ಹಾವೇರಿ – ಹಿಂದೂ ಮಹಿಳೆಯರ ರಕ್ಷಣೆಗಾಗಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ 4 ಕಡೆ ಶ್ರೀರಾಮ ಸೇನೆ ಪ್ರಾರಂಭ ಮಾಡಿರುವ ಸಹಾಯವಾಣಿ ಸಂಖ್ಯೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1. ಪ್ರಮೋದ ಮುತಾಲಿಕ ಮಾತನಾಡಿ, ನೇಹಾ ಹಿರೇಮಠ ಹತ್ಯೆಯ ನಂತರ ಒಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ಇಂತಹ 5 ಘಟನೆಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶ್ರೀ ರಾಮ ಸೇನೆಯು ಸಹಾಯವಾಣಿಯನ್ನು ಪ್ರಾರಂಭಿಸಿತು. ಅದರ ನಂತರ 300 ಕರೆಗಳು ಬಂದವು. ಕೊಲೆ ಬೆದರಿಕೆ ಮತ್ತು ಸಹಾಯವಾಣಿಯನ್ನು ಮುಚ್ಚುವ ಬೆದರಿಕೆಗಳು ಕೂಡ ಬಂದವು. ಇದಲ್ಲದೇ ಲವ್ ಜಿಹಾದ್ ನಲ್ಲಿ ಸಿಲುಕಿದ್ದ ಹುಡುಗಿಯ ಮನೆಯವರ ದೂರವಾಣಿ ಕರೆ ಬಂದಿದೆ. ಪೊಲೀಸರ ನಿಷ್ಕ್ರಿಯತೆಯ ಬಗ್ಗೆಯೂ ಈ ಮೂಲಕ ಮಾಹಿತಿ ಪಡೆಯಲಾಗಿದೆ.
2. ಶ್ರೀ. ಮುತಾಲಿಕ ಮಾತನಾಡಿ, ಸಹಾಯವಾಣಿಯಲ್ಲಿ 5 ಜನರ ಗುಂಪು ಇದೆ. ಇದರಲ್ಲಿ ವೈದ್ಯರು, ವಕೀಲರು ಮತ್ತು ಸಲಹೆಗಾರರು ಸೇರಿದ್ದಾರೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸವನ್ನು ಶ್ರೀರಾಮಸೇನೆ ಕಾರ್ಯಕರ್ತರು ಮಾಡುತ್ತಿದ್ದಾರೆ. ‘ಲವ್ ಜಿಹಾದ್’ನಲ್ಲಿ ಸಿಲುಕಿರುವ ಹಲವು ಹಿಂದೂ ಮಹಿಳೆಯರನ್ನು ಶ್ರೀರಾಮಸೇನೆ ರಕ್ಷಿಸಿದೆ. ಧಾರವಾಡ ಜಿಲ್ಲೆಯ 50 ವಿದ್ಯಾರ್ಥಿಗಳಿಗೆ ತ್ರಿಶೂಲ ದೀಕ್ಷೆ ನೀಡಲಾಗಿದೆ ಎಂದು ಹೇಳಿದರು.