ಢಾಕಾ – ಇಲ್ಲಿ ಅವಾಮಿ ಲೀಗ್ ನ ಇಸ್ಲಾಮಿ ಕಟ್ಟರವಾದಿಗಳು ಹಿಂದುಗಳ ಮೇಲೆ ನಡೆಸಿರುವ ದಾಳಿಯಲ್ಲಿ ೬೦ ಹಿಂದುಗಳು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಹಿಂದುಗಳ ಮನೆಗಳು ನೆಲೆಸಮ ಮಾಡಲಾಗಿದ್ದು ದೇವಸ್ಥಾನನ್ನು ಕೂಡ ಗುರಿ ಮಾಡಲಾಗಿದೆ.
೧. ಇದರ ಬಗ್ಗೆ ದೊರೆತಿರುವ ಮಾಹಿತಿಯ ಪ್ರಕಾರ ಜುಲೈ ೧೦, ೨೦೨೪ ಈ ದಿನದಂದು ಸ್ಥಳೀಯ ನಗರ ಸೇವಕ ಮಹಮ್ಮದ್ ಔವಾಲ್ ಹುಸೇನ್ ಮತ್ತು ಅವನ ಬೆಂಬಲಿಗರು ಅಲ್ಪಸಂಖ್ಯಾತ ಹಿಂದೂಗಳು ವಾಸಿಸುತ್ತಿರುವ ಮಿರಂಜಿಲಾ ಕಾಲೋನಿಯ ಮೇಲೆ ದಾಳಿ ನಡೆಸಿದ್ದಾರೆ.
೨. ಈ ಸಮಯದಲ್ಲಿ ಇಸ್ಲಾಮಿ ಕಟ್ಟರವಾದಿಗಳಿಂದ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿದೆ ಮತ್ತು ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಈ ಸಮಯದಲ್ಲಿ ದೇವಸ್ಥಾವನ್ನು ಕೂಡ ಗುರಿ ಮಾಡಲಾಯಿತು.
೩. ಗಾಯಗೊಂಡಿರುವ ಹಿಂದುಗಳನ್ನು ಢಾಕಾದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಸೇರಿಸಲಾಗಿದೆ.
೪. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ಆಕ್ರಮಣ ನಡೆಯುವುದು ಇದು ಸಾಮಾನ್ಯವಾಗಿದೆ. ಈ ವರ್ಷದ ಆರಂಭದ ಜನವರಿ ತಿಂಗಳಲ್ಲಿ ಬಾಂಗ್ಲಾದೇಶದ ಚುನಾವಣೆಯ ನಂತರ ಅನೇಕ ಹಿಂದೂಗಳು ಅವರ ಮನೆಯನ್ನು ತೊರೆಯಬೇಕಾಯಿತು. ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು ಮತ್ತು ಲೂಟಿ ಮಾಡಲಾಗಿತ್ತು.
ಸಂಪಾದಕೀಯ ನಿಲುವುಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನಮಂತ್ರಿ ಶೇಖ ಹಸಿನಾ ಇವರದು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಇದೆ. ಹೀಗೆ ಇದ್ದರೂ ಕೂಡ ಕೇಂದ್ರ ಸರಕಾರ ಅಲ್ಲಿಯ ಹಿಂದೂಗಳ ಸುರಕ್ಷತೆಗಾಗಿ ಶೇಖ ಹಸೀನಾ ಇವರ ಮೇಲೆ ಒತ್ತಡ ಏಕೆ ತರುತ್ತಿಲ್ಲ ? ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ಕಟ್ಟರವಾದಿಗಳೇ ಹಿಂದುಗಳ ಮೇಲೆ ಅನ್ಯಾಯ ಮಾಡುತ್ತಿದ್ದರೇ ಅಲ್ಲಿಯ ಹಿಂದುಗಳ ಸ್ಥಿತಿ ಎಷ್ಟು ಶೋಚನಿಯವಾಗಿದೆ, ಇದರ ಬಗ್ಗೆ ಯೋಚನೆ ಮಾಡದೆ ಇರುವುದೇ ಒಳಿತು ! |