muharram afghanistan : ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರದಿಂದ ಮೊಹರಂಗೆ ನಿಷೇಧ!

ಕಾಬೂಲ್ – ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವು ಮೊಹರಂ ಮತ್ತು ಆಶುರಾ ಹಬ್ಬಗಳನ್ನು ಆಚರಿಸಲು ನಿರ್ಬಂಧಗಳನ್ನು ವಿಧಿಸಿದೆ. ಹೆರಾತ್ ಮತ್ತು ಹಲವು ಪ್ರಾಂತ್ಯಗಳಲ್ಲಿ ಮೊಹರಂ ಧ್ವಜಗಳನ್ನು ತಾಲಿಬಾನ್ ತೆಗೆದುಹಾಕಿದ್ದಾರೆ. ತಾಲಿಬಾನ್ ನ ಸಾಂಪ್ರದಾಯಿಕ 10 ದಿನಗಳ ಆಚರಣೆಗಳನ್ನು 3 ದಿನಗಳವರೆಗೆ ಕಡಿತಗೊಳಿಸಿದ್ದು, ಅದನ್ನು ಕಾಬೂಲ್‌ನ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತ ರೂಪದಲ್ಲಿ ಆಚರಿಸಲಿದ್ದಾರೆ. ಶಿಯಾ ಧರ್ಮ ಗುರುಗಳು, ಕಾರ್ಯಕರ್ತರು ಮತ್ತು ರಾಜಕೀಯ ವ್ಯಕ್ತಿಗಳು ತಾಲಿಬಾನ್ ಈ ನಿರ್ಣಯವನ್ನು ಖಂಡಿಸಿದ್ದಾರೆ.

* ಆಶುರಾ ಹಬ್ಬ ಎಂದರೇನು?
ಪ್ರಪಂಚದಾದ್ಯಂತದ ಮುಸ್ಲಿಮರು ಜುಲೈ 16 ರಂದು ಅಶುರಾವನ್ನು ಆಚರಿಸಿದರು. ಆಶುರಾ ದಿನವನ್ನು ಎಲ್ಲಾ ಮುಸ್ಲಿಮರು ಆಚರಿಸುತ್ತಾರೆ; ಆದರೆ ಶಿಯಾ ಮುಸ್ಲಿಮರಿಗೆ ಮಾತ್ರ ಇದು ಶೋಕಾಚರಣೆಯ ದಿನವಾಗಿದೆ. ಏಳನೇ ಶತಮಾನದಲ್ಲಿ ಕರಬಲಾದ (ಈಗಿನ ಇರಾಕ್‌ನಲ್ಲಿನ ) ಯುದ್ಧದ ವಾರ್ಷಿಕೋತ್ಸವವೇ ಈ ಆಶುರಾ ದಿನವಾಗಿದೆ. ಈ ಯುದ್ಧದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಗ ಹುಸೇನ್ ಹುತಾತ್ಮರಾಗಿದ್ದರು. ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಿನಲ್ಲಿ ಮೊಹರಂನ 10 ನೇ ದಿನದಂದು ಆಶುರಾ ಹಬ್ಬವನ್ನು ಎಲ್ಲಾ ಮುಸ್ಲಿಮರು ಆಚರಿಸುತ್ತಾರೆ.

ಸಂಪಾದಕೀಯ ನಿಲುವು

ಅಫ್ಘಾನಿಸ್ತಾನದಂತಹ ಮುಸ್ಲಿಂ ರಾಷ್ಟ್ರದಲ್ಲಿ ಮುಸ್ಲಿಮರು ಯಾವುದೇ ಹಿಂಸಾತ್ಮಕ ಕೃತಿಯನ್ನು ಮಾಡದಿದ್ದರೂ ಸಹ ಮೊಹರಂಗೆ ನಿರ್ಬಂಧ ಹೇರಲಾಗುತ್ತದೆ, ಆದರೆ ಭಾರತದಲ್ಲಿ ಮೊಹರಂ ಮೆರವಣಿಗೆಯ ವೇಳೆ ಹಿಂಸಾಚಾರವಾಗುತ್ತಿದ್ದರೂ ಅದರ ಮೇಲೆ ನಿಷೇಧ ಹೇರುತ್ತಿಲ್ಲ.