ನವ ದೆಹಲಿ – ಉತ್ತರ ಪ್ರದೇಶ ಸರಕಾರದಿಂದ ಕಾವಡ ಯಾತ್ರೆಗಾಗಿ ರಸ್ತೆಯ ಕಾಮಗಾರಿಗಾಗಿ ಎಷ್ಟು ಮರಗಳನ್ನು ಕತ್ತರಿಸಿದೆ ? ಇದನ್ನು ಹುಡುಕುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಭಾರತೀಯ ಸರ್ವೇಕ್ಷಣ ಇಲಾಖೆ ಆದೇಶ ನೀಡಿದೆ. ಯಾತ್ರೆಗಾಗಿ ಗಂಗಾ ಕಾಲುವೆಯ ಮೇಲಿನ ಪ್ರದೇಶದಲ್ಲಿನ ಉಪಗ್ರಹ ಮೂಲಕ ತೆಗೆದಿರುವ ಛಾಯಾಚಿತ್ರಗಳನ್ನು ಪ್ರಸ್ತುತಪಡಿಸಲು ನ್ಯಾಯಮಂಡಳಿ ಹೇಳಿದೆ. ಯಾತ್ರಿಕರು ಉತ್ತರಾಖಂಡದಲ್ಲಿನ ಹರಿದ್ವಾರದಿಂದ ಜುಲೈ ೨೨ ರಂದು ನಡೆಯುವ ಶ್ರಾವಣ ಮಾಸದಲ್ಲಿ ಗಂಗಾ ನದಿಯ ನೀರು ಸಂಗ್ರಹಿಸುವುದಕ್ಕಾಗಿ ಹೋಗುವರು. ನ್ಯಾಯಮಂಡಳಿಯ ಆಡಳಿತ ಅಧಿಕಾರಿಗಳು ‘ಅಕ್ರಮವಾಗಿ ಮರಗಳನ್ನು ಕತ್ತರಿಸಲಾಗದು, ಇದರ ಕಾಳಜಿ ವಹಿಸಬೇಕೆಂದು’ ಆದೇಶ ನೀಡಿದ್ದಾರೆ. ‘ಉತ್ತರಾಖಂಡ ಗಡಿಯ ಹತ್ತಿರದ ಮುರಾದಾನಗರ್ (ಜಿಲ್ಲಾ ಗಾಜಿಯಾಬಾದ್) ಅಲ್ಲಿಂದ ಪುರಕಾಜಿ(ಜಿಲ್ಲಾ ಮುಜಫರ್ ನಗರ್) ವರೆಗೆ ೧೧೧ ಕಿಲೋಮೀಟರ್ ಉದ್ದದ ಕಾವಾಡ ಯಾತ್ರೆಯ ಕಾಮಗಾರಿ ನಡೆಸುವುದಕ್ಕಾಗಿ ಗಾಜಿಯಾಬಾದ್, ಮೆರಠ ಮತ್ತು ಮುಜಫ್ಫರನಗರ ಈ ೩ ಅರಣ್ಯ ಇಲಾಖೆಯ ಸಂರಕ್ಷಿತ ಅರಣ್ಯಕ್ಷೇತ್ರದಲ್ಲಿನ ೧ ಲಕ್ಷ ೧೨ ಸಾವಿರ ಮರಗಳನ್ನು ಕತ್ತರಿಸುವ ಆದೇಶ ನೀಡಲಾಗಿತ್ತು’ ಎಂದು ಕೆಲವು ಸಮಾಚಾರ ಪತ್ರಗಳಲ್ಲಿ ವಾರ್ತೆ ಪ್ರಸಾರವಾಗಿತ್ತು. ನ್ಯಾಯಮಂಡಳಿಯಿಂದ ಒಂದು ವಾರ್ತಾಪತ್ರೆಯ ಈ ವರದಿಯ ಆಧಾರದಲ್ಲಿ ಮೊಕ್ಕದಮೆ ಹೂಡಿದೆ.
ಸಂಪಾದಕೀಯ ನಿಲುವುಈ ಆರೋಪದಲ್ಲಿ ಎಷ್ಟು ಸತ್ಯ ಇದೆ ? ಇದು ಈಗ ಬೆಳಕಿಗೆ ಬರಲಿದೆ; ಆದರೆ ಇಂತಹ ಘಟನೆಯ ಸಮಯದಲ್ಲಿ ಹಿಂದೂ ಹಬ್ಬ ಮತ್ತು ಪರಂಪರೆಯನ್ನು ‘ಪರಿಸರವಿರೋಧಿ’ ಎಂದು ಹೇಳಿ ಹಿಂದೂ ಧರ್ಮವನ್ನೇ ಟೀಕಿಸಲಾಗುತ್ತದೆ. ಈಗ ಇಂತಹ ಹಿಂದೂ ದ್ವೇಷಿಗಳ ದ್ವಿಮುಖ ಬೆಳಕಿಗೆ ತರುವುದಕ್ಕಾಗಿ ಹಿಂದೂ ಸಮಾಜ ಸಂಘಟಿತರಾಗಿ ಧ್ವನಿಯತ್ತಬೇಕು ! |