Ram Setu Mapping Via Satellite: ನಾಸಾ ಉಪಗ್ರಹದ ಸಹಾಯದಿಂದ ‘ಇಸ್ರೋ’ ರಾಮಸೇತುವಿನ ಮೊದಲ ನಕ್ಷೆ ಸಿದ್ಧ !

ಬೆಂಗಳೂರು – ಇಸ್ರೋ ವಿಜ್ಞಾನಿಗಳು ನಾಸಾದ ‘ಐ.ಸಿ.ಇ. SAT-2 ಹೆಸರಿನ ಉಪಗ್ರಹದ ಸಹಾಯದಿಂದ ಸಮುದ್ರದ ನೀರಿನೊಳಗೆ ಹೋಗಿರುವ ರಾಮಸೇತುವಿನ ನಕ್ಷೆಯನ್ನು ಸಿದ್ಧಪಡಿಸಿದೆ. ಇದು ಮೊದಲ ಸಮಗ್ರ ನಕ್ಷೆ ಎಂದು ಹೇಳಲಾಗುತ್ತದೆ. ರಾಮಸೇತು ‘ಆಡಮ್ಸ್ ಬ್ರಿಜ್’ ಎಂದೂ ಪ್ರಸಿದ್ಧವಾಗಿದೆ. ರಾಮಸೇತು ಕುರಿತು ಇಸ್ರೋ ವಿಜ್ಞಾನಿಗಳು ನಡೆಸಿದ ಸಂಶೋಧನೆಯನ್ನು ‘ಸೈಂಟಿಫಿಕ್ ರಿಪೋರ್ಟ್ಸ’ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ (‘ಜರ್ನಲ್’ನಲ್ಲಿ) ಪ್ರಕಟಿಸಲಾಗಿದೆ. ಇಸ್ರೋದ ಜೋಧಪುರ ಮತ್ತು ಭಾಗ್ಯನಗರದ ‘ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್’ನ ವಿಜ್ಞಾನಿಗಳು ಈ ನಕಾಶೆಯನ್ನು ಸಿದ್ಧಪಡಿಸಿದ್ದಾರೆ.

ಈ ವಿಜ್ಞಾನಿಗಳು, ನಾವು ನಾಸಾದ ಉಪಗ್ರಹ ‘ಐ.ಸಿ.ಇ. ಸ್ಯಾಟ್ 2’ನ ‘ವಾಟರ್ ಪೆನೆಟ್ರೇಟ್ ಫೋಟಾನ್‌ಗಳು’ ಬಳಸಿ ರಾಮ ಸೇತುವಿನ ಮೊದಲ ನಕಾಶೆಯನ್ನು ಸಿದ್ಧಪಡಿಸಿದೆವು. ರಾಮಸೇತುವಿನ 99.98 ಪ್ರತಿಶತವು ತುಂಬಾ ಆಳವಿಲ್ಲದ ನೀರಿನಲ್ಲಿ ಮುಳುಗಿತು. ಹಾಗಾಗಿ ದೋಣಿ ಮೂಲಕ ಅಥವಾ ಪ್ರತ್ಯಕ್ಷ ನೀರಿನಲ್ಲಿಳಿದು ಸಮೀಕ್ಷೆ ಮಾಡಲು ಸಾಧ್ಯವಿಲ್ಲ. ಗಿರಿಬಾಬು ದಂಡಬತ್ತುಲ ಯೋಜನೆಯ ನೇತೃತ್ವ ವಹಿಸಿದ್ದರು.

ವಿಜ್ಞಾನಿಗಳು 2018 ರಿಂದ 2023 ರವರೆಗಿನ ಡೇಟಾವನ್ನು ಬಳಸಿ, ಮುಳುಗಿರುವ ಸೇತುವೆಯ ಸಂಪೂರ್ಣ ಉದ್ದವನ್ನು 10 ಮೀ ‘ರೆಸಲ್ಯೂಶನ್’ ನೊಂದಿಗೆ ನಕಾಶೆ ಸಿದ್ಧಪಡಿಸಲಾಗಿದೆ. ಈ ನಕಾಶೆಯ ಪ್ರಕಾರ, 29 ಕಿಮೀ ಉದ್ದದ ರಾಮಸೇತು ಸಮುದ್ರ ಮಟ್ಟದಿಂದ 8 ಮೀಟರ್ ಎತ್ತರವನ್ನು ಹೊಂದಿದೆ. ಈ ರೀತಿಯ ನಕಾಶೆಯು ಇದುವರೆಗಿನ ಎಲ್ಲಕ್ಕಿಂತ ಡೊದ್ದ ನಕಾಶೆಯಾಗಿದೆ ಎಂದು ಹೇಳಿದರು.