉಲ್ಲೇಖ !

ಕೇಂದ್ರ ಸರಕಾರದ ‘ಎನ್.ಸಿ.ಇ.ಆರ್.ಟಿ.’ ಯ ಸಮಾಜಶಾಸ್ತ್ರದ ಪುಸ್ತಕದಲ್ಲಿ ಮಹತ್ವದ ಬದಲಾವಣೆ !

ನವ ದೆಹಲಿ – ‘ಎನ್.ಸಿ.ಇ.ಆರ್.ಟಿ.’ ಎಂದರೆ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ಪ್ರಶಿಕ್ಷಣ ಪರಿಷತ್ತು ಆರನೇ ತರಗತಿಯ ಸಮಾಜಶಾಸ್ತ್ರದ ಪುಸ್ತಕವನ್ನು ಪ್ರಕಾಶನಗೊಳಿಸಿದೆ. ‘ಎಕ್ಸ್ಪ್ಲೋರಿಂಗ್ ಸೊಸೈಟಿ : ಇಂಡಿಯಾ ಅಂಡ್ ಬಿಯಾನ್ಡ್’ ಹೆಸರಿನ ಈ ಪುಸ್ತಕದಲ್ಲಿ ಹರಪ್ಪ ಸಂಸ್ಕೃತಿಯ ಹೆಸರನ್ನು ‘ಸಿಂಧು ಸರಸ್ವತಿ ಸಂಸ್ಕೃತಿ’ಯೆಂದು ಮಾಡಲಾಗಿದೆ. ಪುಸ್ತಕದಲ್ಲಿ ಅನೇಕ ಕಡೆಗಳಲ್ಲಿ ಸರಸ್ವತಿ ನದಿಯ ಉಲ್ಲೇಖ ಇದೆ. ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ಪಠ್ಯಪುಸ್ತಕಗಳು ಶಾಲೆಯಲ್ಲಿ ಉಪಯೋಗಿಸಲಾಗುವುದು. ಹಳೆಯ ಪಠ್ಯಪುಸ್ತಕದಲ್ಲಿ ಈ ನದಿಯ ಉಲ್ಲೇಖ ಕೇವಲ ವೈದಿಕ ಸೂಕ್ತಗಳಲ್ಲಿ ಇದು ಒಂದು ನದಿಯ ಹೆಸರೆಂದು ಹೇಳಲಾಗಿತ್ತು.

೧. ಸಮಾಜಶಾಸ್ತ್ರದ ಹೊಸ ಪುಸ್ತಕ ವಿದ್ಯಾರ್ಥಿಯ ಅನುಕೂಲಕ್ಕಾಗಿ ‘ಇಂಡಿಯಾ ಅಂಡ್ ದಿ ವರ್ಲ್ಡ್: ಲ್ಯಾಂಡ್ ಅಂಡ್ ಪೀಪಲ್’; ಟೇಪೇಸ್ಟಿ ಆಫ್ ದ ಪಾಸ್ಟ್; ‘ಅವರ್ ಕಲ್ಚರಲ್ ಹೆರಿಟೇಜ್ ಅಂಡ್ ನಾಲೆಜ್ ಟ್ರೆಡಿಶನ್’; ‘ಗವರ್ನನ್ಸ ಅಂಡ್ ಡೆಮೊಕ್ರಸಿ’; ‘ಇಕಾನಾವಿಕ್ ಲೈಫ್ ಅರೌಂಡ್ ಅಸ್’ ಈ ಐದು ಪ್ರಮುಖ ವಿಷಯಗಳಲ್ಲಿ ವಿಭಾಗಿಸಲಾಗಿದೆ ಎಂಬುದು ಪುಸ್ತಕದಲ್ಲಿ ಸ್ಪಷ್ಟ ಪಡಿಸಲಾಗಿದೆ.

೨. ಹೊಸ ಪಠ್ಯಪುಸ್ತಕದ ಪ್ರಕಾರ ಸರಸ್ವತಿ ನದಿ ಇಂದು ಭಾರತದ ಘಗ್ಗರ ಮತ್ತು ಪಾಕಿಸ್ತಾನದಲ್ಲಿನ ‘ಹಾಕರಾ’ (ಘಗ್ಗರ ಹಾಕರಾ ನದಿ) ಈ ಹೆಸರಿನಿಂದ ಗುರುತಿಸಲಾಗುತ್ತದೆ. ಪುಸ್ತಕದಲ್ಲಿ ಎರಡು ನಕ್ಷೆ ನೀಡಲಾಗಿದೆ.

ನೆರೆಯಿಂದ ಅಲ್ಲ ಬದಲಾಗಿ ಕಡಿಮೆ ಮಳೆ ಮತ್ತು ಸರಸ್ವತಿ ನದಿ ಒಣಗಿರುವುದರಿಂದ ಸಿಂಧೂ ಸರಸ್ವತಿ (ಹಡಪ್ಪ) ಸಂಸ್ಕೃತಿಯ ಅವನತಿ ಆಯಿತು !

ಈ ಹೊಸ ಪಠ್ಯಪುಸ್ತಕದಲ್ಲಿ ಹಡಪ್ಪ ಸಂಸ್ಕೃತಿಯ ಅವನತಿ ಹೇಗೆ ಆಯಿತು, ಅದರ ಕಾರಣಮೀಮಾಂಸ ನೀಡುವಾಗ ಎರಡು ಪ್ರಮುಖ ಕಾರಣಗಳನ್ನು ನೀಡಲಾಗಿದೆ. ಒಂದು ಎಂದರೆ ವಾತಾವರಣದಲ್ಲಿನ ಬದಲಾವಣೆ, ಅದರಿಂದ ಮಳೆಯ ಮೇಲೆ ಪರಿಣಾಮ ಆಗಿ ಮಳೆ ಕಡಿಮೆ ಆಗಿದೆ. ಇನ್ನೊಂದು ಎಂದರೆ ಸರಸ್ವತಿ ನದಿ ಒಣಗಿತು. ಆದ್ದರಿಂದ ಆ ನದಿಯ ಕಣಿವೆಯಲ್ಲಿ ವಿಕಸಿತಗೊಂಡಿರುವ ಕಾಲಿಬಂಗಾ ಮತ್ತು ಬಾಣಾವಲಿ ಇಂತಹ ನಗರಗಳು ಸಂಪೂರ್ಣ ನಾಶವಾದವು ಎಂದು ಹೇಳಲಾಗಿದೆ.

ಹಳೆಯ ಪಠ್ಯಪುಸ್ತಕದಲ್ಲಿ ಹಡಪ್ಪ ಸಂಸ್ಕೃತಿಯ ಅವನತಿಗಾಗಿ ಅನೇಕ ಕಾರಣಗಳನ್ನು ನೀಡಲಾಗಿದ್ದವು, ಅದರಲ್ಲಿ ಸರಸ್ವತಿ ನದಿ ಬರಡಾಗಿರುವ ಉಲ್ಲೇಖವೆ ಇರಲಿಲ್ಲ. ಇದರ ಜೊತೆಗೆ ಈ ಸಂಸ್ಕೃತಿಯ ಅವನತಿಗಾಗಿ ಒಂದು ಕಾರಣ ನೆರೆ ಎಂದು ಹೇಳಲಾಗಿತ್ತು.

ಸರಸ್ವತಿ ನದಿಯ ಸಂದರ್ಭದಲ್ಲಿ ಡಾ. ನಿಲೇಶ ಓಕ ಇವರನ್ನು ‘ಸನಾತನ ಪ್ರಭಾತ’ನಿಂದ ಸಂದರ್ಶನ !

ಇತ್ತೀಚಿಗೆ ‘ಸನಾಯನ ಪ್ರಭಾತ’ವು’ ಅಮೇರಿಕಾದಲ್ಲಿನ ಪ್ರಸಿದ್ಧ ಸಂಶೋಧಕ ಡಾ. ನಿಲೇಶ್ ಓಕ ಇವರ ಸಂದರ್ಶನವನ್ನು ಪಡೆಯಿತು. ಅದರಲ್ಲಿ ಅವರು ದೈವಿ ಸರಸ್ವತಿ ನದಿಯ ಬಗ್ಗೆ ನಡೆಸಿರುವ ಅದ್ವಿತೀಯ ಸಂಶೋಧನೆ ಬಗ್ಗೆ ವರ್ಣಿಸಿದರು. ಅದರ ವಿಡಿಯೋ ನೋಡುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಮಾಡಿರುವ ಈ ಮಹತ್ವಪೂರ್ಣ ಬದಲಾವಣೆ ಜೊತೆಗೆ ಇತರ ಕೂಡ ಅನೇಕ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಅದರಲ್ಲಿ ರಾಮಾಯಣ ಮತ್ತು ಮಹಾಭಾರತ ಇವು ಕೇವಲ ಮಹಾಕಾವ್ಯಗಳು ಅಥವಾ ಕಾಲ್ಪನಿಕ ಕಥೆಗಳಾಗಿರದೇ ಅದು ನಮ್ಮ ಇತಿಹಾಸವಾಗಿದೆ, ಎಂದು ಹೇಳಬೇಕು. ಹಾಗೂ ಆರ್ಯಾರ ದಾಳಿ ಸಿದ್ದಾಂತ ಇದು ಯಾವ ರೀತಿ ಸುಳ್ಳಾಗಿದೆ ಹಾಗೂ ಸನಾತನ ಹಿಂದೂ ಧರ್ಮವು ಈ ಭೂಮಿಯಿಂದಲೇ ಎಲ್ಲೆಡೆ ಪಸರಿಸಿದೆ ಎಂಬುದನ್ನು ಉದಾಹರಣೆ ಸಹಿತ ಸ್ಪಷ್ಟಪಡಿಸಬೇಕು !