Shivani Raja : ಲಂಡನ್ : ಕೈಯಲ್ಲಿ ಭಗವದ್ಗೀತೆ ಹಿಡಿದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ ಶಿವಾನಿ ರಾಜಾ !

ಎಲ್ಲೆಡೆಯಿಂದ ಪ್ರಶಂಸೆ

ಲಂಡನ್ (ಇಂಗ್ಲೆಂಡ್) – ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷಕ್ಕೆ ದೊಡ್ಡ ವಿಜಯ ಸಿಕ್ಕಿದ್ದರೂ ಲೆಸ್ಟರ್ ಪೂರ್ವದಲ್ಲಿ ನೀವಳ್ಳ ೩೭ ವರ್ಷದ ನಂತರ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಲೆಸ್ಟರ್ ಪೂರ್ವ ಕ್ಷೇತ್ರವು ಲೇಬರ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಇಲ್ಲಿಂದ ಭಾರತೀಯ ಮೂಲದ ೨೯ ವರ್ಷದ ಶಿವಾನಿ ರಾಜಾ ಅವರು ಆಯ್ಕೆ ಆಗಿದ್ದಾರೆ. ಶಿವಾನಿ ಅವರು ಶ್ರೀ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಸಂಸತ್ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು, ಅವರ ಈ ವಿಡಿಯೋ ಎಲ್ಲೆಡೆ ಪ್ರಸಾರವಾಗಿದೆ. ಶಿವಾನಿ ಅವರು ಸ್ವತಃ ಎಕ್ಸ್ ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ಹಿಂದುಗಳು ಅವರನ್ನು ಪ್ರಶಂಸಿಸುತ್ತಿದ್ದಾರೆ.

೧. ವಿಡಿಯೋ ಜೊತೆಗೆ ಎರಡು ಮಾತನ್ನು ಪೋಸ್ಟ್ ಮಾಡಿದ ಅವರು, ಲೆಸ್ಟರ್ ಪೂರ್ವದ ಪ್ರತಿನಿಧಿತ್ವ ಮಾಡುವುದಕ್ಕಾಗಿ ಇಂದು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸುವುದು ನನಗೆ ಗೌರವದ ಕ್ಷಣವಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ನನಗೆ ಅಭಿಮಾನ ಎನಿಸಿತು ಎಂದು ಬರೆದಿದ್ದಾರೆ.

೨. ಶಿವಾನಿ ರಾಜಾ ಅವರಿಗೆ ೧೪, ೫೨೬ ಮತಗಳು ಸಿಕ್ಕಿದ್ದು, ತಮ್ಮ ಪ್ರತಿಸ್ಪರ್ಧಿಯನ್ನು ೪, ೪೨೬ ಮತಗಳಿಂದ ಸೋಲಿಸಿದ್ದಾರೆ.

೩. ಸಂಸದೆ ಶಿವಾನಿ ರಾಜಾ ಅವರ ತಂದೆ ತಾಯಿ ಗುಜರಾತಿನವರಾಗಿದ್ದು, ಶಿವಾನಿ ಅವರು ಲೆಸ್ಟರ್ ನಲ್ಲಿ ೧೯೯೫ ರಲ್ಲಿ ಜನಿಸಿದ್ದರು.

೪. ಯುನೈಟೆಡ್ ಕಿಂಗ್ಡಂನಲ್ಲಿ ೬೫೦ ಸ್ಥಾನಗಳಿಗಾಗಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಲೇಬರ್ ಪಕ್ಷ ೪೧೨ ಸ್ಥಾನಗಳನ್ನು ಗೆದ್ದಿದೆ ಹಾಗೂ ಕನ್ಸರ್ವೇಟಿವ್ ಪಕ್ಷಕ್ಕೆ ಕೇವಲ ೧೨೧ ಸ್ಥಾನಗಳು ದೊರೆತಿವೆ. ಭಾರತೀಯ ಮೂಲದ ಋಷಿ ಸುನಕ್ ಅವರಿಗೆ ಈ ಸೋಲಿನ ನಂತರ ಪ್ರಧಾನಮಂತ್ರಿ ಸ್ಥಾನವನ್ನು ತೆರೆವುಗೊಳಿಸಬೇಕಾಯಿತು, ಹಾಗೂ ಕನ್ಸರ್ವೇಟಿವ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರು ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದರು.

ಸಂಪಾದಕೀಯ ನಿಲುವು

ಶಿವಾನಿ ರಾಜಾ ಅವರು ಹಿಂದೂ ಧರ್ಮ ಮತ್ತು ಹಿಂದೂಗಳ ರಕ್ಷಣೆಗಾಗಿ ಕೂಡ ಕಾರ್ಯ ಮಾಡಬೇಕೆಂಬುದು ಅಪೇಕ್ಷೆ !