ಜಮ್ಮು ಕಾಶ್ಮೀರದಲ್ಲಿನ ರಾಜಕೀಯ ಪಕ್ಷದಿಂದ ಭಯೋತ್ಪಾದನೆ ಹೆಚ್ಚಿದೆ ! – ಪೋಲಿಸ ವರಿಷ್ಠಾಧಿಕಾರಿ ಆರ್.ಆರ್. ಸ್ವೆನ್

ಜಮ್ಮು-ಕಾಶ್ಮೀರದ ಪೋಲಿಸ ವರಿಷ್ಠಾಧಿಕಾರಿ ಆರ್.ಆರ್. ಸ್ವೆನ್ ಇವರ ದಾವೆ !

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದ ಪ್ರಾದೇಶಿಕ ರಾಜಕಾರಣದಿಂದ ಪಾಕಿಸ್ತಾನಿಗಳ ನುಸುಳುವಿಕೆ ನಡೆಸುವಲ್ಲಿ ಯಶಸ್ವಿ ಆಗಿದೆ. ಭಯೋತ್ಪಾದಕರು ಹತರಾಗುತ್ತಾರೆ, ಆಗ ರಾಜಕಾರಣಿಗಳು ಭಯೋತ್ಪಾದಕರ ಮನೆಗೆ ಹೋಗಿ ಅವರ ಕುಟುಂಬದವರ ಬಗ್ಗೆ ಕನಿಕರ ತೋರಿಸುತ್ತಾರೆ, ಇದಂತೂ ಸಾಮಾನ್ಯ ವಿಷಯವಾಗಿದೆ, ಇಂತಹ ಪದಗಳಲ್ಲಿ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿ ಆರ್.ಆರ್. ಸ್ವೆನ್ ಇವರು ಕಾಶ್ಮೀರದಲ್ಲಿನ ಭಯೋತ್ಪಾದಕರಿಗಾಗಿ ಸ್ಥಳೀಯ ರಾಜಕಾರಣಿಗಳನ್ನು ಜವಾಬ್ದಾರರನ್ನಾಗಿ ಮಾಡಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸ್ವೆನ್ ಇವರು ಅವರ ಭಾಷಣದಲ್ಲಿ ‘ಜಮಾತ್-ಎ-ಇಸ್ಲಾಮಿ’ ಈ ಸಂಘಟನೆಯ ಉಲ್ಲೇಖ ಮಾಡುತ್ತಾ ಈ ಸಂಘಟನೆ ಭಯೋತ್ಪಾದಕರಿಗೆ ಧಾರ್ಮಿಕ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಪೋಲಿಸ ವರಿಷ್ಠಾಧಿಕಾರಿ ಆರ್.ಆರ್. ಸ್ವೆನ್

ಪೊಲೀಸ ವರಿಷ್ಠಾಧಿಕಾರಿ ಸ್ವೆನ್ ಮಾತು ಮುಂದುವರೆಸಿ,

೧. ಪ್ರಾದೇಶಿಕ ರಾಜಕಾರಣದಿಂದ ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ನಾಗರಿ ಸಮಾಜದಲ್ಲಿನ ಎಲ್ಲಾ ಮಹತ್ವದ ಅಂಶಗಳಲ್ಲಿ ಯಶಸ್ವಿಯಾಗಿ ನುಸುಳುತ್ತಿದೆ. ಈ ವಿಷಯದ ಬಗ್ಗೆ ಸಾಕಷ್ಟು ಸಾಕ್ಷಿಗಳು ಕೂಡ ಇವೆ. ಅವರು ಕಪಟತನದಿಂದ ಸಾಮಾನ್ಯ ಜನರಿಗೆ ಮತ್ತು ಸುರಕ್ಷಾ ಸಿಬ್ಬಂದಿಗಳಿಗೆ ಹೆದರಿಸಿದ್ದಾರೆ.

೨. ಪೊಲೀಸ ಅಧಿಕ್ಷಕ ಮಟ್ಟದ ಅಧಿಕಾರಿಗಳನ್ನು ಎಂದಿಗೂ ಮಾಡದೇ ಇರುವ ಅಪರಾಧಕ್ಕಾಗಿ ಭಯೋತ್ಪಾದಕರ ಜೊತೆಗೆ ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

೩. ೨೦೧೪ ರಲ್ಲಿ ೨ ಹುಡುಗಿಯರು ಮುಳುಗಿ ಸಾವನ್ನಪ್ಪಿರುವ ಘಟನೆಯನ್ನು ಬೇರೆ ರೀತಿಯಲ್ಲಿ ಚಿತ್ರಿಸಲಾಗಿತ್ತು. ಅವರ ಅಪಹರಣವಾಗಿದೆ ಎಂದು ಘೋಷಿಸಿ ಕಾಶ್ಮೀರ ಕಣಿವೆಯಲ್ಲಿ ಮುಷ್ಕರ ಮತ್ತು ಗಲಭೆ ನಡೆದವು. ನಂತರ ಸಿಬಿಐ ಮತ್ತು ಏಮ್ಸ್ ಫಾರಿನ್ಸಿಕ್ (ನ್ಯಾಯ ವೈದ್ಯಕ ಪ್ರಯೋಗ ಶಾಲೆ) ಅವರ ಸಮೀಕ್ಷೆಯಲ್ಲಿ ಆ ಹುಡುಗಿಯರ ಸಾವು ಅಪಘಾತದಲ್ಲಿ ಆಗಿರುವುದು ಸಾಬೀತಾಯಿತು.

ಸಂಪಾದಕೀಯ ನಿಲುವು

ಕಳೆದ ೩೫ ವರ್ಷ ಯಾವುದೇ ಪೊಲೀಸ ಅಧಿಕಾರಿಗಳು ಹೇಳುವ ಧೈರ್ಯ ಮಾಡಿರಲಿಲ್ಲ ಅದನ್ನು ಆರ್.ಆರ್. ಸ್ವೆನ್ ಇವರು ಹೇಳಿದ್ದಾರೆ. ಈಗ ಇಂತಹ ರಾಜಕಾರಣಿಗಳ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !