YS Jagan Mohan Reddy : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೊಲೆ ಯತ್ನ; ದೂರು ದಾಖಲು !

ಅಮರಾವತಿ – ವೈ.ಎಸ್.ಆರ್ ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರೊಂದಿಗೆ 2 ಐ.ಪಿ.ಎಸ್. ಅಧಿಕಾರಿಗಳ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಅಪರಾಧ ದಾಖಲಾಗಿದೆ. ಈ ಪ್ರಕರಣದಲ್ಲಿ ಆಡಳಿತಾರೂಢ ಟಿಡಿಪಿ ಶಾಸಕ ರಘುರಾಮ ಕೃಷ್ಣ ರಾಜು ಅವರು ದೂರು ದಾಖಲಿಸಿದ್ದರು.

1. ಶಾಸಕ ರಘುರಾಮ ಕೃಷ್ಣ ರಾಜು ಅವರನ್ನು 2021ರಲ್ಲಿ ಬಂಧಿಸಲಾಗಿತ್ತು. ‘ನನ್ನ ಮೇಲೆ ‘ಸುಳ್ಳು ಅಪರಾಧ ದಾಖಲಿಸಿ ನನ್ನನ್ನು ಬಂಧಿಸಲಾಯಿತು’ ಎಂದು ಶಾಸಕ ರಾಜು ಹೇಳಿದ್ದಾರೆ. ಅವರು ತಮ್ಮ ದೂರಿನಲ್ಲಿ, “ನನ್ನ ಕೊಠಡಿಯಲ್ಲೇ ಪೀಡಿಸಲಾಯಿತು. ಅಂದಿನ ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿ ಅವರ ಹೇಳಿಕೆಯ ಮೇರೆಗೆ ಪೊಲೀಸ ಅಧಿಕಾರಿ ಪಿ.ವಿ. ಸುನೀಲ ಕುಮಾರ ಸಹಿತ ಇತರೆ ಕೆಲವು ಪೊಲೀಸ ಅಧಿಕಾರಿಗಳು ನನ್ನನ್ನು ಬೆಲ್ಟ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ. ನನಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿರುವಾಗಲೂ ನನಗೆ ಔಷಧ ಸೇವಿಸಲು ಅವಕಾಶ ನೀಡಿರಲಿಲ್ಲ.” ಎಂದು ಹೇಳಿದ್ದಾರೆ.

2. ಐಪಿಎಸ್ ಅಧಿಕಾರಿ ಪಿ.ವಿ. ಸುನೀಲ ಕುಮಾರ ಮತ್ತು ಪಿ.ಎಸ್.ಆರ್. ಸೀತಾರಾಮಾಂಜನೇಯುಲು, ಹಾಗೂ ನಿವೃತ್ತ ಪೊಲೀಸ ಅಧಿಕಾರಿ ಆರ್. ವಿಜಯ ಪಾಲ ಮತ್ತು ಜಿ. ಪ್ರಭಾವತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಗೂಂಡಾ ಪ್ರವೃತ್ತಿಯ ಜನಪ್ರತಿನಿಧಿ ಒಂದು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆ !