ಬರೇಲಿ(ಉತ್ತರ ಪ್ರದೇಶ): ಹಿಂದೂ ಪ್ರಾಬಲ್ಯವಿರುವ ಪ್ರದೇಶದಿಂದ ಮೊಹರಂ ಮೆರವಣಿಗೆ ಹೋಗಲು ವಿರೋಧಿಸಿದ್ದಕ್ಕಾಗಿ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ

5 ಮಂದಿ ಹಿಂದೂಗಳಿಗೆ ಗಾಯ, ಒಬ್ಬರ ಸ್ಥಿತಿ ಚಿಂತಾಜನಕ

ಬರೇಲಿ (ಉತ್ತರ ಪ್ರದೇಶ) – ಗೌಸ್‌ಗಂಜ್ ಪ್ರದೇಶದಲ್ಲಿ ಮೊಹರಂ ಮೆರವಣಿಗೆ ವೇಳೆ ಹಿಂದೂಗಳ ಮೇಲೆ ಮತಾಂಧ ಮುಸ್ಲಿಮರು ನಡೆಸಿದ ದಾಳಿಯಲ್ಲಿ ಐವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೊಹರಂನ ಮೆರವಣಿಗೆ ಬೇರೆ ಮಾರ್ಗದಲ್ಲಿ ತಂದಿದ್ದಕ್ಕೆ ಹಿಂದೂಗಳು ವಿರೋಧಿಸಿದರು. ಪ್ರತಿ ವರ್ಷ ಹೋಗುವ ಮಾರ್ಗದ ಬದಲಾಗಿ ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಆಗ ಹಿಂದೂಗಳು ಅದನ್ನು ವಿರೋಧಿಸಿದರು ಮತ್ತು ಮೆರವಣಿಗೆ ಈ ಹಿಂದೆ ಹೋಗುತ್ತಿದ್ದ ಮಾರ್ಗದಲ್ಲಿಯೇ ಹೋಗಬೇಕೆಂದು ಆಗ್ರಹಿಸಿದರು. ಆನಂತರ, 100 ಕ್ಕೂ ಹೆಚ್ಚು ಮತಾಂಧರು ಹಿಂದೂಗಳ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೆಚ್ಚುವರಿ ಪಡೆಯೊಂದಿಗೆ ಸ್ಥಳಕ್ಕೆ ಆಗಮಿಸಿದಾಗ, ಮತಾಂಧ ಮುಸ್ಲಿಮರು ಪರಾರಿಯಾದರು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. (ಪ್ರತೀಬಾರಿ ಹಿಂದೂಗಳ ಮೆರವಣಿಗೆಯ ವೇಳೆ ಮುಸ್ಲಿಮರಿಗೆ ರಕ್ಷಣೆ ನೀಡುವ ಪೋಲೀಸರು ಮೊಹರಂ ಮೆರವಣಿಗೆ ನಡೆಯುವಾಗ ಎಲ್ಲಿ ಅಡಗಿ ಕುಳಿತಿದ್ದರು? ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರುವಾಗ ಇಂತಹ ತಪ್ಪುಗಳಾಗಬಾರದು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ ! – ಸಂಪಾದಕರು.

ಸಂಪಾದಕೀಯ ನಿಲುವು

ಒಮ್ಮೆ ಹಿಂದೂಗಳ ಮೆರವಣಿಗೆ ಮುಸಲ್ಮಾನರ ಪ್ರದೇಶದಿಂದ ಹೋಗುತ್ತಿದೆ ಎಂದು ಮತ್ತೊಮ್ಮೆ ಮುಸಲ್ಮಾನರ ಮೆರವಣಿಗೆ ಹಿಂದೂಗಳ ಪ್ರದೇಶದಿಂದ ಹೋಗಲು ಬಿಡಲಿಲ್ಲ ಎಂದು ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ!

‘ಭಾರತದಲ್ಲಿ ಮುಸ್ಲಿಮರಲ್ಲ ಹಿಂದೂಗಳು ಅಸುರಕ್ಷಿತರಾಗಿದ್ದಾರೆ’ ಎಂದು ಯಾವುದೇ ರಾಜಕೀಯ ಪಕ್ಷವು ಹೇಳುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ! ಭಾರತದಲ್ಲಿ ಹಿಂದೂಗಳಿಗೆ ಯಾರೂ ಆಶ್ರಯದಾತರಿಲ್ಲ. ಈ ಸ್ಥಿತಿಯನ್ನು ನೋಡಿದರೆ ಹಿಂದೂಗಳು ಆದಷ್ಟು ಬೇಗ ಸಂಘಟಿತರಾಗುವುದು ಅನಿವಾರ್ಯವಾಗಿದೆ!