ಗೌರಿ ಲಂಕೇಶ ಕೊಲೆ ಪ್ರಕಾರಣದ 3 ಶಂಕಿತರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು

ಬೆಂಗಳೂರು – ಪತ್ರಕರ್ತೇ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿನ ಶಂಕಿತ ಆರೋಪಿ ಅಮಿತ ಡೇಗವೇಕರ, ಸುರೇಶ ಎಚ್. ಎಲ್. ಮತ್ತು ಕೇ. ಟಿ. ನವೀನ ಕುಮಾರ್ ಈ ಮೂವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜುಲೈ ೧೬, ೨೦೨೪ ರಂದು ಜಾಮಿನು ನೀಡಿದೆ. ಈ ಶಂಕಿತ ಆರೋಪಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಕಲ್ಬುರ್ಗಿ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಸ್. ವಿಶ್ವಜೀತ ಶೆಟ್ಟಿ ಇವರು ಜಾಮೀನು ನೀಡಿದ್ದಾರೆ. ಶಂಕಿತ ಆರೋಪಿಯ ವತಿಯಿಂದ ನ್ಯಾಯವಾದಿ ಅರುಣ ಶ್ಯಾಮ, ನ್ಯಾಯವಾದಿ ಮಧುಕರ ದೇಶಪಾಂಡೆ, ನ್ಯಾಯವಾದಿ ಬಸವರಾಜ ಸಪ್ಪಣ್ಣವರ, ನ್ಯಾಯವಾದಿ ಉಮಾಶಂಕರ್ ಮೇಗುಂಡಿ, ನ್ಯಾಯವಾದಿ ದಿವ್ಯ ಬಾಳೆಹತ್ತಲ ಮತ್ತು ನ್ಯಾಯವಾದಿ ನಿಶಾಂತ ಕುಶಲಪ್ಪ ಇವರು ಉಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

೧. ‘ಈ ಪ್ರಕರಣದಲ್ಲಿನ ಇನ್ವೋರ್ವ ಶಂಕಿತ ಆರೋಪಿ ಮೋಹನ ನಾಯಕ ಇವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಈ ಹಿಂದೆ ಜಾಮೀನು ನೀಡಿದೆ. ಇದನ್ನು ಗಮನಿಸಿ ನಮಗೂ ಕೂಡ ಜಾಮೀನು ನೀಡಬೇಕೆಂದು ಮೇಲಿನ ಶಂಕಿತ ಆರೋಪಿಗಳು ಆಗ್ರಹಿಸಿದ್ದರು.

೨. ಈ ಪ್ರಕರಣದಲ್ಲಿನ ಶಂಕಿತ ಆರೋಪಿ ಮೋಹನ ನಾಯಕ ಇವರಿಗೆ ಉಚ್ಚ ನ್ಯಾಯಾಲಯವು ಡಿಸೆಂಬರ್ ೨೦೨೩ ರಲ್ಲಿ ಜಾಮೀನು ನೀಡಿತ್ತು. ಅವರಿಗೆ ನ್ಯಾಯಾಲಯದ ಮೊಕದ್ದಮೆಯ ವಿಚಾರಣೆಯಲ್ಲಿ ಆಗುವ ವಿಳಂಬದಿಂದ ಜಾಮೀನು ನೀಡಲಾಗಿತ್ತು. ‘ಆರೋಪ ಪತ್ರದಲ್ಲಿ ನಮೂದಿಸಿರುವ ೫೨೭ ಸಾಕ್ಷಿಗಳ ಪೈಕಿ ಕೇವಲ ೯೦ ಸಾಕ್ಷಿಗಳ ಪರಿಶೀಲನೆ ನಡೆದಿತ್ತು’, ಎಂದು ಮೋಹನ ನಾಯಕ ಇವರ ನ್ಯಾಯವಾದಿಗಳು ಯುಕ್ತಿವಾದ ನಡೆಸಿದ್ದರು.

೩. ಸರಕಾರಿ ನ್ಯಾಯವಾದಿಗಳು ಈ ಮೂವರ ಜಾಮಿನಿನ ಅರ್ಜಿಯ ಕುರಿತು ಆಕ್ಷೇಪಿಸಿದ್ದರು. ‘ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಖಂಡ ಪೀಠದಿಂದ ಎಂ. ಎಂ. ಕಲ್ಬುರ್ಗಿ ಹತ್ಯೆಯ ಪ್ರಕರಣದಲ್ಲಿನ ಈ ಮೂರು ಜನರ ಅರ್ಜಿ ನಿರಾಕರಿಸಿದ್ದಾರೆ. ಆದ್ದರಿಂದ ಈ ಮೂರು ಜನರ ಅರ್ಜಿ ತಳ್ಳಿಹಾಕಬೇಕೆಂದು’ ಸರಕಾರಿ ನ್ಯಾಯವಾದಿಗಳು ಜಾಮೀನ ಅರ್ಜಿಯ ಕುರಿತು ಆಕ್ಷೇಪಿಸುವಾಗ ಹೇಳಿದ್ದರು.