Cancelled Free Travel For Women : ಕಾಂಗ್ರೆಸ್ ಸರಕಾರಕ್ಕೆ ಮುಳುವಾಯಿತು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ !

ಬಸ್ ದರ ಶೇಖಡ ೨೦ ರಷ್ಟು ಹೆಚ್ಚಿಸುವ ಪ್ರಸ್ತಾಪ !

ಬೆಂಗಳೂರು – ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ‘ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಯೋಜನೆ ಆರಂಭಿಸುವೆವು’, ಎಂದು ಆಶ್ವಾಸನೆ ನೀಡಿತ್ತು. ಅದರ ನಂತರ ರಾಜ್ಯದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಕ್ಷಣ ಮಹಿಳೆಯರಿಗಾಗಿ ಉಚಿತ ಬಸ್ ಸೇವೆ ಆರಂಭಿಸಿದರು; ಆದರೆ ಈಗ ಅದರ ಆರ್ಥಿಕ ಭಾರ ರಾಜ್ಯ ಸಾರಿಗೆ ಇಲಾಖೆಯ ಮೇಲೆ ಬರುತ್ತಿರುವುದರಿಂದ ಸರಕಾರ ಬಸ್ ದರ ಹೆಚ್ಚಿಸಲಿದೆ. ಕರ್ನಾಟಕ ಸಾರಿಗೆ ಇಲಾಖೆಯ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಇವರು, ಬಸ್ ದರ ಹೆಚ್ಚಿಸುವುದರ ಕುರಿತು ನಾವು ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಇದರ ಸಂದರ್ಭದಲ್ಲಿ ನಾವು ಪ್ರಸ್ತಾಪ ಅಂಗೀಕರಿಸಿದ್ದು ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವವರಿದ್ದೇವೆ ಎಂದು ಹೇಳಿದರು. ನಾವು ರಾಜ್ಯ ಸರಕಾರಕ್ಕೆ ಶೇಕಡ ೧೫ ರಿಂದ ೨೦ ರಷ್ಟು ದರ ಏರಿಕೆ ಮಾಡುವ ಪ್ರಸ್ತಾವ ನೀಡುವವರಿದ್ದೇವೆ. ಈ ಹಿಂದೆ ೨೦೧೯ ರಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಡಿಸೈಲ್ ಪ್ರತಿ ಲೀಟರ್ ಗೆ ೬೦ ರೂಪಾಯಿ ಇತ್ತು, ಈಗ ಅದು ೯೯ ರೂಪಾಯಿಗೆ ತಲುಪಿದೆ. ಇದಲ್ಲದೆ ಬಸ್ಸಿನ ಬಿಡಿ ಭಾಗಗಳ ಬೆಲೆ ಕೂಡ ಹೆಚ್ಚಾಗಿದೆ. ಸಿಬ್ಬಂದಿಗಳಿಂದ ಸತತ ಸಂಬಳ ಏರಿಕೆಗಾಗಿ ಆಗ್ರಹಿಸಲಾಗುತ್ತಿದೆ. ಸಿಬ್ಬಂದಿಗಳ ಜೊತೆಗೆ ಆಗಿರುವ ಒಪ್ಪಂದದಲ್ಲಿ ‘ಪ್ರತಿ ೪ ವರ್ಷ ಕ್ಕೆ ಸಂಬಳದ ವರದಿ ಪಡೆಯಿರಿ’, ಎಂದು ಹೇಳಲಾಗಿದೆ. ಕಳೆದ ಸರಕಾರವು ಕೋರೋನಾದಿಂದ ಅದನ್ನು ಪಾಲಿಸಲಿಲ್ಲ. ಆದ್ದರಿಂದ ನಮಗಾಗಿ ಇದು ಸವಾಲಾಗಿದೆ. ನಮ್ಮ ಮೇಲೆ ಈ ಬಗ್ಗೆ ಒತ್ತಡ ಇದೆ. ಟಿಕೆಟ್ ಬೆಲೆ ಏರಿಸಿದರೆ ಎಲ್ಲಾ ಸಮಸ್ಯೆಗಳಿಂದ ನಾವು ಸುಲಭವಾಗಿ ಪಾರಾಗಬಹುದು ಎಂದು ಹೇಳಿದರು.

೩ ತಿಂಗಳಲ್ಲಿ ೨೯೫ ಕೋಟಿ ರೂಪಾಯಿ ನಷ್ಟ !

ಶ್ರೀನಿವಾಸ್ ಇವರು ಮಾತು ಮುಂದುವರೆಸುತ್ತಾ, ಕಳೆದ ೩ ತಿಂಗಳು ಯೋಚನೆ ಮಾಡಿದರೆ ನಮಗೆ ೨೯೫ ಕೋಟಿ ರೂಪಾಯ ನಷ್ಟವಾಗಿದೆ. ನಮ್ಮ ಬಳಿ ಸುಮಾರು ೮ ಸಾವಿರ ಬಸ್ಸುಗಳಿದ್ದು ಅವು ಎಲ್ಲವೂ ಇಲ್ಲಿಯವರೆಗೆ ೧೦ ರಿಂದ ೧೧ ಲಕ್ಷ ಕಿಲೋಮೀಟರ್ ಓಡಿವೆ. ಸುಮಾರು ೪೫೦ ರಿಂದ ೫೦೦ ವೋಲ್ವೋ ಬಸ್ಸುಗಳು ಇವೆ, ಅವುಗಳು ಕೂಡ ೨೦ ಲಕ್ಷ ಕಿಲೋಮೀಟರ್ ಓಡಿವೆ. ಆದ್ದರಿಂದ ನಮಗೆ ಹೊಸ ವೋಲ್ವೋ ಬಸ್ಸುಗಳು ಕೂಡ ಖರೀದಿ ಮಾಡ ಬೇಕಾಗುವುದು. ಸಭೆಯಲ್ಲಿ ಹೊಸ ಬಸ್ಸು ಖರೀದಿಯ ಮೇಲೆ ಕೂಡ ಚರ್ಚೆ ನಡೆದಿದೆ. ಈ ಎಲ್ಲಾ ವಿಷಯಗಳು ಗಮನದಲ್ಲಿಟ್ಟು ಹೊಸ ಬಸ್ಸು ಖರೀದಿ ಮಾಡುವುದು, ಹಳೆ ಬಸ್ಸಿನ ನಿರ್ವಹಣೆ, ಈ ಎಲ್ಲಾ ವಿಷಯಗಳು ಕುರಿತು ಬಹಳಷ್ಟು ಖರ್ಚು ಆಗುತ್ತದೆ. ಆದ್ದರಿಂದ ಬೆಲೆ ಏರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇಂದ್ರ ಸರಕಾರ ಈಗ ಕಾನೂನು ರೂಪಿಸಿ ಈ ರೀತಿಯ ಯೋಜನೆಗಳನ್ನು ನಿಷೇಧಿಸಬೇಕು !