ಉತ್ಸಾಹ, ಆನಂದ ಮತ್ತು ಸೇವೆಯ ತಳಮಳವಿರುವ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಉಮಾ ಪೈ (ವಯಸ್ಸು ೮೯ ವರ್ಷ) !

ಶ್ರೀಮತಿ ಉಮಾ ಪೈ

‘ಉತ್ತರಕನ್ನಡ ಜಿಲ್ಲೆಯಲ್ಲಿ ಅಧ್ಯಾತ್ಮಪ್ರಸಾರದ ಸೇವೆಯನ್ನು ಮಾಡುತ್ತಿರುವಾಗ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀಮತಿ ಉಮಾ ಪೈ (ಮಾಮಿ, ವಯಸ್ಸು ೮೯ ವರ್ಷ) ಇವರಿಂದ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಪ್ರತಿಯೊಂದು ವಿಷಯವನ್ನು ಬರೆದಿಟ್ಟು ಕೃತಿ ಮಾಡುವುದು 

ಮಾಮಿಯವರಿಗೆ ವಯಸ್ಸಾಗಿರುವುದರಿಂದ ಅವರಿಗೆ ಅನೇಕ ವಿಷಯಗಳು ನೆನಪಿನಲ್ಲಿರುವುದಿಲ್ಲ. ಅದಕ್ಕಾಗಿ ಅವರು ಪ್ರತಿಯೊಂದು ವಿಷಯವನ್ನು ಬರೆದಿಟ್ಟು ಅದಕ್ಕನುಸಾರ ಆಯೋಜನೆಯನ್ನು ಮಾಡುತ್ತಾರೆ, ಉದಾ. ಅವರ ಮನೆಗೆ ಯಾರು ಮತ್ತು ಯಾವಾಗ ಬರಲಿದ್ದಾರೆ ? ಎಷ್ಟು ಜನರ ಅಡುಗೆಯನ್ನು ಮಾಡಬೇಕು ? ಇತ್ಯಾದಿ. ಅನಂತರ ಅವರು ಬರೆದಿಟ್ಟಿರುವಂತೆ ಕೃತಿಯನ್ನು ಮಾಡುತ್ತಾರೆ.

೨. ಸ್ವಯಂಶಿಸ್ತು

ಅವರು ಪ್ರತಿದಿನ ಮುಂಜಾನೆ ಬೇಗನೇ ಏಳುವುದು, ವ್ಯಾಯಾಮ ಮಾಡುವುದು, ಆಧ್ಯಾತ್ಮಿಕ ಉಪಾಯವನ್ನು ಮಾಡುವುದು, ದೇವರ ಪೂಜೆಯನ್ನು ಮಾಡುವುದು, ಭಜನೆ ಮತ್ತು ಸ್ತೋತ್ರಪಠಣವನ್ನು ಮಾಡುವುದು, ಈ ಕೃತಿಗಳನ್ನು ತಪ್ಪದೇ ಮಾಡುತ್ತಾರೆ.

ಸೌ. ತಾರಾ ಶೆಟ್ಟಿ

೩. ಉತ್ಸಾಹ ಮತ್ತು ಆನಂದಿ

ಮಾಮಿಯವರ ಮಕ್ಕಳು ವಿದೇಶದಲ್ಲಿರುತ್ತಾರೆ. ಅವರು ಮನೆಯಲ್ಲಿ ಒಬ್ಬರೇ ಇರುತ್ತಾರೆ, ಆದರೂ ಅವರು ಯಾವಾಗಲೂ ಸಕಾರಾತ್ಮಕ ಮತ್ತು ಆನಂದದಿಂದಿರುತ್ತಾರೆ. ಅವರು ಪ್ರತಿದಿನ ಮಾನಸಪೂಜೆಯನ್ನು ಮಾಡುತ್ತಾರೆ. ಅವರು ಗುರುದೇವರ ಅನುಸಂಧಾನದಲ್ಲಿರುತ್ತಾರೆ. ಅವರ ಜೊತೆಯಲ್ಲಿರುವಾಗ ನನಗೂ ಆನಂದ ಮತ್ತು ಉತ್ಸಾಹವೆನಿಸುತ್ತದೆ.

೪. ಇತರರಿಗೆ ಸಹಾಯ ಮಾಡುವುದು

ಅವರು ಎಲ್ಲರನ್ನೂ ಪ್ರೀತಿಸುತ್ತಾರೆ. ಒಮ್ಮೆ ಅವರ ಮನೆಗೆಲಸ ಮಾಡುವ ಹುಡುಗನಿಗೆ ನೌಕರಿ ಸಿಗುತ್ತಿರಲಿಲ್ಲ. ಅವರು ಆ ಹುಡುಗನಿಗೆ ಕೆಲಸ ಸಿಗುವವರೆಗೆ ಸಹಾಯ ಮಾಡಿದರು, ಹಾಗೆಯೇ ಅವರು ಮನೆಗೆಲಸ ಮಾಡುವ ಇನ್ನೊಬ್ಬ ಹುಡುಗನಿಗೆ ಬಾಡಿಗೆಗೆ ಮನೆ ದೊರಕಿಸಲು ಸಹಾಯ ಮಾಡಿದರು.

೫. ವ್ಯಷ್ಟಿ ಸಾಧನೆಯ ವರದಿಯನ್ನು ತಳಮಳದಿಂದ ಕೊಡುವುದು

ಅವರು ಪ್ರತಿ ಬುಧವಾರ ವ್ಯಷ್ಟಿ ಸಾಧನೆಯ ವರದಿಯನ್ನು ತಪ್ಪದೇ ಕೊಡುತ್ತಾರೆ. ಅವರು ವ್ಯಷ್ಟಿ ಸಾಧನೆಯ ವರದಿಯನ್ನು ತುಂಬಾ ತಳಮಳದಿಂದ ಕೊಡುತ್ತಾರೆ.

೬. ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾ

ಅವರು ಪ್ರತಿದಿನ ದೂರದರ್ಶನದಲ್ಲಿ ವಾರ್ತೆಗಳನ್ನು ನೋಡುತ್ತಾರೆ. ಅದರಲ್ಲಿ ನಮ್ಮ ದೇಶದ ಸದ್ಯ ಸ್ಥಿತಿ, ರಾಜಕೀಯ ಘಟನಾವಳಿ ಅಥವಾ ಧರ್ಮದ ಬಗ್ಗೆ ಏನಾದರೂ ಇದ್ದರೆ ಮಾಮಿಯವರು ಅದನ್ನು ಬರೆದಿಡುತ್ತಾರೆ. ಇಷ್ಟೇ ಅಲ್ಲದೇ, ಸಮಯವಿದ್ದರೆ ಅವರು ನಮಗೆ ಆ ವಿಷಯದ ಬಗ್ಗೆ ಹೇಳುತ್ತಾರೆ, ಹಾಗೆಯೇ ಅವರು ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದಲ್ಲಿನ ಪ್ರತಿಯೊಂದು ವಿಷಯವನ್ನು ಓದಿ ಅದರ ಬಗ್ಗೆ ಬರೆದಿಡುತ್ತಾರೆ ಮತ್ತು ಅದರ ಬಗ್ಗೆ ಅಧ್ಯಯನ ಮಾಡುತ್ತಾರೆ. ಅವರಿಗೆ ಇದೇ ಜನ್ಮದಲ್ಲಿ ‘ಹಿಂದೂ ರಾಷ್ಟ್ರ’ವನ್ನು ನೋಡಬೇಕೆಂಬ ತಳಮಳವಿದೆ.

೭. ಇಳಿವಯಸ್ಸಿನಲ್ಲಿಯೂ ಸೇವೆ ಮಾಡುವುದು

ಅವರು ವಾರಕ್ಕೊಮ್ಮೆ ಅವರ ಮನೆಯ ಹತ್ತಿರದಲ್ಲಿರುವ ದೇವಸ್ಥಾನದಲ್ಲಿ ಪ್ರಸಿದ್ಧಿ ಫಲಕವನ್ನು ಬರೆಯುತ್ತಾರೆ, ಹಾಗೆಯೇ ಗುರುಪೂರ್ಣಿಮೆಗಾಗಿ ಸಮಾಜದಿಂದ ಅರ್ಪಣೆಯನ್ನು ಪಡೆಯುವ ಸೇವೆಯನ್ನು ಮಾಡುತ್ತಾರೆ.

೮. ಗುರುಗಳ ಬಗೆಗಿನ ಭಾವ

೮ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಸ್ಮರಿಸುತ್ತಿರುವುದು : ಗುರುಗಳ ಬಗ್ಗೆ ಏನಾದರೂ ವಿಷಯ ಬಂದರೆ ಮಾಮಿಯವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತೆಗೆದುಕೊಂಡ ಒಂದು ಸತ್ಸಂಗವನ್ನು ನೆನಪಿಸಿಕೊಳ್ಳುತ್ತಾರೆ. ಈ ಹಿಂದೆ ಗುರುದೇವರಿಗೆ ಪ್ರಸಾದರೂಪದಲ್ಲಿ ಕಳುಹಿಸಿದ ಉಂಡೆಯ (ಲಾಡು) ಬಗ್ಗೆ ಅವರಿಗೆ ನೆನಪು ಬರುತ್ತದೆ. ಅವರು ಗುರುದೇವರಿಗೆ ಇಷ್ಟವಾಗುವ ರಾಮಫಲವನ್ನು ರಾಮನಾಥಿ (ಗೋವಾ)ಗೆ ಕಳುಹಿಸುತ್ತಾರೆ.

೮ ಆ. ವೃದ್ಧಾಪ್ಯದಲ್ಲಿಯೂ ಬ್ರಹ್ಮೋತ್ಸವಕ್ಕಾಗಿ ಬಸ್ಸಿನಲ್ಲಿ ಪ್ರವಾಸ ಮಾಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವಕ್ಕಾಗಿ ಮಾಮಿಯವರು ನಮ್ಮ ಜೊತೆಗೆ ಬಸ್ಸಿನಲ್ಲಿ ಗೋವಾಗೆ ಬಂದರು. ಇಳಿವಯಸ್ಸಿನಲ್ಲಿಯೂ ಅವರಿಗೆ ಪ್ರವಾಸ, ಉಷ್ಣತೆ ಇತ್ಯಾದಿಗಳ ತೊಂದರೆಯಾಗಲಿಲ್ಲ. ಅವರಿಗೆ ಪರಾತ್ಪರ ಗುರು ಡಾ. ಆಠವಲೆಯವರನ್ನು ಹತ್ತಿರದಿಂದ ನೋಡಲು ಸಿಕ್ಕಿತು. ಮಾಮಿಯವರಲ್ಲಿ ಗುರುದೇವರ ಬಗ್ಗೆ ತುಂಬಾ ಭಾವವಿರುವುದರಿಂದ ಇದು ಸಾಧ್ಯವಾಯಿತು.

ಗುರುದೇವರು ನನಗೆ ಆದರ್ಶ ಸಾಧಕರ ಸಹವಾಸದಲ್ಲಿಟ್ಟು ಕಲಿಯುವ ಅವಕಾಶವನ್ನು ನೀಡಿದರು. ಅದಕ್ಕಾಗಿ ನಾನು ಸಂತರ ಮತ್ತು ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

ಸೌ. ತಾರಾ ಶೆಟ್ಟಿ, ಉತ್ತರ ಕನ್ನಡ ಜಿಲ್ಲೆ. (೧೫.೫.೨೦೨೪)