Tamil Nadu Police Beard : ತಮಿಳುನಾಡು ಪೊಲೀಸರು ಕರ್ತವ್ಯದಲ್ಲಿರುವಾಗ ಗಡ್ಡಕ್ಕೆ ಅಭ್ಯಂತರವಿಲ್ಲ ! – ಮದ್ರಾಸ್ ಉಚ್ಚನ್ಯಾಯಾಲಯ

ಮದ್ರಾಸ್ ಉಚ್ಚನ್ಯಾಯಾಲಯದ ಆದೇಶ

ಚೆನ್ನೈ (ತಮಿಳುನಾಡು) – ಮುಸಲ್ಮಾನ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುವಾಗ ಗಡ್ಡ ಇಟ್ಟುಕೊಳ್ಳಬಹುದು, ಎಂದು ಮದ್ರಾಸ್ ಉಚ್ಚನ್ಯಾಯಾಲಯವು ತೀರ್ಪು ನೀಡಿದೆ. ನ್ಯಾಯಾಲಯವು, 1957ರ ಮದ್ರಾಸ್ ಪೊಲೀಸ್ ಗೆಜೆಟ್ ಪ್ರಕಾರ ತಮಿಳುನಾಡಿನಲ್ಲಿ ಮುಸಲ್ಮಾನ್ ಪೊಲೀಸರಿಗೆ ಕರ್ತವ್ಯದಲ್ಲಿರುವಾಗಲೂ ಗಡ್ಡ ಇಟ್ಟುಕೊಳ್ಳುವ ಅವಕಾಶ ನೀಡಿದೆ ಎಂದು ಹೇಳಿದೆ.

ನ್ಯಾಯಾಲಯವು, ಭಾರತವು ವಿವಿಧ ಧರ್ಮಗಳು ಮತ್ತು ಪದ್ಧತಿಗಳನ್ನು ಅನುಸರಿಸುವ ದೇಶವಾಗಿದೆ. ಈ ಭೂಮಿಯ ಸೌಂದರ್ಯ ಮತ್ತು ಅನನ್ಯತೆಯು ಅದರ ನಾಗರಿಕರ ಶ್ರದ್ಧೆ ಮತ್ತು ಸಂಸ್ಕೃತಿಯ ವೈವಿಧ್ಯತೆಯಲ್ಲಿದೆ. ತಮಿಳುನಾಡು ಸರಕಾರದ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಾದ ಶಿಸ್ತಿನ ಅವಶ್ಯಕತೆ ಇದೆ; ಆದರೆ ಇಲಾಖೆಯಲ್ಲಿ ಶಿಸ್ತು ಕಾಯ್ದುಕೊಳ್ಳುವ ಕರ್ತವ್ಯವು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೆ, ವಿಶೇಷವಾಗಿ: ಮುಸಲ್ಮಾನರಿಗೆ ಗಡ್ಡ ಬಿಟ್ಟಿದ್ದಕ್ಕಾಗಿ ಶಿಕ್ಷಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

2018 ರಲ್ಲಿ, 1 ತಿಂಗಳ ರಜೆಯ ಮೇಲೆ ಮಕ್ಕಾಕ್ಕೆ ಹೋಗಿ ಬಂದ ನಂತರ ಒಬ್ಬ ಪೋಲೀಸ್ ಸಿಬ್ಬಂದಿ ಗಡ್ಡವನ್ನು ಬೆಳೆಸಿದ್ದಕ್ಕಾಗಿ ಅವನಿಗೆ ಶಿಕ್ಷೆಯಾಗಿತ್ತು.

ಸಂಪಾದಕೀಯ ನಿಲುವು

ಹಿಂದೂ ಪೋಲೀಸ್ ಸಿಬ್ಬಂದಿಗಳು ಕೆಲಸದಲ್ಲಿರುವಾಗ ಹಣೆಯ ಮೇಲೆ ತಿಲವನ್ನು ಹಚ್ಚಿಕೊಳ್ಳುವಂತಹ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸಬೇಕು, ಹೀಗೆ ಯಾರಾದರೂ ಹೇಳಿದರೆ ಆಶ್ಚರ್ಯಪಡಬೇಡಿ !