ಸಂಸ್ಕೃತದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗಾದರೆ ಮದರಸಾಗಳಲ್ಲಿನ ವಿದ್ಯಾರ್ಥಿಗಳಿಗೆ ಏಕಿಲ್ಲ ? – ಸಂಸದ ರಮಾಶಂಕರ್ ರಾಜಭರ್, ಸಮಾಜವಾದಿ ಪಕ್ಷ

ಸಂಸದ ರಮಾಶಂಕರ್ ರಾಜಭರ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ಸಂಸ್ಕೃತ ಶಾಲೆಗಳು ಮತ್ತು ಉತ್ತರ ಪ್ರದೇಶ ಶಿಕ್ಷಣ ಇಲಾಖೆಯ ಶಾಲೆಗಳಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ, ಆದರೆ ಮದರಸಾಗಳಲ್ಲಿನ ಪ್ರತಿಭಾವಂತ ಮಕ್ಕಳಿಗೆ ಏಕೆ ಪ್ರಶಸ್ತಿ ಕೊಡುತ್ತಿಲ್ಲ ?, ಎಂದು ಉತ್ತರ ಪ್ರದೇಶದ ಸಲೇಮಪುರ ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ರಮಾಶಂಕರ್ ರಾಜಭರ ಇವರು ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಟ್ಯಾಬ್‌ಲೆಟ್ ಮತ್ತು ಒಂದು ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಿದರು. ಇದರೊಂದಿಗೆ ಅವರು ಪೋಷಕರ ಖಾತೆಗೆ 1 ಸಾವಿರದ 200 ರೂಪಾಯಿಗಳನ್ನು ಜಮಾ ಮಾಡಿದರು.

ಈ ಕುರಿತು ಸಂಸದ ರಾಜಭರ್ ಅವರು ಮೇಲಿನ ಪ್ರಶ್ನೆಯನ್ನು ಎತ್ತಿದರು. ‘ಮದರಸಾಗಳಲ್ಲಿನ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಬಾರದು, ಇದೇ ಬಿಜೆಪಿಯ ‘ಸಬಕಾ ಸಾಥ್-ಸಬಕಾ’ ವಿಕಾಸ ಇದೆಯೇ?’, ಎಂದು ರಾಜಭರ್ ಪ್ರಶ್ನೆಯನ್ನು ಕೇಳಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರ ಓಲೈಕೆಗಾಗಿ ಒಂದೇ ಒಂದು ಅವಕಾಶವನ್ನೂ ಬಿಡದ ಸಮಾಜವಾದಿ ಪಕ್ಷ !
  • ಸರಕಾರದಿಂದ ಮದರಸಾಗಳಿಗೆ ನೀಡಿದ ಅನುದಾನದ ಬಗ್ಗೆ ‘ಮದರಸಾಗಳಿಗೆ ಅನುದಾನಾ ಹಾಗಿದ್ದರೆ ವೇದಪಾಠಶಾಲೆಗಳಿಗೆ ಏಕೆ ಇಲ್ಲ ?’, ಎಂದು ಋಆಜಭರ ಇವರು ಪ್ರಶ್ನೆ ಕೇಳಿದ್ದಾರೆಯೇ ? ಇದರಿಂದ ಅವರ ಹಿಂದೂಗಳ ಮೇಲಿನ ದ್ವೇಷ ಕಂಡುಬರುತ್ತದೆ !