ಕಟ್ಮಾಂಡು (ನೇಪಾಳ) : ನೇಪಾಳದ ಮಾವೋವಾದಿ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಂಸತ್ತಿನಲ್ಲಿ ವಿಶ್ವಾಸಮತ ಪ್ರಸ್ತಾವದ ಸಮಯದಲ್ಲಿ ಬಹುಮತ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರಚಂಡ ಇವರು ಪ್ರಧಾನಮಂತ್ರಿ ಸ್ಥಾನ ತ್ಯೆಜಿಸಬೇಕಾಗಿದೆ. ಜುಲೈ ೧೨, ೨೦೨೪ ರಂದು ಸಂಸತ್ತಿನಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ನಡೆದ ಮತದಾನದಲ್ಲಿ ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಕೇವಲ ೬೩ ಮತಗಳು ದೊರೆತಿದ್ದು, ಅವರ ವಿರುದ್ಧ ೧೯೪ ಮತಗಳು ದೊರೆತವು.
ಪ್ರಚಂಡ ಇವರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ನೇಪಾಳದ ಮಾಜಿ ಪ್ರಧಾನಮಂತ್ರಿ ಕೆಪಿ ಶರ್ಮಾ ಒಲಿ ಇವರು ಮಹತ್ವದ ಪಾತ್ರ ವಹಿಸಿದ್ದಾರೆ. ಇಲ್ಲಿಯವರೆಗೆ ಒಲಿ ಇವರ ‘ನೇಪಾಳ ಕಮ್ಯುನಿಸ್ಟ್ ಪಾರ್ಟಿ’ (‘ಎಮಾಲೆ’ಯು) ಪ್ರಚಂಡ ಇವರ ‘ನೇಪಾಳ ಕಮ್ಯುನಿಸ್ಟ್ ಪಾರ್ಟಿ-ಮಾವೋವಾದಿ’ ಪಕ್ಷಕ್ಕೆ ಬೆಂಬಲ ನೀಡಿದ್ದರು. ನೇಪಾಳದಲ್ಲಿ ೨೦೨೨ ರಲ್ಲಿ ನಡೆದಿರುವ ಚುನಾವಣೆಯಲ್ಲಿ, ಯಾವುದೇ ಪಕ್ಷಕ್ಕೆ ಸರಕಾರ ರಚಿಸಲು ಬಹುಮತ ಇರಲಿಲ್ಲ. ಈ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ಎಲ್ಲಕ್ಕಿಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಅದಕ್ಕೆ ೮೯ ಸ್ಥಾನ ಸಿಕ್ಕಿತ್ತು ಹಾಗೂ ಒಲಿ ಇವರ ಪಕ್ಷಕ್ಕೆ ೭೯ ಸ್ಥಾನಗಳು ದೊರೆತಿದ್ದವು. ಪ್ರಚಂಡ ಇವರ ಪಕ್ಷಕ್ಕೆ ಕೇವಲ ೩೦ ಸ್ಥಾನ ದೊರೆತಿದ್ದವು, ಆದರೂ ಒಲಿ ಇವರ ಬೆಂಬಲದಿಂದ ಪ್ರಚಂಡ ಇವರ ಮೈತ್ರಿ ಸರಕಾರ ರಚಿಸಿದ್ದರು. ಈ ಸರಕಾರ ೧೯ ತಿಂಗಳು ಅಧಿಕಾರದಲ್ಲಿತ್ತು.
ನೇಪಾಳದಲ್ಲಿ ಮತ್ತೊಮ್ಮೆ ಸಂವಿಧಾನ ತಿದ್ದುಪಡಿಯ ಚರ್ಚೆ !
೨೦೦೮ ರಲ್ಲಿ ರಾಜಮನೆತನ ಸಂಪೂರ್ಣವಾಗಿ ಅಂತ್ಯವಾದ ನಂತರದಿಂದ ನೇಪಾಳದ ಆಂತರಿಕ ರಾಜಕಾರಣ ಅಸ್ಥಿರಗೊಂಡಿದೆ. ೨೦೦೮ ರಿಂದ ೨೦೨೪ ಈ ಸಮಯದಲ್ಲಿ ನೇಪಾಳದಲ್ಲಿ ೧೩ ಸಲ ಪ್ರಧಾನ ಮಂತ್ರಿ ಬದಲಾಗಿದ್ದಾರೆ. ಈ ಕಾಲವಧಿಯಲ್ಲಿ ನೇಪಾಳದ ಸಂವಿಧಾನದಲ್ಲಿ ಕೂಡ ಬದಲಾವಣೆ ಆಗಿದೆ. ಪ್ರಚಂಡ ಇವರ ಸರಕಾರ ಪತನವಾದ ನಂತರ ಮತ್ತೊಮ್ಮೆ ನೇಪಾಳದಲ್ಲಿ ಸಂವಿಧಾನ ತಿದ್ದುಪಡಿಯ ಚರ್ಚೆ ಆರಂಭವಾಗಿದೆ.