ಮತಾಂಧರಿಂದ ಅಮಳನೇರನಲ್ಲಿ ಪ್ಯಾಸೆಂಜರ್ ರೈಲು ತಡೆದು ಕಲ್ಲು ತೂರಾಟ !

  • ಮತಾಂಧ ಮುಸಲ್ಮಾನರು ೮ ಸಲ ಚೈನ್ ಎಳೆದು ರೈಲು ನಿಲ್ಲಿಸಿದರು !

  • ಸತತ 20 ನಿಮಿಷ ಕಲ್ಲು ತೂರಾಟ

  • ತಡವಾಗಿ ದೂರು ದಾಖಲಿಸಿದ ರೈಲ್ವೇ ಪೊಲೀಸರು !

ಜಲಗಾವ, ಜುಲೈ ೧೩ ,(ವಾರ್ತೆ.) – ಜಿಲ್ಲೆಯ ಅಮಳನೆರ ಇಲ್ಲಿಯ ಭೋರಟೇಕ ರೈಲ್ವೆ ಸ್ಟೇಷನ್ ಹತ್ತಿರ ಭೂಸಾವಳ-ನಂದುರಬಾರ್ ಪ್ಯಾಸೆಂಜರ್ (ಗಾಡಿ ಸಂಖ್ಯೆ ೦೯೦೭೮ ) ಗಾಡಿಯನ್ನು ೮ ಸಲ ಚೈನ್ ಎಳೆದು ಮತಾಂಧ ಮುಸಲ್ಮಾನರು ರೈಲನ್ನು ತಡೆದರು. ಅದರ ನಂತರ ರೈಲಿನಿಂದ ಇಳಿದ ನೂರಾರು ಮತಾಂಧ ಮುಸಲ್ಮಾನರು ೨೦ ನಿಮಿಷ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿಲ್ಲ, ಆದರೆ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಅಮಳನೆರ ರೈಲ್ವೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ಜುಲೈ ೧೨ ರಂದು ಅಮಳನೇರ ತಾಲೂಕಿನಲ್ಲಿನ ಧಾರ ಬೆಟ್ಟದ ಮೇಲಿನ ದರ್ಗಾದಲ್ಲಿ ಉರೂಸ ನಡೆಯುತ್ತಿರುವುದರಿಂದ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನರು ಸೇರಿದ್ದರು. ಭೂಸಾವಳದಿಂದ ನಂದೂರಬಾರ ಕಡೆಗೆ ಹೋಗುವ ರೈಲು ಅಮಳನೆರ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ ೧೦.೫೨ ಕ್ಕೆ ಬಿಟ್ಟಿತು. ಈ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಕುಳಿತಿದ್ದರು. ಬೆಳಿಗ್ಗೆ ೧೦.೫೫ ನಿಮಿಷಕ್ಕೆ ಭೋರಟೆಕ ರೈಲ್ವೆ ನಿಲ್ದಾಣದ ಹತ್ತಿರ ರೈಲು ಬರುತ್ತಲೇ ಕೆಲವು ಮತಾಂಧರು ಚೈನ್ ಎಳೆದರು. ಈ ರೈಲು ಇಲ್ಲಿ ನಿಲ್ಲುವುದಿಲ್ಲ, ಆದರೂ ಕೂಡ ರೈಲು ಇಲ್ಲಿ ೨೦ ನಿಮಿಷ ನಿಲ್ಲಿಸಬೇಕಾಯಿತು.

ಈ ಘಟನೆಯ ಮಾಹಿತಿ ದೊರೆತನಂತರ ಓರ್ವನು ಪೊಲೀಸರಿಗೆ ಇದರ ಮಾಹಿತಿ ನೀಡಿದನು. ಪೊಲೀಸರು ಘಟನಾ ಸ್ಥಳಕ್ಕೆ ಬರುವವರೆಗೆ ಮತಾಂಧ ಮುಸಲ್ಮಾನರು ಅಲ್ಲಿಂದ ಓಡಿ ಹೋಗಿದ್ದರು. ಹಾಗೂ ಪ್ಯಾಸೆಂಜರ್ ರೈಲು ಕೂಡ ಮುಂದೆ ಸಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳು ಆಗದೇ ಇದ್ದರೂ, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ನೂರಾರು ಸಂಖ್ಯೆಯ ಮತಾಂಧರು ಕಾಣುತ್ತಿದ್ದಾರೆ. ಈ ಸಮಯದಲ್ಲಿ ರೈಲಿನಲ್ಲಿನ ಪ್ರಯಾಣಿಕರು ಭಯದಿಂದ ಕಿರಿಚಾಡುತ್ತಿದ್ದಾರೆ. ಓರ್ವ ಮಹಿಳೆ ಇತರ ಪ್ರಯಾಣಿಕರಿಗೆ ಕಿಟಕಿಗಳನ್ನು ಮುಚ್ಚಲು ಹೇಳುತ್ತಿದ್ದಾರೆ.

ಮತಾಂಧರು ಅಲ್ಲ, ಪ್ರಯಾಣಿಕರು ಕಲ್ಲು ತೂರಾಟ ನಡೆಸಿರುವುದು ಎಂದು ವಾರ್ತಾ ವಾಹಿನಿಗಳಿಂತ ತಪ್ಪಾದ ಮಾಹಿತಿ !

ಇದರ ಬಗ್ಗೆ ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಗಳ ಜೊತೆಗೆ ಓರ್ವ ಪ್ರತ್ಯಕ್ಷದರ್ಶಿಯು ಮಾತನಾಡುವಾಗ, ”ಧಾರ ಇಲ್ಲಿಯ ಬೆಟ್ಟದ ಮೇಲಿನ ದರ್ಗಾದಲ್ಲಿ ಪ್ರತಿವರ್ಷ ಊರುಸ ನಡೆಯುತ್ತದೆ. ಇಲ್ಲಿ ಹೋಗುವುದಕ್ಕಾಗಿ ರೈಲಿನಿಂದ ಪ್ರಯಾಣ ಮಾಡುವ ಮುಸಲ್ಮಾನರು ಪ್ರತಿವರ್ಷ ಭೋರಟೆಕ್ ರೈಲು ನಿಲ್ದಾಣದ ಹತ್ತಿರ ರೈಲಿನ ಚೈನು ಎಳೆದು ಭೂಸಾವಳ-ನಂದೂರಬಾರ್ ಪ್ಯಾಸೆಂಜರ್ ರೈಲು ಮತ್ತು ನಂತರ ಇತರ ಬರುವ ಎಕ್ಸ್ಪ್ರೆಸ್ ನಿಲ್ಲಿಸುತ್ತಾರೆ. ಈ ವರ್ಷ ಅವರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ರೈಲು ಹೋದ ನಂತರ ಮಧ್ಯಾಹ್ನ ೧೨ ಗಂಟೆಗೆ ಇದೇ ಮಾರ್ಗವಾಗಿ ಬರುವ ಛಪರಾ-ಸೂರತ ಮಾರ್ಗದ ತಾಪಿಗಂಗಾ ಎಕ್ಸ್ಪ್ರೆಸ್ ರೈಲು ಕೂಡ ಚೈನಿ ಎಳೆದು ನಿಲ್ಲಿಸಿದರು. ರೈಲಿಗೆ ವಿಳಂಬವಾಗುವುದರಿಂದ ಪ್ರಯಾಣಿಕರು ಅಸಮಾಧಾನಗೊಂಡು ‘ಪ್ರಯಾಣಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ವಾರ್ತಾ ವಾಹಿನಿಗೆ ಮತ್ತು ದೈನಿಕಗೆ ನೀಡಿರುವ ಸಮಾಚಾರ ಸಂಪೂರ್ಣವಾಗಿ ತಪ್ಪಾಗಿದೆ ಎಂದು ತಿಳಿಸಿದರು. ಪ್ರತ್ಯಕ್ಷದಲ್ಲಿ ಚೈನ್ ಎಳೆದು ರೈಲು ನಿಲ್ಲಿಸಿ ಮತಾಂಧರು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪೊಲೀಸರಿಂದ ೨೪ ಗಂಟೆಗಳ ನಂತರ ದೂರು ದಾಖಲು !

ಬಹಳಷ್ಟು ಸಾರಿ ಭೂಸಾವಳ-ನಂದುರಬಾರ್ ಪ್ಯಾಸೆಂಜರ್ ರೈಲು ಮತ್ತು ಇತರ ಎಕ್ಸ್ಪ್ರೆಸ್ ಗಾಡಿಗಳ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮತಾಂಧರಿಂದ ನಡೆದಿದೆ. ಇಲ್ಲಿಯವರೆಗೆ ದೂರು ನೀಡದೆ ಇರುವುದರಿಂದ ರೈಲ್ವೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಈ ಘಟನೆಗೆ ೨೪ ಗಂಟೆ ಕಳೆದ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಘಟಿಸಿದ ನಂತರ ದೂರು ದಾಖಲಿಸಿ ತಕ್ಷಣ ವಿಚಾರಣೆ ನಡೆಸುತ್ತಿದ್ದರೇ ಅಪರಾಧಿಗಳನ್ನು ಬಂಧಿಸಬಹುದಾಗಿತ್ತು, ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಮತಾಂಧರು ಹಿಂದುಗಳ ಜೀವಕ್ಕೆ ಅಪಾಯ ಮಾಡುತ್ತಿದ್ದರೂ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಕ್ಷಿಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಧೈರ್ಯ ತೋರುತ್ತಿಲ್ಲ, ಇದೇ ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ !

ಸ್ವಾತಂತ್ರ್ಯದ ೭೭ ವರ್ಷದ ನಂತರ ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಿಂದುತ್ವನಿಷ್ಠ ಸರಕಾರ ಇದ್ದರೂ ಕೂಡ ಹಿಂದುಗಳು ಮತಾಂಧರ ಕರಿ ನೆರಳಿನಲ್ಲಿ ಇದ್ದಾರೆ ಇದನ್ನು ಸಾಬೀತಪಡಿಸುವ ಇದು ಇನ್ನೊಂದು ಘಟನೆ ಆಗಿದೆ. ಸರಕಾರ ಮತ್ತು ಹಿಂದುಗಳು ಎಂದು ಜಾಗೃತವಾಗುವವರು ?

‘ದೇಶದಲ್ಲಿನ ಮುಸಲ್ಮಾನರು ಹೆದರಿದ್ದಾರೆ’, ಎಂದು ಕೂಗಾಡುವವರು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ?