HJS Submits Memorandum to CM: ಆಷಾಢಿ ವಾರಿ(ಮೆರವಣಿಗೆ)ಯ ಸಮಯದಲ್ಲಿ ಮದ್ಯ, ಮಾಂಸದ ಅಂಗಡಿಗಳು ತಕ್ಷಣ ಮುಚ್ಚಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಆದೇಶ !

ಹಿಂದೂ ಜನಜಾಗೃತಿ ಸಮಿತಿ ಮತ್ತು ಶಿವಸೇನೆಯ ಆಧ್ಯಾತ್ಮಿಕ ಆಘಾಡಿ ಇವರಿಂದ ಮುಖ್ಯಮಂತ್ರಿಗಳ ಭೇಟಿ

ಪಂಡರಪುರ ಇಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತೀರ್ಥಕ್ಷೇತ್ರ ಮದ್ಯ ಮಾಂಸದಿಂದ ಮುಕ್ತಗೊಳಿಸಲು ಆಗ್ರಹಿಸಿರುವ ಶ್ರೀ. ಸುನಿಲ ಘನವಟ

ಪಂಡರಪುರ (ಸೋಲಾಪುರ್) – ಆಷಾಢ ವಾರಿ ೨ ದಿನದಲ್ಲಿ ಇರಲಿದೆ, ಆದರೂ ಪಂಢರಪುರ ನಗರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳು ರಾಜಾರೋಷವಾಗಿ ತೆರೆದಿದೆ. ಆದ್ದರಿಂದ ವಾರಕರಿಗಳ ಭಾವನೆಗಳಿಗೆ ನೋವು ಉಂಟಾಗುತ್ತಿದೆ, ಅಷಾಢಿ ವಾರಿಯ ಸಮಯದಲ್ಲಿ ಮದ್ಯ-ಮಾಂಸದ ಅಂಗಡಿಗಳು ತಕ್ಷಣ ಮುಚ್ಚಸಬೇಕೆಂದು, ಶಿವಸೇನಾ ಆಧ್ಯಾತ್ಮಿಕ ಆಘಾಡಿಯ ಪ್ರದೇಶ ಅಧ್ಯಕ್ಷ ಹ.ಭ.ಪ. ಅಕ್ಷಯ ಮಹಾರಾಜ ಭೋಸಲೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸ್ಗಢ ಸಂಘಟಕ ಶ್ರೀ. ಸುನೀಲ ಘನವಟ ಇವರು ಮುಖ್ಯಮಂತ್ರಿ ಏಕನಾಥ ಶಿಂದೆ ಇವರನ್ನು ಭೇಟಿ ಮಾಡಿ ಆಗ್ರಹಿಸಿದರು. ಇದರ ಕುರಿತು ಮುಖ್ಯಮಂತ್ರಿಗಳು ‘ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ತಕ್ಷಣ ಆದೇಶ ನೀಡಿ ಮದ್ಯ-ಮಾಂಸದ ಅಂಗಡಿಗಳನ್ನು ಮುಚ್ಚಿಸುವ ಆದೇಶ ನೀಡಿದರು’, ಎಂದು ಹೇಳಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಶ್ರೀ. ಹಿರಲಾಲ್ ತಿವಾರಿ ಇವರು ಕೂಡ ಉಪಸ್ಥಿತರಿದ್ದರು.

ಹ.ಭ.ಪ ಅಕ್ಷಯ ಮಹಾರಾಜ ಭೋಸಲೆ (ಬಲಗಡೆ) ಇವರ ಜೊತೆಗೆ ಚರ್ಚಿಸುತ್ತಿರುವ ಶ್ರೀ. ಸುನಿಲ ಘನವಟ

ಆರೋಗ್ಯ ಸಚಿವ ಡಾ. ತಾನಾಜಿ ಸಾವಂತ (ಎಡಕ್ಕೆ) ಇವರ ಜೊತೆ ಚರ್ಚೆ ನಡೆಸುವಾಗ ಶ್ರೀ. ಸುನಿಲ ಘನವಟ