Statement from Assam CM : ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 40 ಕ್ಕೆ ಏರಿಕೆ; ಇದು ನನ್ನ ಜೀವನ್ಮರಣದ ಪ್ರಶ್ನೆಯಾಗಿದೆ ! – ಅಸ್ಸಾಂ ಮುಖ್ಯಮಂತ್ರಿ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರಿಂದ ಗಂಭೀರ ಹೇಳಿಕೆ!

ರಾಂಚಿ (ಜಾರ್ಖಂಡ್) – ಅಸ್ಸಾಂನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಜನಸಂಖ್ಯೆಯು ನನಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಂದು ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.40ಕ್ಕೆ ತಲುಪಿದೆ. 1951ರಲ್ಲಿ ಮುಸ್ಲಿಮರು ಶೇ.12ರಷ್ಟಿದ್ದರು. ಇಂದು ನಾವು ಹಲವು ಜಿಲ್ಲೆಗಳನ್ನು ಕಳೆದುಕೊಂಡಿದ್ದೇವೆ. ಇದು ನನ್ನ ಪಾಲಿಗೆ ರಾಜಕೀಯ ಸೂತ್ರವಲ್ಲ. ಬದಲಾಗಿ ಇದು ನನಗೆ ಜೀವನ್ಮರಣ ಸಮಸ್ಯೆಯಾಗಿದೆ. ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಅಸ್ಸಾಂನ ಪರಿಸ್ಥಿತಿಯ ಗಂಭೀರತೆಯನ್ನು ವ್ಯಕ್ತಪಡಿಸಿದ್ದಾರೆ, ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜುಲೈ 1 ರಂದು ಮುಖ್ಯಮಂತ್ರಿ ಸರಮಾ ಇವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಅವರು, ಒಂದು ಸಮಾಜವು ಅಪರಾಧ ಚಟುವಟಿಕೆಗಳನ್ನು ಮಾಡುತ್ತಿದೆ. ಈ ಜನರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿದ್ದೂ ಇದು ಕಳವಳಕಾರಿಯಾಗಿದೆ. ಒಂದೇ ಧರ್ಮದವರು ಹೀಗೆ ಮಾಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ; ಆದರೆ ಲೋಕಸಭೆ ಚುನಾವಣೆ ನಂತರದ ಪರಿಸ್ಥಿತಿ ಆತಂಕಕಾರಿಯಾಗಿದೆ. ಅಸ್ಸಾಂನಲ್ಲಿ ಬಾಂಗ್ಲಾದೇಶದ ಜನರು ಮಾತ್ರ ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಬಾಂಗ್ಲಾದೇಶದಿಂದ ಬಂದಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಗಂಭೀರ ಪರಿಸ್ಥಿತಿ ಉದ್ಭವಿಸಿದಾಗ, ಮುಖ್ಯಮಂತ್ರಿ ಸರಮಾ ಅವರು ಕಠಿಣ ಕಾನೂನುಗಳನ್ನು ಮಾಡಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು !