Muslim Marriage Law : ಅಸ್ಸಾಂನಲ್ಲಿ ಶೀಘ್ರದಲ್ಲೇ ಮುಸಲ್ಮಾನ ವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ! – ಮುಖ್ಯಮಂತ್ರಿ ಸರಮಾ

ವಿವಾಹ ನಿಯಮಗಳಲ್ಲಿ ಸಮಾನತೆ ಬರಲಿದೆ !

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಗೌಹಾಟಿ (ಅಸ್ಸಾಂ) – ಮುಸಲ್ಮಾನ ವಿವಾಹ ಕಾಯಿದೆ 1935 ಅನ್ನು ರದ್ದುಗೊಳಿಸಿ ಹೊಸ ಕಾನೂನುಗಳನ್ನು ಜಾರಿಗೆ ತರಲು ಮಂತ್ರಿ ಮಂಡಲದ ಸಭೆಯಲ್ಲಿ ಅನುಮೋದಿಸಲಾಗಿದೆ. ಹೊಸ ಕಾಯಿದೆಯಿಂದ ಮದುವೆ ಮತ್ತು ವಿಚ್ಛೇದನದ ನಿಯಮಗಳಲ್ಲಿ ಸಮಾನತೆ ಬರಲಿದೆ, ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬಾಲ್ಯ ವಿವಾಹದಂತಹ ಆಚರಣೆಗಳಿಗೂ ಕಡಿವಾಣ ಹಾಕಬಹುದು ಜೊತೆಗೆ, ಈ ವಿಧೇಯಕದ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದಿದ್ದಾರೆ.

ಮಂತ್ರಿ ಮಂಡಲದ ಸಭೆಯ ನಂತರ ಜುಲೈ 18ರಂದು ಸರಮಾ ಮಾತನಾಡಿ, ಬಾಲ್ಯ ವಿವಾಹದ ವಿರುದ್ಧ ಹೆಚ್ಚುವರಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಈಗಿರುವ ಕಾನೂನು ಮುಸಲ್ಮಾನ್ ಯುವತಿಯರಿಗೆ 18 ವರ್ಷಕ್ಕಿಂತ ಮೊದಲು ಹಾಗೂ ಯುವಕರಿಗೆ 21 ವರ್ಷಕ್ಕಿಂತ ಮೊದಲು ಮದುವೆಯಾಗಲು ಅವಕಾಶ ನೀಡುತ್ತದೆ.

ಫೆಬ್ರವರಿ 2023 ರಂದು ಅಸ್ಸಾಂ ಸರ್ಕಾರವು ಅಸ್ಸಾಂ ಮುಸಲ್ಮಾನ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ ಮತ್ತು 1935ರ ನಿಯಮಗಳನ್ನು ರದ್ದುಗೊಳಿಸಲು ಒಪ್ಪಿಗೆ ನೀಡಿತ್ತು. ಪ್ರತಿಪಕ್ಷಗಳು ಈ ಕ್ರಮವು ಮುಸಲ್ಮಾನರ ವಿರುದ್ಧದ ತಾರತಮ್ಯವಾಗಿದೆ ಎಂದು ಟೀಕಿಸಿದ್ದವು.

ಸಂಪಾದಕೀಯ ನಿಲುವು

ಈ ರೀತಿ ಪ್ರತಿ ರಾಜ್ಯದಲ್ಲೂ ಧಾರ್ಮಿಕ ತಾರತಮ್ಯ ಮಾಡುವ ಬದಲು ಕೇಂದ್ರ ಸರ್ಕಾರವು ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕು !