ಚಾಮರಾಜನಗರ – ಕೆಲವು ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜುಲೈ 10 ರಂದು ಡಾ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭೇಟಿಯಾಗಿ, ಮನವಿ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಈ ಮನವಿ ಪತ್ರಗಳು 3 ದಿನಗಳ ನಂತರ, ಅಂದರೆ ಜುಲೈ 13 ರಂದು ಕಸದ ಬುಟ್ಟಿಯಲ್ಲಿ ಸಿಕ್ಕಿವೆ. ಇಲ್ಲಿ ನಡೆದ ಕಾಂಗ್ರೆಸ್ ನ ಒಂದು ಸಭೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು.
📌Farmers’ representation letters to Karnataka Chief Minister Siddaramaiah found in the trash
👉This highlights the #Congress party’s sensitivity towards farmers!
👉Despite six decades of power, Congress has done nothing about farmers’ issues, and even now, the situation… pic.twitter.com/OfoAC2U34i
— Sanatan Prabhat (@SanatanPrabhat) July 14, 2024
ಚಾಮರಾಜನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೇ ಮನವಿಗಳನ್ನು ಕೈಯಾರೆ ಸ್ವೀಕರಿಸಿದ್ದರು. ಈ ಕಾರ್ಯಕ್ರಮ ಮುಗಿದ ಮೈದಾನದ ಕಸದ ಬುಟ್ಟಿಯಲ್ಲಿ ಈ ಮನವಿ ಪತ್ರಗಳು ಇತ್ತೀಚೆಗೆ ಸಿಕ್ಕಿವೆ. ಇದು ದುರಹಂಕಾರದ ಪರಮಾವಧಿಯಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.