ವಿದಿಶಾ (ಮಧ್ಯಪ್ರದೇಶ) ದ ಶಾಲೆಯೊಂದರಲ್ಲಿ ಸ್ವಯಂಸೇವಾ ಸಂಸ್ಥೆಯ ಹೆಸರಿನಲ್ಲಿ ಯೇಸುಕ್ರಿಸ್ತನ ಸ್ತುತಿಗೀತೆಗಳನ್ನು ಹಾಡುವ ಉಚಿತ ಪುಸ್ತಕಗಳನ್ನು ವಿತರಿಸಲು ಪ್ರಯತ್ನ !

ವಿದಿಶಾ (ಮಧ್ಯಪ್ರದೇಶ) – ಕ್ರೈಸ್ತ ಮಿಷನರಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಸೋಗಿನಲ್ಲಿ ಮಿಷನರಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಯೇಸುಕ್ರಿಸ್ತನ ಕಥೆಗಳಿಗೆ ಸಂಬಂಧಿಸಿದ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಈ ಪುಸ್ತಕಗಳ ಹೆಸರುಗಳು ಸಹ ಹಿಂದೂ ಧರ್ಮಗ್ರಂಥಗಳಂತಿವೆ, ಹಾಗೂ ಒಳಗಿನ ಕಥೆಗಳು ಯೇಸುವಿನ ಮಹಿಮೆಯಿಂದ ತುಂಬಿವೆ. ಈ ಪ್ರಕರಣಗಳು ಜನರನ್ನು ನೇರವಾಗಿ ಮತಾಂತರಕ್ಕೆ ಕಾರಣವಾಗುತ್ತವೆ. ಜುಲೈ 19 ರಂದು ಯುವತಿಯೊಬ್ಬಳು ಇಲ್ಲಿನ ಲಿರಾ ಪ್ರದೇಶದ ‘ಪಾಂಡೋಚಾ ಮಿಡಲ್ ಸ್ಕೂಲ್‌’ಗೆ ಬಂದು ಸ್ವಯಂಸೇವಾ ಸಂಸ್ಥೆಗೆ ಸೇರಿದ್ದಾಗಿ ದಾವೆ ಮಾಡಿದೆ. ಬಳಿಕ ಶಾಲಾ ಮಕ್ಕಳಿಗೆ ಏಸುವಿನ ಮಹಿಮೆಗೆ ಸಂಬಂಧಿಸಿದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಆರಂಭಿಸಿದರು. ಈ ಪುಸ್ತಕದ ಹೆಸರು ‘ಪವಿತ್ರ ಗ್ರಂಥಗಳು, ಸ್ತೋತ್ರಗಳು ಮತ್ತು ನೀತಿಶಾಸ್ತ್ರ’ ಎಂದಾಗಿವೆ. ಈ ಪುಸ್ತಕದ ಶೀರ್ಷಿಕೆಯು ಈ ಪುಸ್ತಕವು ಹಿಂದೂ ಧರ್ಮದ ಬಗ್ಗೆ ಇರುತ್ತದೆ ಎಂಬ ಭ್ರಮೆ ಆಗುತ್ತದೆ; ಆದರೆ ವಾಸ್ತವವಾಗಿ ಈ ಪುಸ್ತಕವು ಯೇಸುಕ್ರಿಸ್ತನ ಪವಾಡ ಕಥೆಗಳಿಂದ ತುಂಬಿತ್ತು. ಇಷ್ಟು ಮಾತ್ರವಲ್ಲದೆ, ಕ್ರೈಸ್ತ ಧರ್ಮವನ್ನು ವೈಭವೀಕರಿಸುವ ಭರದಲ್ಲಿ ಪುಸ್ತಕದಲ್ಲಿ ಹಿಂದೂ ಸಂತರನ್ನು ನಿಂದಿಸಲಾಗಿತ್ತು. ಈ ಯುವತಿಗೆ ಪುಸ್ತಕ ವಿತರಣೆಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದಾಗ ಆಕೆ ಶಿಕ್ಷಕರೊಂದಿಗೆ ವಾಗ್ವಾದಕ್ಕಿಳಿದಳು. ಪೊಲೀಸರಿಗೆ ಕರೆ ಮಾಡುವ ಮಾತು ಕೇಳಿ ಬಂದ ಕೂಡಲೇ ಓಡಿ ಹೋದಳು.

1. ಈ ಯುವತಿ ಭಾಗ್ಯನಗರದಿಂದ ಬಂದಿರುವುದಾಗಿ ಹೇಳಿದ್ದಾಳೆ. ಹಲವು ಬಾರಿ ಕೇಳಿದರೂ ಆಕೆ ತನ್ನ ಹೆಸರನ್ನು ಬಹಿರಂಗಪಡಿಸಲಿಲ್ಲ. ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಮಾತ್ರ ಅವಳು ಹೇಳಿದಳು. ಆಕೆ ಇತರ 2 ಮಹಿಳೆಯರೊಂದಿಗೆ ಬೀನಾದಿಂದ ಬಂದಿದ್ದಳು ಎನ್ನಲಾಗಿದೆ. ಆ ಮಹಿಳೆಯರು ವಿವಿಧ ಗ್ರಾಮಗಳಲ್ಲಿ ಇಂತಹ ಪುಸ್ತಕಗಳನ್ನು ಹಂಚಿರುವ ಶಂಕೆ ವ್ಯಕ್ತವಾಗಿದೆ.

2. ಈ ಘಟನೆ ನಡೆದ ಶಾಲೆಯ ಸಂಜಯ್ ಲೋಧಿ ಎಂಬ ಶಿಕ್ಷಕ ಯುವತಿಯನ್ನು ತಡೆದಿದ್ದರು. ಸಂಜಯ್ ಲೋಧಿ ಸ್ಥಳೀಯ ಮಾಧ್ಯಮಗಳಿಗೆ ಯುವತಿಯು ಹತ್ತಿರದ ಹಳ್ಳಿಗಳಲ್ಲಿ ಉಚಿತ ಪುಸ್ತಕಗಳನ್ನು ವಿತರಿಸುತ್ತಿದ್ದಾಳೆ ಮತ್ತು ಬಡ ಮತ್ತು ಪರಿಶಿಷ್ಟ ಜಾತಿಗಳಿಗೆ ಸೇರಿದ ಹೆಚ್ಚು ಹೆಚ್ಚು ಮನೆಗಳನ್ನು ತಲುಪಲು ಪ್ರಯತ್ನಿಸುತ್ತಿದ್ದಳು. ಅವಳು ಸಾಗರ್ ಮತ್ತು ಇಟಾರ್ಸಿಯಲ್ಲಿ ಪುಸ್ತಕಗಳನ್ನು ವಿತರಿಸಿರುವುದಾಗಿ ಹೇಳಿಕೊಂಡಿದ್ದಾಳೆ.

3. ಈ ಸಮಯದಲ್ಲಿ ಬಜರಂಗದಳದ ಸಹ ಸಂಚಾಲಕ ರವಿ ಲೋಧಿ ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಸಹ ಶಿಕ್ಷಕಿ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಇರುವಾಗ, ಕ್ರೈಸ್ತ ಮಿಷನರಿಗಳು ಇಂತಹ ಕೆಲಸವನ್ನು ಮಾಡಲು ಎಷ್ಟು ಧೈರ್ಯ ಮಾಡುತ್ತಾರೆ ? ಈ ರೀತಿ ಹಿಂದೂಗಳ ಧಾರ್ಮಿಕ ಪುಸ್ತಕಗಳನ್ನು ಮಿಷನರಿ ಶಾಲೆಗಳಲ್ಲಿ ಹಂಚಲು ಹಿಂದೂ ಸಂಗಟನೆಗಳು ಯತ್ನಿಸಿದ್ದರೆ, ಈ ದೇಶದ ಕಪಟ ಜಾತ್ಯತೀತರು ಆಕಾಶ-ಪಾತಾಳ ಒಂದು ಮಾಡುತ್ತಿದ್ದರು !