ಜೈಪುರ (ರಾಜಸ್ಥಾನ) – ರಾಜಸ್ಥಾನದ ಬಿಜೆಪಿ ಸರ್ಕಾರವು ರಾಜ್ಯದ ದೇವಾಲಯಗಳ ಪುನರುಜ್ಜೀವನಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ನೀಡಿದೆ. ರಾಜ್ಯದ ಸಿಕಾರ್‌ನಲ್ಲಿರುವ ಪ್ರಸಿದ್ಧ ಖಾಟೂ ಶ್ಯಾಮ್ ದೇವಾಲಯದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದಲ್ಲಿ ಭಕ್ತರಿಗಾಗಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಕಾಶಿ ವಿಶ್ವನಾಥ ಮತ್ತು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನ ಇಲ್ಲಿಯ ಸುಸಜ್ಜಿತ ಮಾರ್ಗದ ಅನುಸಾರ (ಕಾರಿಡಾರ್ ಅನುಸಾರ) ಇಲ್ಲಿ ಅಭಿವೃದ್ಧಿ ಮಾಡಲಾಗುವುದು.
ಇದಲ್ಲದೇ ರಾಜಸ್ಥಾನದಲ್ಲಿಯ ಪ್ರಸಿದ್ಧ ಜೀನಮಾತಾ ದೇವಸ್ಥಾನವನ್ನೂ ಅಭಿವೃದ್ಧಿಪಡಿಸಲಾಗುವುದು. ಶಾಕಂಭರಿ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಲಾಗುವುದು. ರಾಜ್ಯದಲ್ಲಿಯ 600 ದೇವಸ್ಥಾನಗಳಿಗೆ 13 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ದೀಪಾವಳಿ ಮತ್ತು ಶ್ರೀರಾಮ ನವಮಿ ಹಬ್ಬಗಳ ಸಂದರ್ಭದಲ್ಲಿ ದೇವಾಲಯಗಳನ್ನು ಅಲಂಕರಿಸಲಾಗುತ್ತದೆ.
ಸಂಪಾದಕೀಯ ನಿಲುವುಸರ್ಕಾರವು ದೇವಾಲಯಗಳನ್ನು ಸರಕಾರಿಕರಣಗೊಳಿಸಿದ್ದರೆ, ಅದನ್ನು ಹಿಂಪಡೆದು ದೇವಾಲಯಗಳನ್ನು ಭಕ್ತರ ನಿಯಂತ್ರಣಕ್ಕೆ ನೀಡಬೇಕು ! |