ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ

‘ಅನೇಕ ಜನ್ಮಗಳಲ್ಲಿನ ಯಾವ ಕರ್ಮಗಳು ಒಟ್ಟಾಗಿರುತ್ತವೆಯೋ, ಆ ಎಲ್ಲ ಕರ್ಮಗಳು ವಾಸನೆಯಲ್ಲಿ ಗುಪ್ತವಾಗಿರುತ್ತವೆ, ಅವುಗಳಿಗೆ ‘ಸಂಚಿತ’ ಕರ್ಮ ಎನ್ನುತ್ತಾರೆ (ಸಂಚಿತವೆಂದರೆ ಕರ್ಮಗಳು, ಭೋಗವಲ್ಲ.) ಅವು ಯಾವಾಗೆಲ್ಲ ಹೇಗೆ ಹೇಗೆ ನಮ್ಮ ಪಾಲಿಗೆ ಬರುತ್ತವೆಯೋ, ಆವಾಗವಾಗ ಅವುಗಳನ್ನು ಭೋಗಿಸಲೇಬೇಕು. ಒಂದು ದೇಹದಲ್ಲಿ ಅನೇಕ ಯೋನಿಗಳ ಪಾಪ-ಪುಣ್ಯ ಕರ್ಮಗಳಿರುತ್ತವೆ. ಇಷ್ಟೊಂದು ಕರ್ಮಗಳನ್ನು ಒಂದೇ ಬಾರಿಗೆ ಭೋಗಿಸಲು ಸಾಧ್ಯವಾಗುವುದಿಲ್ಲ, ಅದರಲ್ಲಿನ ಕೆಲವು ಭಾಗಗಳನ್ನು ಭೋಗಿಸಬೇಕಾಗುತ್ತದೆ. ಇದರ ವಿವೇಚನೆಯನ್ನು ಮುಂದೆ ಕೊಡಲಾಗಿದೆ.

೧. ಪ್ರಾರಬ್ಧ

ಈ ಜನ್ಮದಲ್ಲಿ ಸಂಚಿತ ಕರ್ಮಗಳು ದೇಹದಿಂದ ಭೋಗಿಸಲು ಬಂದಿರುವ ಶುಭ ಅಥವಾ ಅಶುಭ ಫಲವಾಗಿರುತ್ತವೆ, ಅದಕ್ಕೆ ‘ಪ್ರಾರಬ್ಧ’ ಎಂದು ಕರೆಯುತ್ತಾರೆ. ಪ್ರಾರಬ್ಧವು ಭೋಗವಾಗಿದೆ.

೨. ಕ್ರಿಯಮಾಣ

ಈ ಜನ್ಮದಲ್ಲಿ ದೇಹ ಪಡೆದು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅದಕ್ಕೆ ‘ಕ್ರಿಯಮಾಣ’ ಎನ್ನುತ್ತಾರೆ. ಕ್ರಿಯಮಾಣವು ಕರ್ಮವಾಗಿದೆ, ಇದು ಸಂಚಿತದಲ್ಲಿ ವಿಲೀನವಾಗುತ್ತದೆ. ಸಂಚಿತ ಮತ್ತು ಕ್ರಿಯಮಾಣ ಇವು ‘ಕರ್ಮ’ಗಳಾಗಿವೆ. ಪ್ರಾರಬ್ಧವು ‘ಭೋಗ’ವಾಗಿದೆ.

೩. ‘ವಾಸನೆ’ಯನ್ನು ಇಲ್ಲವಾಗಿ ಮಾಡುವುದರ ಮಹತ್ವ

ವಾಸನೆಯ ಯೋಗದಿಂದಲೇ ಪ್ರಾಣಿಗೆ ಜನ್ಮ-ಮರಣ ಪ್ರಾಪ್ತವಾಗುತ್ತದೆ. ಮೊದಲಿನ ವಾಸನೆಯಿಂದ ದೇಹ ಉತ್ಪನ್ನವಾಗುತ್ತದೆ ಮತ್ತು ಅದು ಪ್ರಾರಬ್ಧ ಮುಗಿದ ಕೂಡಲೇ ಸಾಯುತ್ತದೆ. ಮರಣ ಹೊಂದಿದ ನಂತರ ಮುಂದೆ ಇನ್ನೊಂದು ದೇಹ ಸಿಗುತ್ತದೆ. ಈ ರೀತಿ ಅನೇಕ ಯೋನಿಗಳಲ್ಲಿ ಜನ್ಮ ಪಡೆಯುತ್ತದೆ. ಪ್ರಾಣಿ ಜನ್ಮದಲ್ಲಿಯೇ ಸಾಕಾರ ಪ್ರಕಟವಾಗುತ್ತದೆ ಮತ್ತು ಸತ್ತ ನಂತರ ಸಾಕಾರ ವಾಸನೆಯಲ್ಲಿ ಗುಪ್ತವಾಗಿರುತ್ತದೆ. ಯಾವಾಗ ತನ್ನ ಅಜ್ಞಾನವು ಇಲ್ಲವಾಗುತ್ತದೆಯೋ ಮತ್ತು ಸ್ವಸ್ವರೂಪದ ಜ್ಞಾನವಾಗುತ್ತದೆಯೋ, ಆಗಲೇ ಈ ‘ವಾಸನೆ’ ಇಲ್ಲವಾಗುತ್ತದೆ. ಈ ಬಲವಾದ ವಾಸನೆಯೇ ಸೂಕ್ಷ್ಮ ದೇಹ ಮತ್ತು ಅದು ಜಡ ಸ್ಥೂಲ ದೇಹವನ್ನು ನಡೆಸುತ್ತದೆ.

೪. ಆಧುನಿಕ ವಿಜ್ಞಾನದ ಭಾಷೆಯಲ್ಲಿ ಸಂಚಿತ, ಪ್ರಾರಬ್ಧ ಮತ್ತು ಕ್ರಿಯಮಾಣ

ಇದನ್ನೇ ನಾವು ಗಣಕಯಂತ್ರದ (ಕಂಪ್ಯೂಟರ್) ಭಾಷೆಯಲ್ಲಿ ನೋಡೋಣ.

ಅ. ಸಂಚಿತ : ಅಂದರೆ ಅನೇಕ ಜನ್ಮಗಳಲ್ಲಿ ನಿಮ್ಮ ಸ್ವಂತದ ಬಗ್ಗೆ ಬರೆದಿರುವ ‘ಸಾಫ್ಟವೇರ್’ (ಗಣಕೀಯ ತಂತ್ರಾಂಶ) (ಅಂದರೆ ಆಗಿ ಹೋಗಿರುವ ಕೃತಿಗಳು ಅಥವಾ ಕರ್ಮಗಳು)

ಆ. ಪ್ರಾರಬ್ಧ : ಅಂದರೆ ‘ಸಾಫ್ಟವೇರ್‌’ನಲ್ಲಿನ (ಅಂದರೆ ಸಂಚಿತದಲ್ಲಿನ) ಈ ಜನ್ಮದಲ್ಲಿ ಭೋಗಿಸಬೇಕಾಗುವ ಭಾಗ.

ಇ. ಕ್ರಿಯಮಾಣ : ಅಂದರೆ ಈ ಜನ್ಮದಲ್ಲಿ ತನ್ನ ಬಗ್ಗೆ ಬರೆಯುವ ‘ಸಾಫ್ಟವೇರ’ (ಅಂದರೆ ಈ ಜನ್ಮದಲ್ಲಿನ ಕರ್ಮಗಳು)

೫. ಕರ್ಮಕ್ಕನುಸಾರ ಫಲ ಸಿಗುವುದು

‘ಸಾಫ್ಟವೇರ್’ ಇವು ಶಾಶ್ವತವಾಗಿರುತ್ತವೆ ಅವು ಬದಲಾಗುವುದಿಲ್ಲ; ಆದರೆ ‘ಹಾರ್ಡವೇರ್’ (ಗಣಕಯಂತ್ರದ ಬಿಡಿಭಾಗ) ಅಂದರೆ ದೇಹವು ಬದಲಾಗಬಹುದು. ಅನೇಕ ದೇಹಗಳನ್ನು ಪಡೆದು ಆ ಜೀವವು ತನ್ನ ಇಚ್ಛೆಗೆ ವಾಸನೆಗಳಂತೆ ‘ಸಾಫ್ಟವೇರ್’ ಬರೆದು ಪೂರ್ಣಗೊಳಿಸಲು ಪ್ರಯತ್ನಿಸುತ್ತದೆ. ಅದರ ಫಲಶೃತಿಯೆಂದರೆ ‘ಸಾಫ್ಟವೇರ್’ ಜನ್ಮದ ನಂತರ ಜನ್ಮ ಮತ್ತು ಅದರಂತೆ ಸುಖ, ದುಃಖ, ರೋಗಗಳನ್ನು ಭೋಗಿಸುತ್ತದೆ. ಇದೇ ಆ ಜೈವಿಕ ದೇಹದ ಗಣಕೀಯ ದೇಹದ ಫಲಶೃತಿ ಅಥವಾ ತೀರ್ಪುರೂಪಿ ಫಲಪ್ರಾಪ್ತಿ. ಶುಭ ವಾಸನೆಯಿಂದ ಬರೆದಿದ್ದರೆ, ಶುಭ ಫಲಗಳು, ಅಶುಭ ಇಚ್ಛೆಯನ್ನು ಬರೆದಿದ್ದರೆ, ಅಶುಭ (ದುಃಖದಾಯಕ) ಫಲಗಳು ಸಿಗುತ್ತವೆ. ಎರಡೂ ಇದ್ದರೆ, ಮಿಶ್ರ ಫಲಗಳು ಸಿಗುತ್ತವೆ.

(ಆಧಾರ : ಮಾಸಿಕ ‘ಸಂತಕೃಪಾ’, ಏಪ್ರಿಲ್‌ ೧೯೮೮)