ಸ್ವರ್ಣ ಮಂದಿರದಲ್ಲಿ 3 ಖಲಿಸ್ತಾನಿ ಭಯೋತ್ಪಾದಕರ ಫೊಟೊ ಹಾಕುವಂತೆ ಅಕಾಲ ತಖ್ತನ ಮುಖ್ಯಸ್ಥನ ದೇಶದ್ರೋಹಿ ಬೇಡಿಕೆ !

ಅಮೃತಸರ – ಸಿಖ್ಖರ ‘ಅಕಾಲ ತಖ್ತ್’ನ ಜಥೇದಾರ್ (ಮುಖ್ಯಸ್ಥ) ಗ್ಯಾನಿ ರಘಬೀರ ಸಿಂಗ ಮತ್ತು ‘ಶಿರೋಮಣಿ ಗುರುದ್ವಾರ ಆಡಳಿತ ಸಮಿತಿ’ (ಎಸ್.ಜಿ.ಪಿ.ಸಿ. ಬಳಿ) ಸ್ವರ್ಣ ಮಂದಿರದ ಪರಿಸರದಲ್ಲಿರುವ ಕೇಂದ್ರೀಯ ಸಿಖ್ಖರ ಸಂಗ್ರಹಾಲಯದಲ್ಲಿ ಮೃತಪಟ್ಟ ಖಲಿಸ್ತಾನಿ ಭಯೋತ್ಪಾದಕರಾದ ಹರದೀಪಸಿಂಗ ನಿಜ್ಜರ, ಪರಮಜಿತ ಸಿಂಗ ಪಂಜವಾರ ಮತ್ತು ಗಜಿಂದರ ಸಿಂಗ ಇವರ ಛಾಯಾಚಿತ್ರಗಳನ್ನು ಹಚ್ಚುವಂತೆ ಕೋರಿದ್ದಾರೆ. ಎಸ್.ಜಿ.ಪಿ.ಸಿ. ಮತ್ತು ದಲ ಖಾಲ್ಸಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜತೇದಾರ್ ಗ್ಯಾನಿ ರಘಬೀರ ಸಿಂಗ ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ‘ಅಕಾಲ ತಖ್ತ’ ಈ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ‘ಶಹೀದ್’ ಎಂದು ಸಂಬೋಧಿಸಿದೆ.

‘ಅಕಾಲ ತಖ್ತ್’ನ ಜಥೇದಾರ್ (ಮುಖ್ಯಸ್ಥ) ಗ್ಯಾನಿ ರಘಬೀರ ಸಿಂಗ

ಪಂಜವಾರ ಈ ‘ಖಲಿಸ್ತಾನಿ ಕಮಾಂಡೋ ಫೋರ್ಸ್’ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥರಾಗಿದ್ದನು. ಅವನು ಮೇ 6, 2023 ರಂದು ಪಾಕಿಸ್ತಾನದ ಲಾಹೋರನಲ್ಲಿ ಹತ್ಯೆಗೀಡಾಗಿದ್ದನು. ಭಾರತ ಸರಕಾರವು ಭಯೋತ್ಪಾದಕನೆಂದು ಘೋಷಿಸಿದ ಹರದೀಪಸಿಂಗ ನಿಜ್ಜರ್ ಅವರನ್ನು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರೆಯಲ್ಲಿ ಹತ್ಯೆ ಮಾಡಲಾಯಿತು. ಇದಕ್ಕೆ ಕೆನಡಾ ಭಾರತವನ್ನು ಆರೋಪಿಸಿತ್ತು.

ಖಲಿಸ್ತಾನಿ ಭಯೋತ್ಪಾದಕ ಗಜಿಂದರ್ ಸಿಂಗ ಇವನಿಗೆ ಶ್ರದ್ಧಾಂಜಲಿ ಸಲ್ಲಿಕೆ

‘ಗುರುದ್ವಾರ ಶಹೀದ ಗಂಜ ಬಾಬಾ ಗುರುಬಕ್ಷ್ ಸಿಂಗ್’ನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ಗ್ಯಾನಿ ರಘಬೀರ ಸಿಂಗ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಗಜಿಂದರ ಸಿಂಗನನ್ನು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಜಿಂದರ್ ಸಿಂಗ್ ನೇತೃತ್ವದಲ್ಲಿ ಖಲಿಸ್ತಾನಿ ಭಯೋತ್ಪಾದಕರು 1981 ರಲ್ಲಿ ‘ಇಂಡಿಯನ್ ಏರ್‌ಲೈನ್ಸ್’ ವಿಮಾನವನ್ನು ಹೈಜಾಕ್ ಮಾಡಿದ್ದರು. ಅಪಹರಣದ ನಂತರ ವಿಮಾನವನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಇಳಿಸಲಾಯಿತು. ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಬಿಡುಗಡೆಗಾಗಿ ಅವರು ಈ ಕೃತ್ಯಗಳನ್ನು ಮಾಡಿದ್ದರು. ಗಜಿಂದರ್ ಸಿಂಗ್ ಜುಲೈ 3, 2024 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ನಿಧನ ಹೊಂದಿದ.
ಗಜಿಂದರ ಸಿಂಗನ ಬಗ್ಗೆ ಗ್ಯಾನಿ ರಘಬೀರ ಸಿಂಗ ಮಾತನಾಡಿ, ಅವನು ಎಂದಿಗೂ ಸಿಖ್ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ ಹಾಗೆಯೇ ಅವನು ಸರಕಾರದ ಮುಂದೆ ತಲೆಬಾಗಲಿಲ್ಲ ಎಂದು ಹೇಳಿದ್ದಾರೆ. 1995 ರಲ್ಲಿ, ಅವರು ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆಯಾದಾಗಿನಿಂದ ಅವನು ಅಲೆದಾಡುತ್ತಿದ್ದನು. ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಿಖ್ಖರ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಅವುಗಳ ನಾಯಕರು ಖಲಿಸ್ತಾನ ಪರವಾಗಿದ್ದಾರೆ. ಆದ್ದರಿಂದ ಖಲಿಸ್ತಾನಿವಾದಿಗಳನ್ನು ಅಂತ್ಯಗೊಳಿಸಬೇಕಾಗಿದ್ದರೆ, ಮೊದಲು ಇಂತಹ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು !