ನವ ದೆಹಲಿ – ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದರಲ್ಲಿರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ನೀಡಿದ್ದ ಆದೇಶವನ್ನು ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಬೆಂಬಲಿಸಿದೆ, ದೆಹಲಿಯಲ್ಲಿ ಸಂಘಟನೆಯ ಸಭೆಯಲ್ಲಿ ಉತ್ತರ ಪ್ರದೇಶ ಸರಕಾರದ ಆದೇಶವನ್ನು ಬೆಂಬಲಿಸಲು ನಿರ್ಧರಿಸಲಾಯಿತು. ಸಭೆಯ ನಂತರ ಪ್ರಕಟಿಸಲಾದ ಮನವಿಯಲ್ಲಿ ಮಂಚ್ ಕಾವಾಡ ಯಾತ್ರಿಕರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವ ಮೂಲಕ ಸಮುದಾಯದ ಐಕ್ಯತೆಯನ್ನು ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
`ಮುಸ್ಲಿಮ್ ರಾಷ್ಟ್ರೀಯ ಮಂಚ್’, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರು ಕಾವಡ ಯಾತ್ರೆ ವಿಚಾರದಲ್ಲಿ ಮುಸ್ಲಿಮರಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಅಂಗಡಿಯ ಮೇಲೆ ಮಾಲೀಕರ ಹೆಸರನ್ನು ಬರೆಯುವ ಆದೇಶವನ್ನು ಸಾಮಾಜಿಕ ಸುವ್ಯವಸ್ಥೆಗೆ ಧಕ್ಕೆಯಾಗಬಾರದೆಂದು ನೀಡಲಾಗಿದೆ. ಯಾತ್ರಿಕರಿಗೆ ಅವರ ಇಚ್ಛೆಯಂತೆ ಆಹಾರ ಪದಾರ್ಥಗಳು ಸಿಗಬೇಕು ಅದಕ್ಕಾಗಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮುಸ್ಲಿಂ ಮಾರಾಟಗಾರರು ಹಿಂದೂ ಸಮಾಜದ ಪಾವಿತ್ರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಮಗ್ರಿಗಳನ್ನು ಪೂರೈಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕಾವಾಡ ಯಾತ್ರಿಕರ ಮೇಲೆ ಪುಷ್ಪಗಳ ಸುರಿಮಳೆ, ತಣ್ಣೀರು ಚಿಲುಮೆ, ನೀರು, ಹಣ್ಣು, ಹಣ್ಣಿನ ರಸ, ಅನ್ನಸಂತರ್ಪಣೆ ನೀಡಲಾಗುವುದು.
‘ಜಮೀಯತ್ ಉಲಾಮಾ-ಎ-ಹಿಂದ’ ನಿಂದ ವಿರೋಧ
‘ಜಮೀಯತ ಉಲಮಾ-ಎ-ಹಿಂದ’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅರ್ಷದ ಮದನಿ ಇವರು ಉತ್ತರ ಪ್ರದೇಶ ಸರಕಾರದ ಆದೇಶವನ್ನು ಟೀಕಿಸಿದ್ದಾರೆ. ಅವರು ಮಾತನಾಡಿ, ಇದು ತಾರತಮ್ಯದ ನಿರ್ಣಯವಾಗಿರುವುದರಿಂದ ದೇಶವಿರೋಧಿ ಗುಂಪುಗಳಿಗೆ ಅನುಕೂಲ ಮಾಡಿಕೊಡಲು ಅವಕಾಶ ಕಲ್ಪಿಸಿ ಧಾರ್ಮಿಕ ಸಾಮರಸ್ಯ ಕದಡುವ ಸಾಧ್ಯತೆ ಇದೆ ಎಂದರು. (‘ಮಸೀದಿಯಿಂದ ಹಿಂದೂಗಳ ಮೇಲೆ ಅವರ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ದಾಳಿಗಳು ನಡೆಯುತ್ತದೆ, ಹಾಗೆಯೇ ಲವ್ ಜಿಹಾದ ಮಾಡಲಾಗುತ್ತದೆ, ಆಗ ಧಾರ್ಮಿಕ ಸಾಮರಸ್ಯ ಹಾಗೆಯೇ ಇರುತ್ತದೆ’ ಎಂದು ಮದನಿಯವರಿಗೆ ಹೇಳುವುದಿದೆಯೇ ? ಆಗ ಇಂತಹ ಘಟನೆಗಳನ್ನು ಏಕೆ ವಿರೋಧಿಸುವುದಿಲ್ಲ? ಮುಸಲ್ಮಾನ ಯುವಕರಿಂದ ತಮ್ಮ ಸ್ವಂತ ಹೆಸರನ್ನು ಮರೆಮಾಚಿ, ಹಿಂದೂಗಳ ಹೆಸರನ್ನು ಹೇಳಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಲಾಗುತ್ತದೆ. ಅದೇ ಪ್ರಕಾರ `ಅಂಗಡಿ ಜಿಹಾದ’ ನಲ್ಲಿಯೂ ಆಗಿದೆ. ಇದರಿಂದಲೇ ಅಂಗಡಿಗಳ ಮೇಲೆ ಹೆಸರನ್ನು ಬರೆಯುವುದನ್ನು ಕಡ್ಡಾಯಗೊಳಿಸಲೇ ಬೇಕು – ಸಂಪಾದಕರು) ಸಾಮಾನ್ಯವಾಗಿ ಮುಸಲ್ಮಾನರೂ ಕಾವಡ ಯಾತ್ರೆಯ ಸಮಯದಲ್ಲಿ ಕಾವಡ ಯಾತ್ರಿಕರ ಸೇವೆಯನ್ನು ಮಾಡುತ್ತಾರೆ. ಮೊದಲ ಬಾರಿಗೆ ಇಂತಹ ಆದೇಶವನ್ನು ಮಾಡಿ ವಿಶಿಷ್ಟ ಸಮಾಜವನ್ನು ಪ್ರತ್ಯೇಕಿಸುವ ಮತ್ತು ನಾಗರಿಕರಲ್ಲಿ ತಾರತಮ್ಯ, ದ್ವೇಷವನ್ನು ಹರಡುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಸರಕಾರವು ಈ ತಾರತಮ್ಯವನ್ನು ಮಾಡುವ ನಿರ್ಣಯವನ್ನು ಹಿಂಪಡೆಯಬೇಕು ಎಂದು ಹೇಳಿದೆ.
‘Muslim Rashtriya Manch’ welcomes ‘nameplate’ order for Kanwar Yatra in Uttar Pradesh
सुप्रीम कोर्ट I कावड़ यात्रा#SupremeCourtOfIndia pic.twitter.com/aI8bWHDpnp
— Sanatan Prabhat (@SanatanPrabhat) July 22, 2024