Indore Bank Robbery : ಇಂದೋರ್‌ (ಮಧ್ಯಪ್ರದೇಶ) ನಲ್ಲಿ ಓರ್ವ ವ್ಯಕ್ತಿಯಿಂದ ಹಗಲಿನಲ್ಲೇ ಬ್ಯಾಂಕ್ ದರೋಡೆ !

ಗಾಳಿಯಲ್ಲಿ ಗುಂಡು ಹಾರಿಸಿದ !

ರೈನ್ ಕೋಟ್ ಹಾಕಿಕೊಂಡು ಬಂದಿದ್ದ ದರೋಡೆಕೋರನು

ಇಂದೋರ್ (ಮಧ್ಯಪ್ರದೇಶ) – ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಹಗಲಿನಲ್ಲೇ ದರೋಡೆ ಮಾಡಲಾಗಿದೆ. ಮುಖ ಮುಚ್ಚಿ, ರೈನ್ ಕೋಟ್ ಹಾಕಿಕೊಂಡು ಬಂದಿದ್ದ ದರೋಡೆಕೋರನು ಬ್ಯಾಂಕ್ ಒಳಗೆ ನುಗ್ಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆ ನಂತರ ಅವನು ಬ್ಯಾಂಕಿನ ಹಣವನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾದನು. ಅಂದಾಜು 7 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ಹೇಳಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತ ಸಿಂಹ ಇವರು ಮಾತನಾಡಿ, ಆರೋಪಿಯ ಬಳಿ ಬಂದೂಕು ಇತ್ತು. ಅವನು ಬ್ಯಾಂಕ್ ನ ಒಳಗೆ ಬಂದು ಮೊದಲಿಗೆ ಗುಂಡನ್ನು ಹಾರಿಸಿ ಭಯವನ್ನು ಹುಟ್ಟಿಸಿದನು. ಬಳಿಕ ಅವನು ಕ್ಯಾಶ್ ಕೌಂಟರ್ ನಲ್ಲಿ ಕುಳಿತಿದ್ದ ಮಹಿಳಾ ಉದ್ಯೋಗಿಯಿಂದ ಬ್ಯಾಗನಲ್ಲಿ ಹಣವನ್ನು ತುಂಬಿಕೊಂಡು ಓಡಿ ಹೋಗಿದ್ದಾನೆ ಇವನೊಂದಿಗೆ ಇನ್ನೂ ಕೆಲವು ದರೋಡೆಕೋರರು ಇರುವ ಸಾಧ್ಯತೆ ಇದೆ. ಅವರ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದಿದ್ದಾರೆ.

ಸಂಪಾದಕೀಯ ನಿಲುವು

ಒಬ್ಬನೇ ಬ್ಯಾಂಕ್ ನಲ್ಲಿ ದರೋಡೆ ಮಾಡಿ ಓಡಿ ಹೋದನು, ಇದು ಪೊಲೀಸರಿಗೆ ನಾಚಿಕೆಗೇಡು !