Kanwar Yatra Uttarakhand : ಹರಿದ್ವಾರ (ಉತ್ತರಾಖಂಡ): ಅಂಗಡಿ ಮಾಲೀಕರಿಗೂ ತಮ್ಮ ಹೆಸರು ಬರೆಯುವಂತೆ ಆದೇಶ !

ಹರಿದ್ವಾರ (ಉತ್ತರಾಖಂಡ) – ಉತ್ತರ ಪ್ರದೇಶ ಸರಕಾರದ ಆದೇಶದ ನಂತರ ಈಗ ಉತ್ತರಾಖಂಡದಲ್ಲಿನ ಹರಿದ್ವಾರದಲ್ಲಿ ಕಾವಡಾ ಯಾತ್ರೆಯ ಸಮಯದಲ್ಲಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮೇಲೆ ಸ್ವಂತದ ಹೆಸರು ಬರೆಯಬೇಕೆಂದು ಆದೇಶ ನೀಡಲಾಗಿದೆ. ಹಿರಿಯ ಪೋಲಿಸ್ ಅಧಿಕಾರಿ ಅವರು ಈ ಆದೇಶವನ್ನು ದೃಢಪಡಿಸಿದ್ದಾರೆ. ಈ ಆದೇಶದಿಂದ ಅಂಗಡಿ ಮಾಲಿಕ ಮತ್ತು ಅಂಗಡಿಯಲ್ಲಿನ ಸಿಬ್ಬಂದಿಗಳ ಹೆಸರನ್ನು ಅಂಗಡಿಯ ಮುಂಭಾಗದಲ್ಲಿ ಬರೆಯುವುದು ಆವಶ್ಯಕವಾಗಿದೆ. ಇದರ ಆಧಾರದ ಮೇಲೆ ಅಂಗಡಿಗಳ ಪರಿಶೀಲನೆ ಮಾಡಲಾಗುವುದು. ಜುಲೈ ೨೨ ರಿಂದ ಕಾವಡಾ ಯಾತ್ರೆ ಆರಂಭವಾಗುವುದು.

ಹೋಟೆಲ್ ಮಾಲೀಕರಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಸೂಚನೆಯ ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಎಚ್ಚರಿಕೆ ಕೂಡ ನೀಡಿದ್ದಾರೆ. ಆದರೂ ಕೂಡ ಹರಿದ್ವಾರದಲ್ಲಿನ ಅನೇಕ ಹೋಟೆಲ್ ಮಾಲೀಕರು ಪೊಲೀಸರ ಈ ಸೂಚನೆಯನ್ನು ಪಾಲಿಸಿಲ್ಲ.

ಮೊಟ್ಟೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ನಿಷೇಧ !

ಕಾವಾಡಾ ಯಾತ್ರೆಯ ವೇಳೆ ಹೋಟೆಲ್ ಮತ್ತು ಢಾಬಾ ಮಾಲಿಕರಿಗೆ ಮೊಟ್ಟೆ, ಮಾಂಸ, ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸಬಾರದೆಂದು ಪೊಲೀಸರು ಸೂಚನೆ ನೀಡಿದ್ದಾರೆ. ಮದ್ಯಸೇವನೆಯನ್ನು ನಿಷೇಧಿಸಲಾಗಿದೆ. ಹೋಟೆಲ್ ಮತ್ತು ಢಾಬಾಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪದಾರ್ಥದ ಪಟ್ಟಿ ಕೂಡ ಮುಂಭಾಗದಲ್ಲಿ ಹಾಕಬೇಕೆಂದು ಆದೇಶಿಸಲಾಗಿದೆ.