Statement from Senior Advocate: ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ವನ್ನು ‘ಎಲ್.ಬಿ. ನಗರ’ ಬರೆಯುವುದು ತಪ್ಪು ! – ನ್ಯಾಯವಾದಿ ರಮಣಮೂರ್ತಿ

ಭಾಗ್ಯನಗರ ಉಚ್ಚನ್ಯಾಯಾಲಯದ ನ್ಯಾಯವಾದಿ ರಮಣಮೂರ್ತಿ

ಭಾಗ್ಯನಗರ (ತೆಲಂಗಾಣ) – ಭಾಗ್ಯನಗರದ ಒಂದು ನಗರಕ್ಕೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನು ಇಡಲಾಗಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೈದರಾಬಾದ್ ಮೆಟ್ರೋ ರೈಲು ಮತ್ತು ಇತರ ಸಂಸ್ಥೆಗಳಲ್ಲಿ ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ ಬದಲು ‘ಎಲ್.ಬಿ. ನಗರ’ ಎಂದು ಬರೆಯುತ್ತಾರೆ. ಒಂದು ಸ್ಥಳಕ್ಕೆ ಬಹಳ ಮುಖ್ಯವಾದ ವ್ಯಕ್ತಿಯ ಹೆಸರಿದ್ದರೆ, ಅದನ್ನು ಪೂರ್ಣವಾಗಿ ಬರೆಯುವುದು ಸೂಕ್ತವಾಗಿದೆ. ಅವರು ‘ಎಲ್.ಬಿ. ನಗರ’ ಹೀಗೆ ಸಂಕ್ಷಿಪ್ತವಾಗಿ ಬರೆಯುವುದು ಅಥವಾ ಉಚ್ಚರಿಸುವುದು ಯೋಗ್ಯವಲ್ಲ ಎಂದು ಭಾಗ್ಯನಗರ ಉಚ್ಚನ್ಯಾಯಾಲಯದ ನ್ಯಾಯವಾದಿ ರಮಣಮೂರ್ತಿ ಅವರು ಹೇಳಿದ್ದಾರೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೈದರಾಬಾದ್ ಮೆಟ್ರೋ ರೈಲ್ವೆ ಮತ್ತು ಇತರ ಸಂಸ್ಥೆಗಳು ‘ಎಲ್.ಬಿ. ನಗರ’ ಬದಲಿಗೆ ‘ಲಾಲ್ ಬಹದ್ದೂರ್ ಶಾಸ್ತ್ರಿ ನಗರ’ ಎಂದು ಪೂರ್ಣ ಬರೆಯಬೇಕು, ಎಂದು ನ್ಯಾಯವಾದಿ ರಮಣಮೂರ್ತಿ ಆಗ್ರಹಿಸಿದ್ದಾರೆ.